ಬೆಳಗಾವಿ : ಗೋವಾ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಣೆ ಪ್ರಮಾಣ ಮಾಡಿಸಿರುವ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾದಲ್ಲಿ ಯಾವ ರೀತಿ ಆಣೆ ಪ್ರಮಾಣ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾಳೆ, ನಾಡಿದ್ದು ಎರಡು ದಿನ ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಆಣೆ ಪ್ರಮಾಣ ಅದು ಎಷ್ಟರ ಮಟ್ಟಿಗೆ ಸರಿ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ.
ಪಕ್ಷ ನಿಷ್ಠೆಯಿಂದ ಇರಬೇಕು ಅಂತಾ ಹೇಳಿರಬಹುದು. ಕಳೆದ ಬಾರಿ ನಮ್ಮದೇ ಸರ್ಕಾರ ರಚನೆ ಮಾಡುವ ಅವಕಾಶ ಇದ್ದರೂ ನಾವು ಕಳೆದುಕೊಂಡಿದ್ದೇವೆ. ಈ ಬಾರಿ ಅದನ್ನು ಗಮನದಲ್ಲಿಟ್ಟುಕೊಂಡು ಹೇಳಿರಬಹುದು ಎಂದಿದ್ದಾರೆ.
ಇದನ್ನೂ ಓದಿ : ಕೆಲವರಿಗೆ ಸಂಜೆಯಾದ್ರೆ ಅಲ್ಲಿ ಇಲ್ಲಿ ಕೂತು ಮಾತನಾಡುವ ಅಭ್ಯಾಸ.. ಶಾಸಕರ ಸಭೆ ಬಗ್ಗೆ ಸಚಿವ ವಿ.ಸೋಮಣ್ಣ
ಯಾರಿಂದಲೂ ಪಕ್ಷಕ್ಕೆ ಹಾನಿ ಆಗಬಾರದು ಎಂದು ಆ ರೀತಿ ಮಾಡಿರಬಹುದು, ಅದರಲ್ಲಿ ತಪ್ಪಿಲ್ಲ. ಗೋವಾಗೆ ಈಗಾಗಲೇ ನಮ್ಮ ಸದಸ್ಯರು ತೆರಳಿದ್ದಾರೆ. ಗ್ರೌಂಡ್ ರಿಯಾಲಿಟಿ ರಿಪೋರ್ಟ್ ಕೊಟ್ಟ ಮೇಲೆ ಚರ್ಚೆ ಮಾಡುತ್ತೇವೆ. ಅಲ್ಲಿನ ಉಸ್ತುವಾರಿ ಪಿ.ಚಿದಂಬರಂ, ದಿನೇಶ್ ಗುಂಡೂರಾವ್ ಜೊತೆಗೂ ಚರ್ಚಿಸುತ್ತೇವೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