ETV Bharat / state

ಮಕ್ಕಳ ರಾಜಕೀಯ ಪ್ರವೇಶ ವಿಚಾರ... 2-3 ವರ್ಷಗಳ ಬಳಿಕ ಈ ಬಗ್ಗೆ ಮಾತು: ಸತೀಶ್​ ಜಾರಕಿಹೊಳಿ - ಸತೀಶ್​ ಜಾರಕಿಹೊಳಿ‌

ಕಾಂಗ್ರೆಸ್ ಪಕ್ಷದಲ್ಲಿ ಹುದ್ದೆ ನೀಡುವಂತೆ ನಾನು ಹೇಳಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡಲಿದೆ. ಇನ್ನು ಕೆಳಹಂತದಲ್ಲಿ ಕೆಲಸ ಮಾಡಬೇಕು. ಪದಾಧಿಕಾರಿಗಳನ್ನಾಗಿ ನೇಮಕ ಮಾಡುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ‌ ಹೇಳಿದರು.

Satish Jarakiholi
ಸತೀಶ ಜಾರಕಿಹೊಳಿ
author img

By

Published : Jul 1, 2021, 2:11 PM IST

ಬೆಳಗಾವಿ: ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿರುವ ರಾಹುಲ್ ಮತ್ತು ಪ್ರಿಯಾಂಕಾಗೆ ಪಕ್ಷದಲ್ಲಿ ಪದಾಧಿಕಾರಿಗಳನ್ನಾಗಿ ನೇಮಕ ಮಾಡುವಂತೆ ನಾನು ಶಿಫಾರಸು ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ‌ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಹುದ್ದೆ ನೀಡುವಂತೆ ನಾನು ಹೇಳಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡಲಿದೆ. ಅವರಿಗೆ ಇನ್ನೂ ಸಮಯ ಇದೆ. ಹೀಗಾಗಿ ಕೆಳಹಂತದಲ್ಲಿ ಕೆಲಸ ಮಾಡಬೇಕು. ಪದಾಧಿಕಾರಿಗಳನ್ನಾಗಿ ನೇಮಕ ಮಾಡುವ ಅವಶ್ಯಕತೆ ಇಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ‌

ಈಗಾಗಲೇ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದಾರಷ್ಟೇ. ಹೀಗಾಗಿ ಅವರಿಗೂ ಅಂತಹ ಅವಸರ ಇಲ್ಲ‌. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬರಬೇಕು. ಎಲ್ಲವೂ ಅನುಭವಕ್ಕೆ ಬರಬೇಕು. ಇನ್ನೂ 2-3 ವರ್ಷಗಳ ನಂತರವಷ್ಟೇ ಪಕ್ಷದಲ್ಲಿ ಹುದ್ದೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಡಳಿತದಲ್ಲಿರುವ ಬಿಜೆಪಿಯವರೇ ಸಮಸ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ಯತ್ನಾಳ್​ ನೀಡಿರುವ ಹೇಳಿಕೆಗೆ ಸವದಿಯವರು ಈಗೇನು ಉತ್ತರಿಸುತ್ತಾರೆ. ಮೊದಲು ಯತ್ನಾಳ್​ ಹೇಳಿಕೆಗೆ ಉತ್ತರ ಕೊಡಲಿ. ಆಮೇಲೆ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡಲಿ. ಯತ್ನಾಳ್​ ಪದೇ ಪದೆ ಅವರ ಪಕ್ಷದ ಮಂತ್ರಿಗಳು, ಮುಖಂಡರ‌ ಮೇಲೆಯೇ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಅದನ್ನು ಬಗೆಹರಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.