ETV Bharat / state

ಕಂಟೇನ್​​​​​​​​ಮೆಂಟ್ ಜೋನ್​​ನಲ್ಲಿ ಕುಡಚಿ : ಇಲ್ಲಿನ ಜನರ ಗೋಳು ಕೇಳೊರ್ಯಾರು?

ಕುಡಚಿ ಪಟ್ಟಣದಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದರಿಂದ ರೋಗಿಗಳು ಪರದಾಡುವಂತಾಗಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಇಲ್ಲ ಹಾಗೂ‌ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆ ಇಲ್ಲ ಎಂದು ವಿಡಿಯೋ‌ ಮೂಲಕ ದೂರಿದ್ದಾರೆ.

Kudachi in the Containment Zone
ಕಂಟೋನ್ಮೆಂಟ್ ಝೋನ್​​ನಲ್ಲಿ ಕುಡಚಿ
author img

By

Published : Apr 27, 2020, 1:28 PM IST

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಕುಡಚಿ‌ ಪಟ್ಟಣದಲ್ಲಿ ಈಗಾಗಲೆ 18 ಜನ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಆರೋಗ್ಯ ತಪಾಸಣೆಯಲ್ಲಿ‌ ಏರು ಪೇರು ಆಗುತ್ತಿರುವುದರಿಂದ ನಮಗೆ ಸರಿಯಾದ ಆರೋಗ್ಯ ವ್ಯವಸ್ಥೆ ಮಾಡಿಕೊಡಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕಂಟೋನ್ಮೆಂಟ್ ಝೋನ್​​ನಲ್ಲಿ ಕುಡಚಿ

ಹೌದು ಕುಡಚಿ ಪಟ್ಟಣದಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದರಿಂದ ರೋಗಿಗಳು ಪರದಾಡುವಂತಾಗಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಇಲ್ಲ ಹಾಗೂ‌ ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆ ಇಲ್ಲ ಎಂದು ವಿಡಿಯೋ‌ ಮೂಲಕ ದೂರಿದ್ದಾರೆ.

ರಾಯಬಾಗ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಇಲ್ಲದೇ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಹ ಪ್ರಸಂಗ ಎದುರಾಗಿದೆ. ಬೆಳಗಾವಿ ಕೆಎಲ್ಇ ಹಾಗೂ ಸಿವಿಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಇದ್ದರು ಸಹಿತ ಕುಡಚಿ ಪಟ್ಟಣದ ನಿವಾಸಿಗಳಿಗೆ ಅಲ್ಲಿ ಚಿಕಿತ್ಸೆ ನೀಡುತ್ತಿಲ್ಲ.

ಇವರು ಪಕ್ಕದ ಮಹಾರಾಷ್ಟ್ರ ರಾಜ್ಯದ ಮಿರಜ್​​ನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈಗ ಅಲ್ಲಿಗೆ ಹೋಗಲು ಸರಿಯಾದ ಅನಕೂಲ‌ ಇಲ್ಲದೆ ಇರುವುದರಿಂದ ತೊಂದರೆ ಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಈ ಬಗ್ಗೆ ಕುಡಚಿ ಶಾಸಕ‌ ಪಿ.ರಾಜೀವ್​ ಗಮನ ಹರಿಸಿ ಇಂತಹ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಂಡಬೇಕೆಂದು ಸ್ಥಳೀಯರು ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.