ETV Bharat / state

ಸ್ಮಶಾನದಲ್ಲಿ ವಾಹನಕ್ಕೆ ಚಾಲನೆ.. ಮೌಢ್ಯದಿಂದ ಹೊರಬಂದು ನೆಮ್ಮದಿಯಿಂದ ಬದುಕಿ: ಸತೀಶ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಶಾಂತಿಧಾಮ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಚಿಂತನಗೋಷ್ಠಿ ಹಾಗೂ ನೂತನ ವಾಹನ ಚಾಲನಾ ಸಮಾರಂಭಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಚಾಲನೆ ನೀಡಿದರು.

Anti-ignorance Programme
ಮೌಢ್ಯ ವಿರೋಧಿ ಚಿಂತನಗೋಷ್ಠಿ
author img

By

Published : Mar 6, 2021, 1:45 PM IST

ಬೆಳಗಾವಿ: ಮೌಢ್ಯದಿಂದ ಹೊರಬಂದು, ನೆಮ್ಮದಿಯಿಂದ ಬದುಕಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಶಾಂತಿಧಾಮ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಚಿಂತನಗೋಷ್ಠಿ ಹಾಗೂ ನೂತನ ವಾಹನ ಚಾಲನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ದೇವರ ಹೆಸರಿನಲ್ಲಿ ಹಲವು ರೀತಿಯಲ್ಲಿ ಮೌಢ್ಯದ ಆಚರಣೆ ನಡೆಯುತ್ತಿದೆ. ಸುಮಾರು 5 ಸಾವಿರ ವರ್ಷಗಳಿಂದಲೂ ಇದು ಗೊತ್ತು, ಗುರಿಯಿಲ್ಲದೇ ನಡೆದುಕೊಂಡು ಬಂದಿದೆ. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರು ಜನರಲ್ಲಿನ ಮೌಢ್ಯಗಳನ್ನು ಹೊಡೆದೋಡಿಸಲು ಅನೇಕ ರೀತಿಯಲ್ಲಿ ಶ್ರಮಿಸಿದ್ದಾರೆ. ಜನರು ಈಗಲಾದರು ಎಚ್ಚೆತ್ತು ಮೌಢ್ಯಗಳಿಂದ ಹೊರಬರಬೇಕು ಎಂದು ಸಲಹೆ ನೀಡಿದರು.

ಪೂಜೆ, ಪುನಸ್ಕಾರದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಹಾಗೇನಾದರೂ ಆಗುವುದಿದ್ದರೇ ಎಲ್ಲರೂ ತಾವು ಮಾಡುವ ಕಾಯಕ ಬಿಟ್ಟು ಅದನ್ನೇ ಮಾಡುತ್ತಾ ಕೂರಬೇಕಾಗಿತ್ತು. ನಂಬಿಕೆಗಳು ಮೂಢನಂಬಿಕೆಗಳಾಗಿ ಪರಿವರ್ತನೆ ಆಗಿವೆ ಎಂದರು.

ಜ್ಯೋತಿಷ್ಯದ ಬೆನ್ನು ಬೀಳದಿರಿ:

ಮಕ್ಕಳು ತಿನಿಸು ತಿನ್ನಲು ಹಣ ಕೊಡುವುದಕ್ಕೆ ಹಿಂದೇಟು ಹಾಕುವ ನಾವು, ದೇವರ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡುತ್ತೇವೆ. ದೇವರು ಹೀಗೆ ಮಾಡಿ ಎಂದು ನಮಗೆ ಹೇಳುವುದಿಲ್ಲ. ಮಧ್ಯವರ್ತಿಗಳ ಮಾತು ಕೇಳಿ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಗೆ ಒಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಎಲ್ಲರೂ ದೇವಸ್ಥಾನ, ಜ್ಯೋತಿಷಿಗಳ ಬಳಿ ಹೋಗುತ್ತಾರೆ. ಎಲ್ಲರಿಗೂ ಗೆಲ್ಲುತ್ತೀರಿ ಎಂದೇ ಅವರು ಹೇಳಿರುತ್ತಾರೆ. ಸೋತ ನಂತರ ನೀವು ಮಾಡಿದ ಪೂಜೆಯಲ್ಲಿ ದೋಷವಿದೆ ಎನ್ನುತ್ತಾರೆ. ಪೂಜೆ, ಪುನಸ್ಕಾರ, ಜ್ಯೋತಿಷ್ಯದಿಂದ ಗೆಲುವು ಸಾಧ್ಯವಿಲ್ಲ. ಜನರು ನಮ್ಮನ್ನು, ನಮ್ಮ ಕೆಲಸವನ್ನು ಮೆಚ್ಚಿ ಮತ ನೀಡಿದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಹೇಳಿದರು.

ಓದಿ: ಮೈಸೂರು ಮಾದರಿಯಲ್ಲೇ ಬೆಳಗಾವಿ ಮೃಗಾಲಯ ಅಭಿವೃದ್ಧಿ: ಸತೀಶ್ ಜಾರಕಿಹೊಳಿ‌

ಬಸವಣ್ಣನವರು ಮೌಢ್ಯದ ವಿರುದ್ಧ ನಿರಂತರವಾಗಿ ಹೋರಾಡಿದ್ದರು. ಅವರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡುವ ಬದಲು, ಹಾಸ್ಟೆಲ್ ಗಳಲ್ಲಿ ವಾಸಿಸುವ ಅಥವಾ ಬಡ ಮಕ್ಕಳಿಗೆ ಹಾಲು ನೀಡಬೇಕು ಎಂದು ಕರೆ ನೀಡಿದರು.

Anti-ignorance Programme
ಸ್ಮಶಾನದಲ್ಲಿ ವಾಹನಕ್ಕೆ ಚಾಲನೆ..

ನೂತನ ಕಾರಿಗೆ ಚಾಲನೆ:
ಇದೇ ಸಂದರ್ಭದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಅವರ ನೂತನ ಕಾರಿಗೆ ಸತೀಶ ಜಾರಕಿಹೊಳಿ ಅವರು ಸ್ಮಶಾನದಲ್ಲಿಯೇ ಚಾಲನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.