ETV Bharat / state

ಪಕ್ಷಿಗಳಿಗೆ ಆಸರೆಯಾದ ಕೆಎಲ್​ಇ ಕಾಲೇಜ್​​ ಕ್ಯಾಂಪಸ್​​​! - ಬೇಸಿಗೆ ಬಿಸಲಿನ ತಾಪಕ್ಕೆ ಪಕ್ಷಿಗಳಿಗೆ ಆಸರೆಯಾದ ಕಾಲೇಜ ಕ್ಯಾಂಪಸ್

ಒಂದೆಡೆ ಬೇಸಿಗೆಯ ತಾಪಮಾನ ಏರುತ್ತಿದ್ದು ನೀರಿನ ಬರ ಆವರಿಸಿಕೊಳ್ಳುತ್ತಿದ್ದರೆ, ಇತ್ತ ಪಶು-ಪಕ್ಷಿಗಳಿಗಾಗಿ ಕಾಲೇಜು ವಿದ್ಯಾರ್ಥಿಗಳು ಗಿಡಗಂಟಿಗಳಲ್ಲಿ ನೀರಿಟ್ಟು ಅವುಗಳನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ಧಾರೆ.

ಕೆಎಲ್​ಇ ಕಾಲೇಜ ಕ್ಯಾಂಪಸ್
author img

By

Published : May 31, 2019, 6:54 AM IST

ಚಿಕ್ಕೋಡಿ: ಒಂದೆಡೆ ಬೇಸಿಗೆಯ ತಾಪಮಾನ ಏರುತ್ತಿದ್ದು ನೀರಿನ ಬರ ಆವರಿಸಿಕೊಳ್ಳುತ್ತಿದ್ದರೆ, ಇತ್ತ ಪಕ್ಷಿಗಳಿಗಾಗಿ ಕಾಲೇಜು ವಿದ್ಯಾರ್ಥಿಗಳು ಗಿಡಗಂಟಿಗಳಲ್ಲಿ ನೀರಿಟ್ಟು ಅವುಗಳನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ಧಾರೆ.

ಚಿಕ್ಕೋಡಿಯ ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಪರಿಸರ ಸ್ನೇಹಿ ಉದ್ಯಾನವನವನ್ನು ಅಭಿವೃದ್ಧಿಪಡಿಸಿ ಜೀವ ಸಂಕುಲಕ್ಕೆ ಅನುಕೂಲ ಮಾಡಲಾಗಿದೆ. ಈ ಕ್ಯಾಂಪಸ್ ಸುಮಾರು ಆರರಿಂದ ಏಳು ಎಕರೆ ಇದ್ದು, ಇಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಬಿಸಿಲಿನಿಂದ ಬಳಲಿ ಬರುವ ಪಕ್ಷಿ ಸಂಕುಲದ ದಾಹ ತಣಿಸಲು ಗಿಡಗಳಲ್ಲಿ ನೀರನ್ನು ಇಟ್ಟು ಮಾನವೀಯತೆ ಮೆರೆದಿದ್ದಾರೆ.

ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರೇರಿತರಾಗಿ ಉರಿ ಬಿಸಿಲಿನಲ್ಲಿ ನೀರಿಗಾಗಿ ಪರದಾಡುತ್ತಿರುವ ಪಕ್ಷಿಗಳಿಗಾಗಿ ನೀರು ತುಂಬಿಡುವ ವ್ಯವಸ್ಥೆ ಮಾಡಿದ್ದಾರೆ.

ಕೆಎಲ್​ಇ ಕಾಲೇಜ ಕ್ಯಾಂಪಸ್

ಇನ್ನು ಕಾಲೇಜು ಆವರಣದ ಉದ್ಯಾನವನದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳು ಬೆಳೆದು ನಿಂತಿವೆ. ಇಲ್ಲಿ ಪಕ್ಷಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಬೆಳೆದು ನಿಂತಿರುವ ಉದ್ಯಾನವನದಲ್ಲಿ ಅಚ್ಚುಕಟ್ಟಾದ ಆಸನದ ವ್ಯವಸ್ಥೆಯನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಹಸಿರಿನ ಸಿರಿಯನ್ನು ಸವಿಯುತ್ತಾರೆ. ಹಾಗೂ ಕಾಲೇಜಿಗೆ ಬರುವ ಪಾಲಕರು ಒಂದಷ್ಟು ಕಾಲ ಉದ್ಯಾನದಲ್ಲಿ ವಿಶ್ರಾಂತಿ ಪಡೆದು ಹೋಗುತ್ತಾರೆ.

ಇನ್ನು ಈ ಕ್ಯಾಂಪಸ್​ ಸುಡು ಬೇಸಿಗೆಯಲ್ಲಿ ಬಾಯಾರಿ ಬರುವ ಪಕ್ಷಿಗಳ ದಾಹ ನೀಗಿಸುತ್ತಿದೆ. ಉದ್ಯಾನವನದಲ್ಲಿ ಇರುವ ಗಿಡಗಳಿಗೆ ನೀರಿನ ಡಬ್ಬಿಗಳನ್ನು ತೂಗು ಬಿಡಲಾಗಿದ್ದು, ಗುಬ್ಬಚ್ಚಿ, ಗಿಳಿ, ಪಾರಿವಾಳ ಹಾಗೂ ಇನ್ನಿತರ ಪಕ್ಷಿಗಳ ದಾಹ ನೀಗಿಲಾಗುತ್ತಿದೆ.

