ETV Bharat / state

6 ತಿಂಗಳಲ್ಲಿ 9 ಬೈಕ್ ಕಳ್ಳತನ.. ಬೆಳಗಾವಿಯಲ್ಲಿ ಖತರ್ನಾಕ್ ಕಳ್ಳರ ಬಂಧನ - ಬೆಳಗಾವಿಯಲ್ಲಿ ಖತರ್ನಾಕ್ ಕಳ್ಳರ ಬಂಧನ

ಬೆಳಗಾವಿಯಲ್ಲಿ ಆರು ತಿಂಗಳಿನಲ್ಲಿ ಒಂಬತ್ತು ಬೈಕ್​ ಕಳ್ಳತನ ಮಾಡಿದ್ದ, ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Khatarnak thieves arrested in Belgaum
ಬೆಳಗಾವಿಯಲ್ಲಿ ಖತರ್ನಾಕ್ ಕಳ್ಳರ ಬಂಧನ
author img

By

Published : Jul 12, 2022, 5:50 PM IST

ಬೆಳಗಾವಿ: ಮೂಡಲಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮೂಡಲಗಿ ಪಟ್ಟಣದ ಗವಿ ತೋಟದ ಆನಂದ ಶರತ್ ಚೌಗಲಾ(25), ಕಲ್ಲಪ್ಪ ಮಲ್ಲಿಕಾರ್ಜನ ಬಿಸನಕೊಪ್ಪ (27), ಬಸವರಾಜ ಶ್ರೀಕಾಂತ ನಿಡಗುಂದಿ (26) ಬಂಧಿತರು.

ಪಟ್ಟಣದ ಗೋಕಾಕ್​ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೂವರನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಬೈಕ್ ನಿಲ್ಲಿಸದೇ ಪರಾರಿಯಾಗುತ್ತಿದ್ದರು. ಹಿಂಬಾಲಿಸಿ ಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ 6 ತಿಂಗಳಿನಿಂದ 9 ಬೈಕ್ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿ ಕೊಂದು ಸುಟ್ಟು ಹಾಕಿದ ಪತಿ.. ತಲೆ ಬೋಳಿಸಿಕೊಂಡು ಪರಾರಿ ಆಗಿದ್ದ ಪತಿ ಸೇರಿ ಇಬ್ಬರು ಅಂದರ್

ಮೂಡಲಗಿಯಲ್ಲಿ ಒಂದು ಬೈಕ್, ಗೋಕಾಕ್​ ತಾಲೂಕಿನ ಘಟಪ್ರಭಾದಲ್ಲಿ ಒಂದು, ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಒಂದು, ಪಾಲಬಾವಿ ಗ್ರಾಮದಲ್ಲಿ ಒಂದು, ಮುಧೋಳ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಾಲ್ಕು, ಸೈದಾಪುರದಲ್ಲಿ ಒಂದು ಬೈಕ್ ಕಳವು ಮಾಡಿದ್ದಾರೆ. ಪಿಎಸ್‌ಐ ಎಚ್.ವೈ. ಬಾಲದಂಡಿ ನೇತೃತ್ವದಲ್ಲಿ ಸಿಬ್ಬಂದಿ ಆರ್‌.ಎಸ್‌. ಪೂಜೇರಿ, ಎಸ್.ಜಿ.ಮನ್ನಾಪುರ ಕಾರ್ಯಾಚರಣೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.