ಬೆಳಗಾವಿ : ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಸಭೆ ಮಾಡಬಾರದಿತ್ತು ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಹೇಳಿದರು. ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿ ಗಡಿ ವಿವಾದ ಮುಗಿದ ಅಧ್ಯಾಯ ಮತ್ತೆ ಯಾಕೆ ಈ ಸಭೆ!? ಎಂದು ಪ್ರಶ್ನಿಸಿದರು.
ಒಂದು ಯಥಾವತ್ತಾಗಿ ಕಾಪಾಡಬೇಕು, ಇಲ್ಲಾ ಮಹಾಜನ್ ವರದಿ ಜಾರಿ ಆಗಬೇಕು. ಇದನ್ನ ಬಿಟ್ಟು ಸಭೆ ಮಾಡಿರುವುದು ಸರಿ ಅಲ್ಲ, ರಾಜ್ಯ ಸರ್ಕಾರ ಗಡಿ ವಿಚಾರದಲ್ಲಿ ಭಾರಿ ಪ್ರಮಾಣದ ತಪ್ಪು ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಗೃಹ ಇಲಾಖೆ ಶಾಂತಿ ಕಾಪಾಡಲು ವಿಫಲವಾಗಿದೆಯಾ? ರಾಜ್ಯ ಸರ್ಕಾರ ಅಷ್ಟು ಅಸಮರ್ಥವಾಗಿದಿಯಾ? ಯಾವ ಕಾರಣಕ್ಕಾಗಿ ಸಮಿತಿ ರಚನೆ ಮಾಡಬೇಕು? ಗಡಿ ವಿಚಾರದಲ್ಲಿ ಸರ್ಕಾರ ಸಂಪೂರ್ಣಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಸಿಎಂ ಬೊಮ್ಮಾಯಿ ಅವರಿಗೆ ಸರ್ವ ಪಕ್ಷ ಸಭೆ ಕರೆಯಲು ಏನೂ ಮುಜುಗರವೇ ಎಂದು ಎಚ್ ಕೆ ಪಾಟೀಲ್ ಪ್ರಶ್ನಿಸಿದರು.
ಇದನ್ನೂ ಓದಿ :ಬೆಳಗಾವಿ ಗಡಿ ವಿವಾದ: ಸಾಂವಿಧಾನಿಕ ಮಾರ್ಗದ ಮೂಲಕವೇ ಪರಿಹಾರ- ಅಮಿತ್ ಶಾ