ETV Bharat / state

ಪಠ್ಯ ಪರಿಷ್ಕರಣೆಯ ಪ್ರಮಾದಗಳ ಬಗ್ಗೆ ಪ್ರತಿರೋಧ ತೀವ್ರ.. ಸರ್ಕಾರದ ವಿರುದ್ಧ ಸಾಹಿತಿಗಳಿಂದ ದೊಡ್ಡ ಸಂಘರ್ಷ!?

author img

By

Published : May 31, 2022, 3:50 PM IST

Updated : May 31, 2022, 4:06 PM IST

10ನೇ ತರಗತಿಯ ಪಠ್ಯದಲ್ಲಿ ಲೇಖಕ ದೇವನೂರು ಮಾಹಾದೇವ ಅವರ ಪಾಠ ಸೇರಿಸಲಾಗಿದೆ. ದೇವನೂರು ಮಹಾದೇವ ಬರೆದ 'ಎದೆಗೆ ಬಿದ್ದ ಅಕ್ಷರ' ಎಂಬ ಗದ್ಯಪಾಠ ಸೇರಿಸಲಾಗಿದೆ. ಆದರೆ, ನನ್ನ ಪಾಠ ಸೇರ್ಪಡೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಲೇಖಕ ದೇವನೂರು ಮಹಾದೇವ ಅವರು ಹೇಳಿಕೆ ನೀಡಿದ್ದಾರೆ. ಇವೆಲ್ಲಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿವೆ..

ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆಯಾ ಪಠ್ಯಪುಸ್ತಕ ವಿಚಾರ

ಬೆಂಗಳೂರು : ಪಠ್ಯ ಪರಿಷ್ಕರಣೆ ವಿವಾದ ಹೊಸ ಸ್ವರೂಪ ಜತೆಗೆ ಎರಡು ಆಯಾಮ ಪಡೆದುಕೊಂಡಿದೆ. ಒಂದು ಕಡೆ ಪಠ್ಯಪುಸ್ತಕದಿಂದ ತಮ್ಮ ಲೇಖನ ಕೈಬಿಡುವಂತೆ ಸಾಹಿತಿಗಳು ಆಗ್ರಹ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಷ್ಠಾನಗಳಿಂದ ಸಾಹಿತಿಗಳು ಹೊರ ನಡೆಯುತ್ತಿದ್ದಾರೆ. ಇದರಿಂದಾಗಿ ವಿವಾದ ಮತ್ತಷ್ಟು ಜಟಿಲವಾಗುವಂತಾಗಿದೆ. ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಬಿಸಿತುಪ್ಪವಾಗಿ ಪರಿಣಮಿಸಿದೆ.

ರಾಜೀನಾಮೆ ಅಸ್ತ್ರ: ನಾಡಗೀತೆಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರದ ಧೋರಣೆ ಖಂಡಿಸಿ ಕುವೆಂಪು ಅವರ ಅವಮಾನವನ್ನು ಪ್ರತಿಭಟಿಸಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಹಂಪ ನಾಗರಾಜಯ್ಯ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್ ಜಿ ಸಿದ್ದರಾಮಯ್ಯ ತಮ್ಮ ತಮ್ಮ ಅಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ.

ಹಂಪನಾ ಅಧ್ಯಕ್ಷ ಸ್ಥಾನದ ಜೊತೆಗೆ ಪ್ರತಿಷ್ಠಾನದ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇನ್ನು ಜಿಎಸ್ಎಸ್ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಪ್ರೊ. ಎಸ್.ಜಿ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಪ್ರತಿಷ್ಠಾನದ ಸದಸ್ಯರಾದ ಡಾ.ಹೆಚ್.ಎಸ್.ರಾಘವೇಂದ್ರ ರಾವ್, ಡಾ.ಚಂದ್ರಶೇಖರ್ ನಂಗಲಿ,ಡಾ.ನಟರಾಜ ಬೂದಾಳು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.

