ETV Bharat / state

ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿದರೂ ನಿರ್ವಹಿಸಲು ನಾನು ಸಿದ್ಧ: ಕುಡಚಿ ಶಾಸಕ - ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿದರೂ ನಿರ್ವಹಿಸಲು ನಾನು ಸಿದ್ಧ: ಕುಡಚಿ ಶಾಸಕ

ಬಿಎಸ್​​ವೈ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದಾರೆ. ಯಾವುದೇ ಬದಲಾವಣೆ ಆಗುವುದಿಲ್ಲ. ಇವೆಲ್ಲಾ ಊಹಾಪೋಹ ಎಂದು ಕುಡಚಿ ಶಾಸಕ ಪಿ.ರಾಜೀವ್ ಪ್ರತಿಕ್ರಿಯಿಸಿದ್ದಾರೆ.

kudachi-mla-p-rajeev-reaction-about-cabinet-expansion
ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿದರೂ ನಿರ್ವಹಿಸಲು ನಾನು ಸಿದ್ಧ: ಕುಡಚಿ ಶಾಸಕ
author img

By

Published : Jan 6, 2021, 7:07 PM IST

ಅಥಣಿ (ಬೆಳಗಾವಿ): ಬಿಜೆಪಿ ಶಿಸ್ತಿನ ಹಾಗೂ ತಳಮಟ್ಟದಿಂದ ಕಾರ್ಯಕರ್ತರನ್ನು ಗುರುತಿಸುವ ಪಕ್ಷ. ನಮ್ಮ ಪಕ್ಷ ಎಲ್ಲಾ ಪಕ್ಷಗಳಿಗಿಂತಲೂ ವಿಭಿನ್ನ. ಇದರಿಂದ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಾನು ನಿರ್ವಹಣೆ ಮಾಡುತ್ತೇನೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಪ್ರತಿಕ್ರಿಯಿಸಿದ್ದಾರೆ.

ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿದರೂ ನಿರ್ವಹಿಸಲು ನಾನು ಸಿದ್ಧ: ಕುಡಚಿ ಶಾಸಕ

ಅಥಣಿ ತಾಲೂಕಿನ ಶಂಕರಹಟ್ಟಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಮಂದಿರ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಣೆ ಮಾಡುತ್ತೇನೆ. ಕೆಲವು ರಾಜಕೀಯ ಮುಖಂಡರು ಸ್ವದೇಶಿ ಕೊರೊನಾ ವ್ಯಾಕ್ಸಿನ್​ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಭಾರತ ದೇಶದ ವಿಜ್ಞಾನಿಗಳು ಜಗತ್ತು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಲಸಿಕೆ ಬಂದ ನಂತರ ನಾವು ಮೊದಲು ಹಾಕಿಸಿಕೊಳ್ಳುತ್ತೇವೆ ಎಂದರು.

ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತದೆ ಎಂಬ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಬಿಎಸ್​​ವೈ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದಾರೆ. ಯಾವುದೇ ಬದಲಾವಣೆ ಆಗುವುದಿಲ್ಲ. ಇವೆಲ್ಲಾ ಊಹಾಪೋಹ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.