ETV Bharat / state

'ಶಾಸಕ ಯತ್ನಾಳ್‌ಗೆ‌ ತಾಕತ್ತಿದ್ರೆ___ ನಿನ್ನ ಗಂಡಸು ಅಂತೇವೆ, ಇಲ್ಲದಿದ್ರೇ..'

ಮಾರ್ವಾಡಿಗಳ ಬಳಿ ಲಂಚ ತಿಂದು ರೋಲ್‌ಕಾಲ್ ಮಾಡಿ ನಮಗೆ ಪಾಠ ಮಾಡಲು ಬರ್ತೀರಿ‌ ಎಂದು ಶಾಸಕ ಯತ್ನಾಳ್​ ವಿರುದ್ಧ ಬೆಳಗಾವಿಯಲ್ಲಿ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಕಿಡಿ ಕಾರಿದ್ದಾರೆ..

sd
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ಕರವೇ ಪ್ರತಿಭಟನೆ
author img

By

Published : Nov 22, 2020, 4:34 PM IST

ಬೆಳಗಾವಿ : ಕನ್ನಡಪರ ಸಂಘಟನೆಗಳ ಮುಖಂಡರು ರೋಲ್‌ಕಾಲ್ ಹೋರಾಟಗಾರರು ಎಂಬ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿಕೆ ಖಂಡಿಸಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ಕರವೇ ಪ್ರತಿಭಟನೆ

ನಗರದ ನ್ಯೂ ಸರ್ಕ್ಯೂಟ್ ಹೌಸ್‌ನಿಂದ ಅಶೋಕ ವೃತ್ತವರೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಅಣಕು ಶವಯಾತ್ರೆ ನಡೆಸಿ ಬೆಂಕಿ ಇಟ್ಟು ಬ್ಲ್ಯಾಕ್‌ಮೇಲ್​ ಯತ್ನಾಳ್​ ವಿರುದ್ಧ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಯಡಿಯೂರಪ್ಪ ಹಾಗೂ ಸರ್ಕಾರ ಬ್ಲ್ಯಾಕ್‌ಮೇಲ್ ಮಾಡಲು ನಮ್ಮನ್ನು‌ ರೋಲ್‌ಕಾಲ್ ಗಿರಾಕಿ ಎನ್ನುತ್ತಿದ್ದಾರೆ‌.

ಬಸನಗೌಡ ಪಾಟೀಲ್ ಯತ್ನಾಳ್​ ತಾಕತ್ತಿದ್ರೆ ಬೆಳಗಾವಿಗೆ ಬಂದು ನಿಮ್ಮದೇ ಪಕ್ಷದ ಅಭಯ್ ಪಾಟೀಲ್​, ಅನಿಲ್ ಬೆನಕೆ ಜೊತೆಗೂಡಿ ಎಂಇಎಸ್ ವಿರುದ್ಧ ಹೇಳಿಕೆ ನೀಡು, ಆಗ ನಿನ್ನ ಗಂಡಸು ಅಂತೇವೆ ಎಂದು ಸವಾಲು ಹಾಕಿದರು.

ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ. ಕೊರೊನಾ‌ ವಾರಿಯರ್ಸ್‌ಗೆ ಪ್ರೋತ್ಸಾಹ ಹಣ ನೀಡುತ್ತಿಲ್ಲ. ಜಾತಿ ವೈಷಮ್ಯ ಬಿತ್ತಲು ಮರಾಠ ಸಮುದಾಯಕ್ಕೆ ₹50 ಕೋಟಿ ಹಣ ನೀಡ್ತಿದೀರಾ.. ನಾವು ಮರಾಠಾ ಸಮುದಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ.

ಎಂಇಎಸ್, ಶಿವಸೇನೆಯವರು ಉದ್ಧಟತನ ಹೇಳಿಕೆ ನೀಡುತ್ತಿದ್ದು, ಬಿಜೆಪಿಯ ಯಾರಾದರೂ ಒಬ್ಬ ಎಂಎಲ್​ಎ, ಎಂಪಿ ಇದರ ವಿರುದ್ಧ ಹೇಳಿಕೆ ನೀಡಿ ವಿರೋಧಿಸಲಿ ಎಂದು ಸವಾಲು ಹಾಕಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.