ರೋಹಿತ್​ ಚಕ್ರತೀರ್ಥ
ರೋಹಿತ್​ ಚಕ್ರತೀರ್ಥ

ಸಾಹಿತಿ ದೇವನೂರು ಮಹಾದೇವ, ಹಿರಿಯ ವಿದ್ವಾಂಸ ಡಾ. ಜಿ. ರಾಮಕೃಷ್ಣ ತಮ್ಮ ಲೇಖನಗಳನ್ನು ಪಠ್ಯದಿಂದ ಕೈಬಿಡುವಂತೆ ಸರ್ಕಾರವನ್ನು ಆಗ್ರಹಿಸಿದ್ದು, ಈ ಮೂಲಕ ಲೇಖನ ಕೈಬಿಡಿ ಎಂಬಂತಹ ಅಭಿಯಾನ ಆರಂಭಗೊಂಡಂತಾಗಿದೆ. ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಒತ್ತಾಯಿಸಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ವಿವಾದಕ್ಕೆ ತೆರೆ ಎಳೆಯುವಂತೆ ಬರಗೂರು ರಾಮಚಂದ್ರಪ್ಪ, ಹಂಪನಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸಾಹಿತಿ ದೇವನೂರು ಮನವಿ : 10ನೇ ತರಗತಿಯ ಪಠ್ಯದಲ್ಲಿ ಸಾಹಿತ್ಯದ ದಿಗ್ಗಜ ದೇವನೂರು ಮಾಹಾದೇವ ಅವರ ಪಾಠ ಸೇರಿಸಲಾಗಿದೆ. ದೇವನೂರು ಮಹಾದೇವ ಬರೆದ ಎದೆಗೆ ಬಿದ್ದ ಅಕ್ಷರ ಎಂಬ ಗದ್ಯಪಾಠ ಸೇರಿಸಲಾಗಿದೆ. ಆದರೆ, ನನ್ನ ಪಾಠ ಸೇರ್ಪಡೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಲೇಖಕ ದೇವನೂರು ಮಹಾದೇವ ಅವರು ಹೇಳಿದ್ದಾರೆ. ಸದ್ಯ ಶುರುವಾಗಿರುವ ಪಠ್ಯ ಪರಿಷ್ಕರಣೆ ಜಟಾಪಟಿ ಹಿನ್ನೆಲೆಯಲ್ಲಿ ನನ್ನ ಕಥನದ ಭಾಗವನ್ನ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷ.

ಹತ್ತನೇ ತರಗತಿಯ ಪಠ್ಯದಲ್ಲಿ ಪಾಠ ಸೇರಿಸಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ, ಪಠ್ಯದಲ್ಲಿ ಈ ಹಿಂದೆ ಇದ್ದ ಎಲ್.ಬಸವರಾಜು, ಎ.ಎನ್‌. ಮೂರ್ತಿರಾವ್‌, ಪಿ. ಲಂಕೇಶ್‌, ಸಾರಾ ಅಬೂಬಕರ್‌ ಅವರ ಕತೆ, ಲೇಖನಗಳನ್ನು ಕೈಬಿಟ್ಟಿರುವವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಅಂತಲೇ ಅರ್ಥ. ಆದ್ದರಿಂದ ನನ್ನ ಪಾಠ ಸೇರಿಸಿದ್ದರೆ ತೆಗೆಯಬೇಕು ಎಂದು ಸೂಚಿಸಿದ್ದಾರೆ.

ದೇವನೂರ ಮಹಾದೇವ
ದೇವನೂರ ಮಹಾದೇವ

ನನ್ನ ಬರಹದ ಆಯ್ಕೆಗೆ ನನ್ನ ಸಮ್ಮತಿ ಇಲ್ಲ ಎಂದಿದ್ದ ಡಾ.ಜಿ.ರಾಮಕೃಷ್ಣ : ದೇವನೂರು ಬೆನ್ನಲ್ಲೇ ಪಠ್ಯ ಪರಿಷ್ಕರಣಾ ಸಮಿತಿ ನನ್ನ ಯಾವುದಾದರೂ ಬರಹವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ ಎಂದು ಹಿರಿಯ ವಿದ್ವಾಂಸ ಡಾ. ಜಿ. ರಾಮಕೃಷ್ಣ ಅವರು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ತೀರಾ ಅಪ ಮಾರ್ಗದಲ್ಲಿ ಸಾಗುತ್ತಿದೆ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿ ಮಾಡಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿನ ದುರಂತ ಎಂದು ಅಸಮಾಧಾನ ಹೊರ ಹಾಕಿದ್ದಾರೆ‌.