ಇನ್ನು ಈ ಬಗ್ಗೆ ಮಾತನಾಡಿದ ಡಾ. ಪ್ರಸಾದ ರಾಂಪೂರೆ, ಹಾಸ್ಟೆಲ್​ಗಳಲ್ಲಿ ತ್ಯಾಜ್ಯದ ನೀರನ್ನು ರೀ ಸೈಕಲ್ ಮಾಡಿ ಕಾಲೇಜ್​ ಕ್ಯಾಂಪಸ್​ನ ಆವರಣಕ್ಕೆ ಬಿಡುವುದರಿಂದ ಕಾಲೇಜು ಆವರಣ ಎಲ್ಲರ ಕಣ್ಣಿಗೆ ಹಚ್ಚು ಹಸಿರಾಗಿ ಕಾಣುತ್ತಿದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಪರಿಸರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.

Intro:ಬೇಸಿಗೆ ಬಿಸಲಿನ ತಾಪಕ್ಕೆ ಪಕ್ಷಿಗಳಿಗೆ ಆಸರೆಯಾದ ಕಾಲೇಜ ಕ್ಯಾಂಪಸ್Body:ಚಿಕ್ಕೋಡಿ :

ಒಂದೆಡೆ ಬೇಸಿಗೆಯ ತಾಪಮಾನ ಏರುತ್ತಿದ್ದು ನೀರಿನ ಬರ ಆವರಿಸಿಕೊಳ್ಳುತ್ತಿದ್ದರೆ ಇತ್ತ ಪಶು- ಪಕ್ಷಿಗಳಿಗಾಗಿ ಶಾಲೆಯ ವಿದ್ಯಾರ್ಥಿಗಳು ಗಿಡಗಂಟಿಗಳಲ್ಲಿ ನೀರಿಟ್ಟು, ಅವುಗಳನ್ನು ರಕ್ಷ ಣೆ ಮಾಡುವ ವಿಶೇಷ ಸೇವೆ ನಡೆದಿದೆ. 

ಅದು ಪರಿಸರ ಸ್ನೇಹಿ ಕಾಲೇಜು, ಕ್ಯಾಂಪಸ್ ಆವರಣದ ತುಂಬಾ ಬೆಳೆದು ನಿಂತಿರುವ ಹಸಿರು ಗಿಡಗಳು ಬಿಸಿಲಿನಿಂದ ಬಳಲಿ ಬರುವವರಿಗೆ ತಂಪ ಸಿಂಚನ ಉಂಟು ಮಾಡುವ ಗಿಡಗಳಿಗೆ ತೂಗು ಬಿಟ್ಟಿರುವ ನೀರು ಪಕ್ಷಿ ಸಂಕುಲದ ದಾಹವನ್ನು ತಣಿಸುತ್ತಿವೆ.

ಅದು ಎಲ್ಲಿ ಅಂತ್ತೀರಾ ಚಿಕ್ಕೋಡಿಯ ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜು ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಿಸಿದ್ದು ಸುಮಾರು ಆರರಿಂದ ಏಳು ಎಕರೆ ಆವರಣದಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಿದೆ.

ಕಾಲೇಜು ಆವರಣದ ಉದ್ಯಾನವನದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳು ಬೆಳೆದು ನಿಂತಿದ್ದರೆ ಅಲಂಕಾರಿಕ ಗಿಡಗಳ ಕತ್ತರಿಸಿರುವ ಪಕ್ಷಿಗಳ ಆಕೃತಿಗಳು ಗಿಡಗಳು ಗಮನಸೆಳೆಯುತ್ತಿವೆ. ಬೆಳೆದು ನಿಂತಿರುವ ಉದ್ಯಾನವನದಲ್ಲಿ ಅಚ್ಚುಕಟ್ಟಾದ ಆಸನ ವ್ಯವಸ್ಥೆಯನ್ನು ಕಲ್ಪಿಸಿದ್ದು ಬಿಡುವ ಅವಧಿಯಲ್ಲಿ ವಿದ್ಯಾರ್ಥಿಗಳು ಹಸಿರಿನ ಸಿರಿಯನ್ನು ಶ್ರಮಿಸುತ್ತಾರೆ. ಕಾಲೇಜಿಗೆ ಬರುವ ಪಾಲಕರು ಒಂದಷ್ಟು ಕಾಲ ಉದ್ಯಾನ ವಿಶ್ರಾಂತಿ ಪಡೆದುಕೊಂಡು ಹೋಗುತ್ತಾರೆ.

ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರೇರಿತರಾಗಿ ಉರಿ ಬಿಸಿಲಿನಲ್ಲಿ ನೀರಿಗಾಗಿ ಪರದಾಡುತ್ತಿರುವ ಪಶು-ಪಕ್ಷಿಗಳಿಗಾಗಿ ಗಿಡಗಂಟಿಗಳಲ್ಲಿ ನೀರು ತುಂಬಿಡುವ ಮುಖಾಂತರ ವಿದ್ಯಾರ್ಥಿಗಳು ಹಾಗೂ ಇಲ್ಲಿನ ಸಿಬ್ಬಂಧಿಗಳು ಮಾನವೀಯತೆ ಮೆರೆದಿದ್ದಾರೆ. 

ಪ್ರಸಕ್ತ ಕಡು ಬರಗಾಲದಲ್ಲಿ ಬಾಯಾರಿ ಬರುವ ಪಕ್ಷಿ ಸಂಕುಲಗಳ ದಾಹ ನೀಗಿಸುತ್ತಿದೆ. ಉದ್ಯಾನವನದಲ್ಲಿ ಇರುವ ಗಿಡಗಳಿಗೆ ನೀರು ಡಬ್ಬಿಗಳನ್ನು ತೂಗು ಬಿಡಲಾಗಿದ್ದು ಗುಬ್ಬಚ್ಚಿ, ಗಿಳಿ, ಪಾರಿವಾಳ ಹಾಗೂ ಇನ್ನಿತರ ಪಕ್ಷಿ ಸಂಕುಲಗಳ ದಾಹ ನೀಗಿಸುತ್ತಿದೆ ಈ ಕಾಲೇಜು ಆವರಣ.

ಕಳೆದ ಎರಡು ತಿಂಗಳಿನಿಂದ ಕೃಷ್ಣೆ ಬತ್ತಿದ್ದು ಕುಡಿಯಲು ನೀರಿಲ್ಲ ನೀವು ಹೇಗೆ ಪ್ರಸ್ತುತ ದಿನಗಳಲ್ಲಿ ಹಸಿರು ಮನೆ (ಗ್ರೀನ್ ಬಿಲ್ಡಿಂಗ್) ಪರಿಕಲ್ಪನೆ ಮಾಡಿದ್ದೀರಿ ಎಂದು ಕೇಳಬಹುದು. ಆದರೆ, ನಾವು ಹಾಸ್ಟೆಲ್ ಗಳಲ್ಲಿ ತ್ಯಾಜ್ಯದ ನೀರನ್ನು ರಿ ಸೈಕಲ್ ಬಿನ್ ಮಾಡಿ ಕಾಲೇಜ ಕ್ಯಾಂಪಸ್ ನ ಆವರಣಕ್ಕೆ ಬಿಡುವುದರಿಂದ ಇಷ್ಟು ಹಸಿರಾಗಿ ಎಲ್ಲರ ಕಣ್ಣಿಗೆ ಹಚ್ಚು ಹಸಿರಾಗಿ ಗಿಡಗಳು ಕಾಣುತ್ತಿವೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಪರಿಸರ ಪ್ರಾಮುಖ್ಯತೆ ಹಾಗೂ‌ ಕಾಳಜಿ‌ ಬಗ್ಗೆ ಹೇಳಲಾಗುತ್ತಿದ್ದು ಪಾಲಕರು ತಮ್ಮ ಮನೆಗಳಲ್ಲಿ ವರ್ಷಕ್ಕೆ ಒಂದು ಗಿಡದಂತೆ ಗಡಗಳನ್ನು ಬೆಳೆಸಿ ತಾನಾಗಿಯೇ ನಮ್ಮ ಭಾಗಕ್ಕೆ ಮಳೆ ಯಾಗುತ್ತದೆ ಎಂದು ಪ್ರಾಚಾರ್ಯ
ಡಾ.ಪ್ರಸಾದ ರಾಂಪೂರೆ ಹೇಳಿದರು

ಬೈಟ್ 1 : ಅಕ್ಷತಾ ಹುಣಕಡ್ಲಿ (ವಿದ್ಯಾರ್ಥಿನಿ)

ಬೈಟ್ 2 : ಪುಂಡಲಿಕ (ವಿದ್ಯಾರ್ಥಿ)

ಬೈಟ್ 3 : ಡಾ.ಪ್ರಸಾದ ರಾಂಪೂರೆ (ಪ್ರಾಚಾರ್ಯರು ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯ ಚಿಕ್ಕೋಡಿ)

ಈ ಒಂದು ಪ್ಯಾಕೆಜನ್ನು ವೈಸ್ ಓವರ ಮೂಲಕ ನೀಡಿದರೆ ಆದಷ್ಟು ವಿದ್ಯಾರ್ಥಿಗಳು ಈ ವಿಡಿಯೋವನ್ನು ಶೇರ ಮಾಡುತ್ತಾರೆ ಅದಕ್ಕಾಗಿ‌ ಈ ಪ್ಯಾಕ್ಕೆಜ್ ಗೆ ವೈಸ್ ಓವರ್ ಕೊಡಿ

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.