ಚಿಕ್ಕೋಡಿ: ಕಷ್ಟಪಟ್ಟು ತರಕಾರಿ ಬೆಳೆದು ಕೊಳ್ಳುವವರಿಲ್ಲದೆ ಸಂಕಷ್ಟದಲ್ಲಿರುವ ರೈತರಿಗೆ ಕುಡಚಿ ಶಾಸಕ ಪಿ.ರಾಜೀವ ನೆರವಾಗಿದ್ದಾರೆ.
ಶಾಸಕ ಪಿ.ರಾಜೀವ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತೀ ಮಾರುಕಟ್ಟೆಗೂ 10ರಿಂದ 15 ಕಾರ್ಯಕರ್ತರನ್ನೊಳಗೊಂಡ ತಂಡವನ್ನು ಕಳಿಸಿ, ರೈತರು ಮಾರಾಟಕ್ಕೆ ತರುವ ತರಕಾರಿಗಳನ್ನು ಖರೀದಿಸಿದ್ದಾರೆ. ಹೀಗೆ ಖರೀದಿಸಿದ ತರಕಾರಿಗಳನ್ನು ಪ್ಯಾಕ್ ಮಾಡಿ, ಕ್ಷೇತ್ರದ ಬಡ ಜನರಿಗೆ ಉಚಿತವಾಗಿ ಹಂಚಿದ್ದಾರೆ.
ಈ ಮೂಲಕ ರೈತರು ಮತ್ತು ಬಡ ಜನರಿಗೆ ನೆರವಾಗಿದ್ದು, ಶಾಸಕರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.