ಪತ್ರ ಬರೆದ ಸಾಹಿತಿಗಳು : ರಾಜ್ಯದ ಪ್ರೌಢಶಿಕ್ಷಣ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದ ಕುರಿತು ಸಾಹಿತಿಗಳಾದ ಬರಗೂರು ರಾಮಚಂದ್ರ ಹಾಗೂ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಪಠ್ಯ ಪುಸ್ತಕಗಳ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕು, ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಬರಗೂರು, ಕುವೆಂಪು ಪಾಠ ಇರುವ 4ನೇ ತರಗತಿ ‘ಪರಿಸರ ಅಧ್ಯಯನ’ ಪುಸ್ತಕದ ಪರಿಷ್ಕರಣೆ ಮಾಡಿದ್ದು ನಾವಲ್ಲ. ಕುವೆಂಪು ಕುರಿತ ಪರಿಚಯವನ್ನು ನನ್ನ ನೇತೃತ್ವದ ಸಮಿತಿಯು ಬರೆದಿದೆ ಎಂದು ಹೇಳಲಾಗ್ತಿದೆ. ಈ ಪರಿಚಯವು ಪಠ್ಯ ಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಇದನ್ನ ಬರೆದಿಲ್ಲ. ನಾನು ಕುವೆಂಪು ಅವರ ಮನುಜ ಮತ ವಿಶ್ವಪಥ ಸಂದೇಶದ ಬೆಳಕಿನಲ್ಲಿ ಸಾಗುತ್ತಿದ್ದೇನೆ. ನನ್ನಂತವರು ಅವರ ಅರ್ಥಪೂರ್ಣ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ‌.

ಸಾಹಿತಿಗಳ ಸಭೆ
ಸಾಹಿತಿಗಳ ಸಭೆ

ಇನ್ನೊಂದೆಡೆ ಪರಿಷ್ಕೃತ ಚಕ್ರತೀರ್ಥ ಸಮಿತಿಯ ಪಠ್ಯವನ್ನು ತಡೆಹಿಡಿಯಿರಿ ಎಂದು ಪ್ರೊ. ಹಂಪ ನಾಗರಾಜಯ್ಯ ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದು, ವಿದ್ಯಾರ್ಥಿಗಳು, ಪೋಷಕರಲ್ಲದೇ ಜನರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಿ ಎಂದ ನಿರಂಜನಾರಾಧ್ಯ : ಪ್ರಸ್ತುತ ನಡೆಸಿರುವ ಪಠ್ಯಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಿ ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಒತ್ತಾಯಿಸಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕ ರೂಪಿಸುವ ವೇಳೆ ಅಥವಾ ಪರಿಷ್ಕರಿಸುವಾಗ ಪ್ರಮಾಣೀಕರಿಸಿದ ಚೌಕಟ್ಟನ್ನು ಅನುಸರಿಸಬೇಕಿದೆ.

ಪಠ್ಯದಲ್ಲಿ ವಿಷಯದ ಜತೆಗೆ ವಸ್ತುನಿಷ್ಠತೆ, ಸಾಕ್ಷ್ಯಾಧಾರಗಳು ಮತ್ತು ಪಠ್ಯದ ಮೂಲಕ ಮಕ್ಕಳಲ್ಲಿ ಬೆಳೆಸಬೇಕಾದ ಮೌಲ್ಯಗಳು ಪ್ರಾಮುಖ್ಯತೆ ಪಡೆಯುತ್ತವೆ. ವಿಷಯ ಆಯ್ಕೆಯ ಜೊತೆಗೆ ಲೇಖಕರ ಹಿನ್ನೆಲೆ ಮತ್ತು ಅದನ್ನು ಸಮರ್ಥಿಸಬಹುದಾದ ಸಂಶೋಧನಾತ್ಮಕ ಪುರಾವೆ ಮಕ್ಕಳಿಗೆ ಆದರ್ಶವಾಗುತ್ತದೆ ಎಂದು ಹೇಳಿದ್ದಾರೆ.

