ETV Bharat / state

ಮಹಾರಾಷ್ಟ್ರ ಗ್ರಾಮಸ್ಥರ ನೀರಿನ ಬವಣೆ ನೀಗಿಸುತ್ತಿರುವ ಕರ್ನಾಟಕ: ಸ್ಥಳೀಯರಿಂದ ಮೆಚ್ಚುಗೆ

author img

By

Published : Dec 2, 2022, 10:37 AM IST

ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಕೆಲವು ಗ್ರಾಮಗಳಿಗೆ ಕಳೆದ ಎರಡು ದಿನಗಳಿಂದ ನೀರು ಹರಿಸಿ, ಅಲ್ಲಿನ ಗ್ರಾಮಸ್ಥರ ನೀರಿನ ಬವಣೆ ಕಡಿಮೆ ಮಾಡಿದ್ದು, ಕರ್ನಾಟಕ ಸರ್ಕಾರಕ್ಕೆ ಅಲ್ಲಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.

karnataka supply water to maharashtra villagers
ಮಹಾರಾಷ್ಟ್ರ ಗ್ರಾಮಸ್ಥರ ನೀರಿನ ಬವಣೆ ನೀಗಿಸುತ್ತಿರುವ ಕರ್ನಾಟಕ ಸರ್ಕಾರ

ಅಥಣಿ: ಮಹಾರಾಷ್ಟ್ರ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಜತ್ತದ 42 ಗ್ರಾಮಸ್ಥರು ಕರ್ನಾಟಕ ಸೇರಲು ಮುಂದಾಗಿದ್ದಾರೆ. ಈ ಬೆನ್ನಲ್ಲೇ ಮಾನವೀಯ ದೃಷ್ಟಿಯಿಂದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಕೆಲವು ಪ್ರದೇಶಕ್ಕೆ ಕರ್ನಾಟಕ ಸರ್ಕಾರವು ನೀರು ಹರಿಸಿ ಕೆರೆ ತುಂಬಿಸಲು ಮುಂದಾಗಿದ್ದು, 'ಮಹಾ' ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ ಬಿ ಪಾಟೀಲ್ ಅವರು ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ರೂಪಿಸಿ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ಹಲವು ಭಾಗಗಳ ಬರಡು ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದರು.

ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ

ಮಹಾರಾಷ್ಟ್ರದ ಹಲವು ಗ್ರಾಮಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಳೆದ 45 ವರ್ಷದಿಂದ ನಿರಾವರಿ ಯೋಜನೆ ರೂಪಿಸಲಾಗುವುದು ಎಂದು ಅಲ್ಲಿನ ಸರ್ಕಾರ ಭರವಸೆ ನೀಡಿದೆಯೇ ಹೊರತು ಇದುವರೆಗೂ ಯೋಜನೆ ರೂಪಿಸಿಲ್ಲ. ಇದನ್ನೇ ಗಂಭೀರವಾಗಿ ತೆಗೆದುಕೊಂಡು ಮಹಾರಾಷ್ಟ್ರ ಕನ್ನಡಿಗಳು, ಮೂಲಭೂತ ಸೌಕರ್ಯ ನೀಡಿ ಇಲ್ಲಾಂದ್ರೆ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಮಹಾ ಸರ್ಕಾರಕ್ಕೆ ಬೇಡಿಕ್ಕೆ ಇಟ್ಟಿದ್ದರು.

ಇದನ್ನೂ ಓದಿ: ಗಡಿ ವಿವಾದದಲ್ಲಿ ಸರ್ಕಾರ ರಾತ್ರಿ ರಾಜಕಾರಣ ಮಾಡೋದು ಬಿಡಲಿ: ಡಿ ಕೆ ಶಿವಕುಮಾರ್​

ಈ ನಡುವೆ ಬಬಲೇಶ್ವರ ಶಾಸಕ ಎಂ ಬಿ ಪಾಟೀಲ್ ಮಹಾರಾಷ್ಟ್ರದ ಕೆಲವು ಗ್ರಾಮಗಳಿಗೆ ಕಳೆದ ಎರಡು ದಿನಗಳಿಂದ ನೀರು ಹರಿಸಿ, ಅಲ್ಲಿನ ಗ್ರಾಮಸ್ಥರ ನೀರಿನ ಬವಣೆ ಕಡಿಮೆ ಮಾಡಿದ್ದು, ಕರ್ನಾಟಕ ಸರ್ಕಾರಕ್ಕೆ ಅಲ್ಲಿನ ಜನ ಅಭಿನಂದನೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಗಡಿ ಗ್ರಾಮಗಳಾದ ಸಂಕ್, ತಿಕ್ಕುಂಡಿಯಲ್ಲಿ ಕರ್ನಾಟಕ ಸರ್ಕಾರ ಕೆರೆ ತುಂಬಿಸಲು ಪ್ರಾರಂಭಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ.. ರಾಜ್ಯದ ಪರ ಸಮರ್ಥ ವಾದ ಮಂಡನೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.