ETV Bharat / state

ನಿರ್ದೇಶಕ ಸ್ಥಾನಕ್ಕೆ ನಕಲಿ ದಾಖಲೆ ಸೃಷ್ಟಿ: ಹೆಬ್ಬಾಳ್ಕರ್ ಸಹೋದರನಿಗೆ ಸಂಕಷ್ಟ!

author img

By

Published : Feb 19, 2020, 12:07 PM IST

Updated : Feb 19, 2020, 1:04 PM IST

ಮೋದಗಾ ಪಿಕೆಪಿಎಸ್ ನಿರ್ದೇಶಕರಾಗಲು ಚೆನ್ನರಾಜ್ ಹಟ್ಟಿಹೊಳಿ ಅವರು ಮೋದಗಾ ನಿವಾಸಿ ಎಂದು ನಕಲಿ ರಹವಾಸಿ ಪ್ರಮಾಣ ಪತ್ರ ಪಡೆದಿದ್ದರು. ಕಂದಾಯ ಅಧಿಕಾರಿಗಳ ಸಹಿ ಇರಬೇಕಿದ್ದ ಈ ಪ್ರಮಾಣ ಪತ್ರದ ಮೇಲೆ ಮೋದಗಾ ಗ್ರಾಪಂ ಸದಸ್ಯ ಬಾಬು ಕಾಳೆ ಎಂಬಾತ ಸಹಿ ಮಾಡಿ ರಹವಾಸಿ ಪ್ರಮಾಣ ಪತ್ರ ನೀಡಿದ್ದರು.

Laxmi Hebbalkar brother create Fake document for director post
ನಿರ್ದೇಶಕ ಸ್ಥಾನಕ್ಕೆ ನಕಲಿ ದಾಖಲೆ ಸೃಷ್ಟಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ನಕಲಿ ದಾಖಲೆ ಸೃಷ್ಟಿಸಿ ಮೋದಗಾ ಪಿಕೆಪಿಎಸ್ ನಿರ್ದೇಶಕರಾಗಲು ಮುಂದಾಗಿದ್ದರಿಂದ ಅವರಿಗೀಗ ಸಂಕಷ್ಟ ಎದುರಾಗಿದೆ.

ಚೆನ್ನರಾಜ್ ಅವರು ಮೋದಗಾ ನಿವಾಸಿ ಎಂದು ನಕಲಿ ರಹವಾಸಿ ಪ್ರಮಾಣ ಪತ್ರ ಪಡೆದಿದ್ದರು. ಕಂದಾಯ ಅಧಿಕಾರಿಗಳ ಸಹಿ ಇರಬೇಕಿದ್ದ ಈ ಪ್ರಮಾಣ ಪತ್ರದ ಮೇಲೆ ಮೋದಗಾ ಗ್ರಾಪಂ ಸದಸ್ಯ ಬಾಬು ಕಾಳೆ ಎಂಬಾತ ಸಹಿ ಮಾಡಿ ರಹವಾಸಿ ಪ್ರಮಾಣ ಪತ್ರ ನೀಡಿದ್ದರು.

Laxmi Hebbalkar brother create Fake document for director post
ಮೊಕದ್ದಮೆ ದಾಖಲಿಸಲು ಸೂಚನೆ

ರಹವಾಸಿ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳೇ ನೀಡಬೇಕು ಎಂಬ ನಿಯಮವಿದ್ದರೂ ಚನ್ನರಾಜ ಹಟ್ಟಿಹೊಳಿ ವಿಚಾರದಲ್ಲಿ ಈ ನಿಯಮ ಉಲ್ಲಂಘಿಸಲಾಗಿದೆ. ಚನ್ನರಾಜ ಹಟ್ಟಿಹೊಳಿ‌ ಮೋದಗಾ ಪಿಕೆಪಿಎಸ್ ನಿರ್ದೇಶಕರಾಗಲು‌ ನಕಲಿ ರಹವಾಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಆರೋಪಿಸಿದ್ದರು.

ಈ ಬಗ್ಗೆ ಜಿಪಂ ಸಿಇಒಗೆ ದೂರು ನೀಡಲಾಗಿದೆ. ಪರಿಶೀಲನೆ ನಡೆಸಿ ಮೋದಗಾ ಗ್ರಾಪಂ ಸದಸ್ಯ ಬಾಬು ಕಾಳೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ ವಿ ರಾಜೇಂದ್ರ ಪಿಡಿಒಗೆ ಆದೇಶಿಸಿದ್ದಾರೆ.

Last Updated : Feb 19, 2020, 1:04 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.