ETV Bharat / state

ಅಥಣಿಯಲ್ಲಿ ಪ್ರವಾಹ ಭೀತಿ: ಮುಳುಗಡೆ ಹಂತ ತಲುಪಿದ ಹಲ್ಯಾಳ ಸೇತುವೆ - ತುಂಬಿ ಹರಿಯುತ್ತಿರುವ ಕೃಷ್ಣಾ ನದಿ

ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಮಳೆಗೆ ಬೆಳಗಾವಿ, ಅಥಣಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇನ್ನೊಂದೆಡೆ ತಾಲೂಕಿನ ಹಲ್ಯಾಳ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು, ಮುಳುಗುವ ಹಂತ ತಲುಪಿದೆ.

Krishna river overflowing from heavy rain causing floods fear for villagers
ಮುಳುಗಡೆ ಹಂತ ತಲುಪಿದ ಹಲ್ಯಾಳ ಸೇತುವೆ
author img

By

Published : Jul 25, 2021, 4:01 PM IST

ಅಥಣಿ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿದ ಭಾರೀ ಮಳೆಗೆ ಬೆಳಗಾವಿ, ಅಥಣಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಹಾರಾಷ್ಟ್ರದಿಂದ ಹಿಪ್ಪರಗಿ ಬ್ಯಾರೇಜ್​ಗೆ 3.55 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತಾಲೂಕಿನ ನದಿ ಪಾತ್ರದ 14 ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಹಲ್ಯಾಳ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು, ಮುಳುಗುವ ಹಂತ ತಲುಪಿದೆ.

ಅಥಣಿಯಲ್ಲಿ ಪ್ರವಾಹ ಭೀತಿ: ಈಟಿವಿ ಭಾರತ ಪ್ರತಿನಿಧಿಯಿಂದ ಪ್ರತ್ಯಕ್ಷ ವರದಿ

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆ ರಕ್ಷಣೆ:

ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ತಾಲೂಕಿನ ಸತ್ತಿ ಗ್ರಾಮದಲ್ಲಿ ಎಮ್ಮೆ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆ ರಕ್ಷಿಸಿದ ಯುವಕ

ಮಲ್ಲು ಲೋಕೊಡೆ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿದ್ದು, ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವೇಳೆ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ನಾನಿಲ್ಲಿ ಪ್ರವಾಹ ಪ್ರದೇಶದ ಭೇಟಿಗೆ ಬಂದಿದ್ದೇನೆ, ನಾಯಕತ್ವ ಚರ್ಚೆ ಬೇಡ: ಬಿಎಸ್‌ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.