ETV Bharat / state

ಸಂಧಾನಕ್ಕೆ ಬಂದ ರಾಜೇಶ್ ನೇರ್ಲಿರನ್ನು ತರಾಟೆ ತೆಗೆದುಕೊಂಡ ಸವದಿ ಬೆಂಬಲಿಗರು - ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

ಸಂಧಾನಕ್ಕೆ ಬಂದ ರಾಜೇಶ್ ನೇರ್ಲಿ ಅವರನ್ನು ಸವದಿ ಬೆಂಬಲಿಗರು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.

Laxaman Savadi supporters outrage  Laxaman Savadi supporters outrage on Rajesh Nerli  Laxaman Savadi lost ticket  ಸಂಧಾನಕ್ಕೆ ಬಂದ ರಾಜೇಶ್ ನೇರ್ಲಿ  ರಾಜೇಶ್ ನೇರ್ಲಿರನ್ನು ತರಾಟೆ ತೆಗೆದುಕೊಂಡ ಸವದಿ ಬೆಂಬಲಿಗರು  ತರಾಟೆ ತೆಗೆದುಕೊಂಡ ಪ್ರಸಂಗ  ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ  ಸವದಿ ನಿವಾಸಕ್ಕೆ ರಾಜೇಶ್ ನೇರ್ಲಿ ಅವರು ಭೇಟಿ
ಸಂಧಾನಕ್ಕೆ ಬಂದ ರಾಜೇಶ್ ನೇರ್ಲಿರನ್ನು ತರಾಟೆ ತೆಗೆದುಕೊಂಡ ಸವದಿ ಬೆಂಬಲಿಗರು
author img

By

Published : Apr 13, 2023, 11:24 AM IST

ಚಿಕ್ಕೋಡಿ (ಬೆಳಗಾವಿ): ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಅಥಣಿ ಟಿಕೆಟ್ ವಿಚಾರವಾಗಿ ಈಗಾಗಲೇ ಆಂತರಿಕವಾಗಿ ಬಿಜೆಪಿಯಿಂದ ಹೊರ ಬಂದಿದ್ದು, ಇವರನ್ನು ಮನವೊಲಿಸಲು ಬಿಜೆಪಿ ವರಿಷ್ಠರು ಪ್ರಯತ್ನವನ್ನು ಮುಂದುವರಿದಿದೆ. ಅದರ ಭಾಗವಾಗಿ ಇವತ್ತು ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ರಾಜೇಶ್ ನೇರ್ಲಿಯವರು ಲಕ್ಷ್ಮಣ್ ಸವದಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಇಂದು ಬೆಳಗ್ಗೆ ಸವದಿ ನಿವಾಸಕ್ಕೆ ರಾಜೇಶ್ ನೇರ್ಲಿ ಅವರು ಭೇಟಿ ನೀಡಿ ಸಂಧಾನಕ್ಕೆ ಮುಂದಾಗಿದ್ದರು. ಇದರ ನಡುವೆ ಕಾರ್ಯಕರ್ತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹೀಗ್ಯಾಕೆ ನಮ್ಮ ನಾಯಕರ ಮನೆಗೆ ಬಂದಿದ್ದಾರೆ ಎಂದು ತೀವ್ರ ತರಾಟೆಯನ್ನು ತೆಗೆದುಕೊಂಡ ಪ್ರಸಂಗ ನಡೆಯಿತು.

ಇದರ ನಡುವೆ ಲಕ್ಷ್ಮಣ್ ಸವದಿ ಅವರು ರಾಜೇಶ್ ನೇರ್ಲಿ ಅವರನ್ನು ಸತ್ಕರಿಸಿದರು. ಸತ್ಕಾರ ಮುಗಿಯುತ್ತಿದ್ದಂತೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ ರಾಜೇಶ್ ನೇರ್ಲಿ ಅವರನ್ನು ಮುಂದೆ ಹೋಗುವುದಕ್ಕೆ ಬಿಡದೆ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಅಥಣಿ ವಲಯದ ಪಕ್ಷದ ಪದಾಧಿಕಾರಿಗಳು ಸಾಮೂಹಿಕವಾಗಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅಷ್ಟೇ ಅಲ್ಲ, ಸವದಿ ಬೆಂಬಲಿಗರು ನೇರ್ಲಿ ಕಾರಿಗೆ ಮುತ್ತಿಗೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ ಪ್ರಸಂಗ ನಡೆಯಿತು. ನಂತರ ರಾಜೇಶ್ ನೇರ್ಲಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸಾದರು.

