ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲೂ ಇಳಿಮುಖವಾಗಿದೆ.
39,000 ಕ್ಯೂಸೆಕ್‌ಗಿಂತ ಅಧಿಕ ಕೃಷ್ಣಾ ನದಿ ಒಳಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಷ್ ಸಂಪಗಾಂವಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 34,002 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 5,104 ಕ್ಯೂಸೆಕ್ ನೀರು ಹೀಗೆ ಒಟ್ಟು 39,000 ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.
ಮಹಾರಾಷ್ಟ್ರದ ಕೊಯ್ನಾ ಭಾಗದಲ್ಲಿ- 33 ಮಿ.ಮೀ, ನವಜಾ - 34 ಮಿ.ಮೀ, ಮಹಾಬಲೇಶ್ವರ - 54 ಮಿ.ಮೀ, ವಾರಣಾ- 10 ಮಿ.ಮೀ, ಕಾಳಮ್ಮವಾಡಿ - 10 ಮಿ.ಮೀ, ರಾಧಾನಗರಿ - 23 ಮಿ.ಮೀ, ಪಾಟಗಾಂವ - 27 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ ಶೇ.94ರಷ್ಟು, ವಾರಣಾ ಜಲಾಶಯ ಶೇ. 96ರಷ್ಟು, ರಾಧಾನಗರಿ ಜಲಾಶಯ ಶೇ. 97ರಷ್ಟು, ಕಣೇರ ಜಲಾಶಯ ಶೇ. 93ರಷ್ಟು, ಧೂಮ ಜಲಾಶಯ ಶೇ. 97ರಷ್ಟು, ಪಾಟಗಾಂವ ಶೇ. 100ರಷ್ಟು, ಧೂದಗಂಗಾ ಶೇ.98ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 27,000 ಹಾಗೂ ಆಲಮಟ್ಟಿ ಜಲಾಶಯದಿಂದ 35,945 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.