ಬೆಳಗಾವಿ: ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಲಿಂಗಿಸಿ ಬೆನ್ನು ತಟ್ಟಿ ಅಭಿನಂದಿಸಿದರು.
ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪುತ್ಥಳಿ ಮರುಸ್ಥಾಪನೆ ವಿವಾದವನ್ನು ತ್ವರಿತ ಹಾಗೂ ಶಾಂತ ರೀತಿಯಿಂದ ಜಿಲ್ಲಾಡಳಿತ ಬಗೆಹರಿಸಿದೆ. ಶಾಂತಿ ಸಭೆ ಯಶಸ್ಸುಗೊಳ್ಳುವಲ್ಲಿ ನಿಮ್ಮ ಪಾತ್ರ ಬಹಳಷ್ಟಿದೆ ಎಂದು ಸಚಿವ ಜಾರಕಿಹೊಳಿ ಅವರನ್ನು ಈಶ್ವರಪ್ಪ ಶ್ಲಾಘಿಸಿದರು.
ಇದೇ ವೇಳೆ, ರಾಯಣ್ಣ ಹಾಗೂ ಛತ್ರಪತಿ ಶಿವಾಜಿಯವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದರು. ಬಳಿಕ ಉಭಯ ನಾಯಕರು ಸಚಿವ ನಾಗೇಶ ಜತೆಗೂಡಿ ಶಿವಾಜಿ ಹಾಗೂ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.