ಆಡಳಿತ ಪಕ್ಷದ ಸದಸ್ಯರಿಂದಲೇ ಸಮಿತಿಗೆ ವಿರೋಧ : ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಿ, ವರದಿಯನ್ನು ತಿರಸ್ಕರಿಸಬೇಕೆಂದು ಮಾಜಿ ಶಿಕ್ಷಣ ಸಚಿವರೂ ಆಗಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ. ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವವನ್ನು ತಿಳಿಸಬೇಕು. ಆದರೆ, ಪ್ರಜಾಪ್ರಭುತ್ವ ಬಿಟ್ಟು ಕೇಸರೀಕರಣ ಮಾಡಲಾಗುತ್ತಿದೆ ಎಂದು ಆಡಳಿತಾರೂಢ ಪಕ್ಷದ ಸದಸ್ಯರೇ ಆರೋಪಿಸಿರುವುದು ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ.

ಆದಿಚುಂಚನಗಿರಿ ಮಠದ ವಿರೋಧ : ಇದರ ನಡುವೆ ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳು ಸರ್ಕಾರಕ್ಕೆ ಪತ್ರ ಬರೆದು ಕುವೆಂಪು ಅವರನ್ನು ಅಪಮಾನಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ನಾಡಗೀತೆಯಾಗಿ ಘೋಷಣೆ ಮಾಡಬೇಕು ಎಂದು ಯಾರೂ ಕೇಳಿರಲಿಲ್ಲ. ಅದು ಸರ್ಕಾರವೇ ತೆಗೆದುಕೊಂಡ ತೀರ್ಮಾನವಾಗಿತ್ತು.

ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯಾಗಿರುವ ಅಧಿಕೃತ ನಾಡಗೀತೆಯನ್ನು ಹಾಡಿ ಕೋಟಿ ಕೋಟಿ ಕನ್ನಡಿಗರು ಸಂಭ್ರಮಿಸಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಆದರೆ, ಈಚೆಗೆ ಕೆಲವರು ನಾಡಗೀತೆಯನ್ನು ತಿರುಚಿ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರ್ಕಾರದ ತೀರ್ಮಾನವನ್ನು ಗೇಲಿ ಮಾಡುತ್ತಿರುವಂತಿದೆ. ಅಷ್ಟೇ ಅಲ್ಲ, ಮಹಾಕವಿಗಳೂ ರಾಷ್ಟ್ರಕವಿಗಳೂ ಆಗಿರುವ ಕುವೆಂಪು ಅವರ ಬಗ್ಗೆ ಅತ್ಯಂತ ಕೀಳುಭಾಷೆಯಲ್ಲಿ ಅವಹೇಳನಕಾರಿ ಲೇಖನಗಳನ್ನು ಬರೆದಿದ್ದಾರೆ.

