ಅಥಣಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. ನನಗೆ ಯಾವುದೇ ಖಚಿತ ಮಾಹಿತಿ ಇಲ್ಲ ಹಾಗೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯಿಲ್ಲ. ಇದು ಕೇವಲ ಊಹಾಪೋಹದ ಸುದ್ದಿ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಯಾಕೆ? ಸಮರ್ಥ ಮುಖ್ಯಮಂತ್ರಿ ಇರುವಾಗ ಪದೇ ಪದೆ ಯಾಕೆ ಈ ಪ್ರಶ್ನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ಹೈಕಮಾಂಡ್ ಸ್ಪಷ್ಟವಾಗಿ ಅವಧಿ ಮುಗಿಯುವವರೆಗೆ ಬಿ ಎಸ್ ಯಡಿಯೂರಪ್ಪನವರೇ ಮುಖ್ಯಮಂತ್ರಿ ಎಂದು ಹೇಳಿರುವಾಗ, ಮಾಧ್ಯಮದಲ್ಲೇ ಸಿಎಂ ಬದಲಾವಣೆ ಎಂಬ ವರದಿಗಳನ್ನು ಗಮನಿಸುತ್ತಿದ್ದೇನೆ. ಆದರೆ, ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ರಾಜ್ಯದಲ್ಲಿ Covid ಸೋಂಕು ಇಳಿಮುಖವಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿದ್ದರಿಂದ ಆರೋಗ್ಯ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅಥಣಿ ತಾಲೂಕಿಗೆ ಎರಡು ಆಕ್ಸಿಜನ್ ಸಂಚಾರಿ ಬಸ್ಗಳನ್ನು ನೀಡಲಾಗುವುದು. ಪಟ್ಟಣದ ಹೊರವಲಯದ ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ಗೆ ಆಕ್ಸಿಜನ್ ಬೆಡ್ ಆಳವಡಿಸಲಾಗುವುದು ಎಂದು ತಿಳಿಸಿದರು.
ಓದಿ: 'ರಕ್ತದಲ್ಲಿ ಬರೆದುಕೊಡುತ್ತೇನೆ, ಯಡಿಯೂರಪ್ಪನವರೇ ಪೂರ್ಣಾವಧಿ ಸಿಎಂ'