ಅಥಣಿ/ಬೆಳಗಾವಿ: ತಮಿಳುನಾಡಿನ ಕನ್ನಡಿಗರ ಮೇಲೆ ದಬ್ಬಾಳಿಕೆ ಖಂಡಿಸಿ ಅಯ್ಯಪ್ಪ ಮಾಲಾಧಾರಿಗಳಿಂದ ಮುಖದ ಮೇಲೆ ಕನ್ನಡ ಬಾವುಟ ಚಿತ್ರ ಬಿಡಿಸಿ ಶಬರಿಮಲೆಗೆ ಪ್ರಯಾಣ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಕನ್ನಡ ಬಾವುಟವನ್ನು ಕಾರಿನ ಮೇಲೆ ಹಾಕಿರುವ ಚಾಲಕನ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ಮಾಡಿದ್ದರು. ಕನ್ನಡಿಗರ ಮೇಲಿನ ಈ ದಬ್ಬಾಳಿಕೆಯನ್ನು ಕೆಲವು ಕನ್ನಡಪರ ಹೋರಾಟಗಾರರು, ಸಂಘಟನೆಗಳು ಖಂಡಿಸಿದ್ದವು.
ಆದರೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಸೌಮ್ಯದಿಂದಲೇ ತಮಿಳುನಾಡಿನ ಕೆಲವು ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ, ಅಯ್ಯಪ್ಪನ ದರ್ಶನಕ್ಕೆ ಕರ್ನಾಟಕದಾದ್ಯಂತ ಸಾವಿರಾರು ಭಕ್ತರು ಶಬರಿಮಲೆಗೆ ಭೇಟಿ ನೀಡಿರುವ ಹಿನ್ನೆಲೆ ತಮ್ಮ ತಮ್ಮ ವಾಹನಗಳಿಗೆ ಕನ್ನಡ ಧ್ವಜ ಹಾಗೂ ಮುಖದ ಮೇಲೆ ಕನ್ನಡ ಬಾವುಟ ಚಿತ್ರ ಬರೆದುಕೊಂಡು ಕನ್ನಡ ಅಭಿಮಾನ ಹಾಗೂ ಕನ್ನಡ ಜನರ ಬಗ್ಗೆ ಅಸಡ್ಡೆ ತೋರುವ ಜನಕ್ಕೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.