ಕುವೆಂಪುಗೆ ಅಪಮಾನ ಮಾಡಲಾಗಿದೆ ಎನ್ನಲಾದ ಬರಹ
ಕುವೆಂಪುಗೆ ಅಪಮಾನ ಮಾಡಲಾಗಿದೆ ಎನ್ನಲಾದ ಬರಹ

ನಾಡಗೀತೆಯನ್ನು ಅವಮಾನಿಸುವುದೆಂದರೆ ರಾಷ್ಟ್ರಗೀತೆಯನ್ನು ಅವಮಾನಿಸಿದಂತೆ ; ಹಾಗೂ ನೆಲದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಪ್ರಕಾರ ಸರ್ಕಾರವು ಕ್ರಮ ಜರುಗಿಸುತ್ತದೆಂದು ಭಾವಿಸುತ್ತೇವೆ ಹಾಗೂ ಈ ಮೂಲಕ ಸರ್ಕಾರವು ಕಾನೂನು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ಕ್ಷಮಿಸುವುದಿಲ್ಲ ಎಂಬ ಸಂದೇಶ ರವಾನಿಸುತ್ತದೆ ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದು ಶ್ರೀಗಳು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಮಠದ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಕ್ಷಣವೇ ಶಿಕ್ಷಣ ಸಚಿವರಿಗೆ ನಿರ್ದೇಶನ ನೀಡಿ ಆದಿಚುಂಚನಗಿರಿ ಶ್ರೀಗಳ ಬಳಿ ಮಾತುಕತೆ ನಡೆಸುವಂತೆ ಕಳುಹಿಸಿಕೊಟ್ಟರು. ಶಿಕ್ಷಣ ಸಚಿವರು ಕಾನೂನು ಕ್ರಮದ ವಿಚಾರ ಪೊಲೀಸರು ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿ ಪಠ್ಯಪುಸ್ತಕದಿಂದ ಕುವೆಂಪು ಪಾಠ ಕಡಿತ ಮಾಡಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ರಾಜೀನಾಮೆ ಬದಲು ಹೋರಾಟ ನೇತೃತ್ವವಹಿಸಿ : ಇನ್ನು ಸಾಹಿತಿಗಳು ರಾಜೀನಾಮೆ ನೀಡದೆ ಹೋರಾಟದ ನೇತೃತ್ವ ವಹಿಸಬೇಕು ಎನ್ನುವ ಕೂಗು ಆರಂಭಗೊಂಡಿದೆ. ಕುವೆಂಪು ಅವರ ಅವಮಾನವನ್ನು ಪ್ರತಿಭಟಿಸಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಹಂಪನಾ ಅವರು ಹಾಗೂ ಜಿಎಸ್ಎಸ್ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿರುವುದು ಸ್ವಾಗತಾರ್ಹ. ಆದರೆ, ರಾಜೀನಾಮೆ ಪರಿಹಾರವೇ? ರೋಗಿ ಬಯಸಿದ್ದೂ ಹಾಲು ಅನ್ನ,ವೈದ್ಯ ಹೇಳಿದ್ದೂ ಹಾಲು ಅನ್ನ. ಅವರೂ ಅದನ್ನೇ ಬಯಸಿದ್ದರಲ್ಲವೇ? ದಯಮಾಡಿ ತಮ್ಮ ರಾಜೀನಾಮೆಯನ್ನು ಹಿಂಪಡೆದು ಹೋರಾಟದ ನಾಯಕತ್ವವಹಿಸಿಕೊಳ್ಳಿ ಎಂದು ಪ್ರಕಾಶಕ ರವೀಂದ್ರನಾಥ ಸಿರಿವರ ಒತ್ತಾಯಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಸಾಹಿತಿಗಳ ವಿಚಾರದಲ್ಲಿ ಸರ್ಕಾರ ಇನ್ನು ಮೌನವಾಗಿಯೇ ಇದೆ. ಪಠ್ಯಪುಸ್ತಕದಿಂದ ಲೇಖನ ಕೈಬಿಡಿ ಎನ್ನುವ ಪತ್ರಗಳು, ಸರ್ಕಾರದ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಸಾಹಿತಿಗಳ ರಾಜೀನಾಮೆ ಕಂಡು ಕಾಣದಂತಿದೆ. ಆಡಳಿತ ಪಕ್ಷ ಬಿಜೆಪಿ ಪಠ್ಯಪುಸ್ತಕ ಪರಿಷ್ಕರಣೆ ಸಮರ್ಥನೆಗೆ ನಿರ್ಧರಿಸಿದ್ದು, ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯಾನಕ್ಕೆ ಚಿಂತನೆ ನಡೆಸಿದೆ. ಮತ್ತೊಂದೆಡೆ ಪ್ರತಿಪಕ್ಷಗಳು ಸಾಹಿತಿಗಳ ಪರ ನಿಂತಿವೆ. ಇದರಿಂದಾಗಿ ಸರ್ಕಾರ ಮತ್ತು ಸಾಹಿತಿಗಳ ನಡುವೆ ಸಂಘರ್ಷದ ಹಾದಿ ನಿರ್ಮಾಣವಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ತಂಬಾಕು ವ್ಯಸನದಿಂದ 6 ಸೆಕೆಂಡಿಗೆ ಒಬ್ಬ ವ್ಯಕ್ತಿ ಬಲಿ: ಚೈನ್ ಸ್ಮೋಕರ್ ಆಗ್ತಿದ್ದರಾ ಹೆಣ್ಮಕ್ಕಳು?

Last Updated : May 31, 2022, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.