ನಡೆದಿದ್ದೇನು?: ಅಥಣಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಬಿಜೆಪಿಯಿಂದ ಹೊರಗಡೆ ಬರುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲ ಇಂದು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಾಗುವುದು ಎಂದು ಬುಧವಾರ ಹೇಳಿಕೆ ನೀಡಿದ್ದಾರೆ.

ಬುಧವಾರದಂದು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಬಿಜೆಪಿ ವರಿಷ್ಠರು ನನಗೆ ಕೊನೆ ಹಂತದಲ್ಲಿ ಟಿಕೆಟ್ ಕೈ ತಪ್ಪಿಸಿದ್ದಾರೆ. ಇದರಿಂದ ನನಗೆ ತೀವ್ರ ನೋವಾಗಿದೆ. ಗುರುವಾರ ಕಾರ್ಯಕರ್ತರ ಸಭೆ ಕರೆದು ಒಂದು ತೀರ್ಮಾನಕ್ಕೆ ಬರುತ್ತೇನೆ. ಬೆಂಬಲಿಗರು ಮತ್ತು ಕಾರ್ಯಕರ್ತರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ. ಗುರುವಾರದ ಸಂಜೆ ಐದು ಗಂಟೆಗೆ ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದ್ದರು.

ಸವದಿ ಸೆಳೆಯಲು ಕಾಂಗ್ರೆಸ್​ ಯತ್ನ: ಹೈಕಮಾಂಡ್​ ನಿರ್ಧಾರದಿಂದ ಭಾವುಕರಾಗಿದ್ದ ಸವದಿ ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ನಿನ್ನೆ ಬೆಳಗ್ಗೆ ಕಾಂಗ್ರೆಸ್​ ಅವರನ್ನು ಸಂಪರ್ಕಿಸಿದ್ದು, ಸಂಚಲನ ಮೂಡಿಸಿತ್ತು. ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಥಣಿ ನಿವಾಸದಲ್ಲಿ ಲಕ್ಷ್ಮಣ್ ಸವದಿ ಅವರನ್ನು ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ ಅವರು ಭೇಟಿ ಮಾಡಿದ್ದರು. ಮಾಜಿ ಡಿಸಿಎಂ ಪಕ್ಷ ತೊರೆಯುವ ಚಿಂತನೆ ನಡೆಸಿದ್ದಾರೆ ಎಂಬ ಊಹಾಪೋಹದ ಮಧ್ಯೆಯೇ ಇಬ್ಬರು ನಾಯಕರ ಈ ಭೇಟಿ ರಾಜಕೀಯದಲ್ಲಿ ಹೊಸದೊಂದು ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ಮಾತನಾಡಿದ್ದ ಸವದಿ, ಒಂದು ವೇಳೆ ಬಿಜೆಪಿ ಪಕ್ಷ ತೊರೆಯುವಂತಾದರೆ ಕಾಂಗ್ರೆಸ್​ ನಿಮ್ಮನ್ನು ಸ್ವಾಗತಿಸಲು ತಯಾರಿದೆ ಎಂದು ರಾಜು ಕಾಗೆ ಹೇಳಿದ್ದರು.

ಓದಿ : ಎರಡನೇ ಪಟ್ಟಿ ಪ್ರಕಟ.. ಬಿಜೆಪಿ ಏಳು ಹಾಲಿ ಶಾಸಕರ ಬದಲಿಗೆ ಟಿಕೆಟ್​ ಪಡೆದ ಹೊಸ ಅಭ್ಯರ್ಥಿಗಳಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.