ಬೆಳಗಾವಿ: ಜಮೀನು ವಿವಾದ ಸಂಬಂಧ ತಾಲೂಕು ಪಂಚಾಯಿತಿ ಮಾಜಿ ಸದಸ್ಯನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ. ರಾಜಾಪುರ ಗ್ರಾಮದ ಚಿಂತಾಪ್ಪ ರಾಮಪ್ಪ ಮೇಟಿ (55) ಮೃತ ವ್ಯಕ್ತಿ.
ಜಮೀನಿನ ಸೀಮೆಗಾಗಿ ಸಹೋದರ ಸಂಬಂಧಿಗಳ ನಡುವೆ ವಿವಾದವಿತ್ತು. ಸಹೋದರ ಸಂಬಂಧಿ ಗೋಪಯ್ಯ ಮೇಟಿ ಎಂಬಾತ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಚಿಂತಪ್ಪಾ ಹಾಗೂ ಗೋಪಯ್ಯ ನಡುವೆ ಜಮೀನು ವ್ಯಾಜ್ಯವಿತ್ತು. ಹಲವು ದಿನಗಳಿಂದ ಜಮೀನು ಸೀಮೆ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಗುಂಡಿಕ್ಕಿ ಕೊಲೆಗೈದ ಆರೋಪಿ ಗೋಪಯ್ಯ ಭೀಮಪ್ಪ ಮೇಟಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.