ETV Bharat / state

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಭಾಷಾ ರಾಜಕಾರಣಕ್ಕೆ ಮತದಾರರು ತಿಲಾಂಜಲಿ ಹಾಡಿದ್ದಾರೆ : ಸಚಿವ ಕತ್ತಿ - ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಭಾಷಾ ರಾಜಕಾರಣ

ಮುಂದಿನ ದಿನಗಳಲ್ಲಿ ಬುಡಾ, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಸಮನ್ವಯದ ಕೆಲಸ ಮಾಡಲಿದ್ದಾರೆ. ಬರುವ ಐದು ವರ್ಷಗಳ ಅವಧಿಯಲ್ಲಿ ಬೆಳಗಾವಿ ಚಿತ್ರಣ ಬದಲಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ..

language based election ended in belgaum says umesh katti
ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ
author img

By

Published : Sep 6, 2021, 9:21 PM IST

ಬೆಳಗಾವಿ : ಭಾಷಾ ರಾಜಕಾರಣಕ್ಕೆ ಮತದಾರರು ತಿಲಾಂಜಲಿ ಹಾಡಿದ್ದಾರೆ. ಅಭಿವೃದ್ಧಿಪರ ಕೆಲಸಕ್ಕಾಗಿ ಮತದಾರರು ಬಿಜೆಪಿ ಪಕ್ಷದ ಕೈಹಿಡಿದಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿ ನಗರ ಪಾಲಿಕೆ ಚುನಾವಣೆ ದಾಖಲೆ ಸೃಷ್ಟಿ ಮಾಡಿದೆ. ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಿಂದ‌ಲೂ ಬೆಳಗಾವಿಯಲ್ಲಿ ಭಾಷಾ ಪ್ರಾಂತ್ಯದ ಮೇಲೆ ಚುನಾವಣೆ ನಡೆದಿರುವ ಉದಾಹರಣೆ ಇದೆ‌. ಆದ್ರೆ, ಈ ಬಾರಿ ಅಭಿವೃದ್ಧಿಪರವಾಗಿ ಜನರು‌ ಮತದಾನ ಮಾಡಿದ್ದಕ್ಕಾಗಿಯೇ ಭಾರತೀಯ ಜನತಾ ಪಾರ್ಟಿಗೆ ಅತಿ ಹೆಚ್ಚು ಸ್ಥಾನ ಸಿಕ್ಕಿವೆ ಎಂದರು.

ಬೆಳಗಾವಿಯಲ್ಲಿ ಬಿಜೆಪಿ ಗೆಲುವಿನ ಕುರಿತಂತೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿರುವುದು..

ಭಾಷಾ ಪ್ರಾಂತ್ಯದ ಮೇಲೆ‌ ನಡೆಯುತ್ತಿದ್ದ ಮತದಾನಕ್ಕೆ ಜನರು ತಿಲಾಂಜಲಿ ‌ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಭಾಷಾವಾರು ಚುನಾವಣೆಗೆ ಅವಕಾಶ ನೀಡಲ್ಲ ಎಂದ್ರು. ಮುಂದಿನ ದಿನಗಳಲ್ಲಿ ಬುಡಾ, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಸಮನ್ವಯದ ಕೆಲಸ ಮಾಡಲಿದ್ದಾರೆ. ಬರುವ ಐದು ವರ್ಷಗಳ ಅವಧಿಯಲ್ಲಿ ಬೆಳಗಾವಿ ಚಿತ್ರಣ ಬದಲಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ ಎಂದರು.

ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಹೊತ್ತಿದ್ದ ಬಿಜೆಪಿ ಶಾಸಕ ಅಭಯ ಪಾಟೀಲ್‌ ಮಾತನಾಡಿ, ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಕ್ಷೇತ್ರಗಳ ಪೈಕಿ 22ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎಂಇಎಸ್ ಒಂದು, ಎರಡು ಕಾಂಗ್ರೆಸ್ ಅಭ್ಯರ್ಥಿಗಳು ಗೆದಿದ್ದಾರೆ.

ಉತ್ತರ ಕ್ಷೇತ್ರದಲ್ಲಿ 14 ಬಿಜೆಪಿ, 2 ಎಂಇಎಸ್, 1 ಎಂಐಎಂ ಹಾಗೂ 7 ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಂಡಿದ್ದು, ಜನ ಅಭಿವೃದ್ಧಿಗೆ ಮತ ನೀಡಿದ್ದಾರೆ‌. ಫಲಿತಾಂಶ ಸ್ಥಳೀಯ ರಾಜಕಾಣರಕ್ಕೆ ಹೊಸ ದಿಕ್ಕು ತೋರಿಸಿದೆ ಎಂದರು.

ರಾಜ್ಯ ನಾಯಕರ ಪ್ರಯತ್ನದಿಂದ ಬಿಜೆಪಿಯ 35 ಜನ ಪಾಲಿಕೆ ಸದಸ್ಯರು ಆಯ್ಕೆಯಾಗಿದ್ದಾರೆ‌. ಜನರ ಕನಸಿನ ಬೆಳಗಾವಿ ನಿರ್ಮಾಣ ಮಾಡಲು ನಾವು ಬದ್ಧರಾಗಿದ್ದೇವೆ. ಪಾಲಿಕೆ ಆಡಳಿತ ಜನರ ಬಾಗಿಲಿಗೆ ಮುಟ್ಟಿಸಲು ಎಲ್ಲಾ ರೀತಿಯ ಪ್ರಯತ್ನ‌ ಮಾಡುತ್ತೇವೆ ಎಂದರು.

ಮಹಾನಗರ ಪಾಲಿಕೆಗೆ ಈ ಸಾರಿ ಹೊಸಬರು 56 ಮಂದಿ ಆಯ್ಕೆಯಾಗಿದ್ದಾರೆ.‌ ಹೊಸ ಪಾಲಿಕೆ ಸದಸ್ಯರಿಗೆ ಜನರ ಸಮಸ್ಯೆ, ಕೆಲಸದ ಬಗ್ಗೆ ಟ್ರೈನಿಂಗ್ ಕ್ಯಾಂಪ್ ಮಾಡುತ್ತೇವೆ.‌ ಯಶಸ್ವಿ ಮಹಾನಗರ ಪಾಲಿಕೆಗಳಿಗೆ ಟೂರ್ ಫಿಕ್ಸ್ ಮಾಡುತ್ತೇವೆ. ಜನಸಂಪರ್ಕ ಸಭೆ, ವಾರ್ಡ್ ವ್ಯಾಪ್ತಿಯಲ್ಲಿ ಕಚೇರಿ ಸೇರಿ ಜನರ ಜತೆಗೆ ನಿರಂತರ ಸಂಪರ್ಕದಲ್ಲಿ ಎಲ್ಲಾ ಕೆಲಸ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ:ಬಿಜೆಪಿಗೆ ಸಿಹಿ.. ಎಂಇಎಸ್​ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.