ETV Bharat / state

ಮೊದಲು ಮಹಾತ್ಮ ಶೀರ್ಷಿಕೆ ಪಡೆದವರು ಫುಲೆ : ಸಂತೋಷ ಬಡಕಂಬಿ - ಅಥಣಿಸುದ್ದಿ

ಅಥಣಿಯಲ್ಲಿ ಜ್ಯೋತಿಬಾ ಫುಲೆಯವರ 129 ನೇ ಪುಣ್ಯಸ್ಮರಣೆಯನ್ನು ಮಾಳಿ ಸಮಾಜದವರು ಅದ್ದೂರಿಯಾಗಿ ಆಚರಿಸಿದರು.

ಪುಲೆಯವರ 129 ನೇ ಪುಣ್ಯಸ್ಮರಣೆ ಆಷರಣೆ
ಪುಲೆಯವರ 129 ನೇ ಪುಣ್ಯಸ್ಮರಣೆ ಆಷರಣೆ
author img

By

Published : Nov 29, 2019, 4:17 AM IST

ಅಥಣಿ : ಮಹಾತ್ಮಾ ಗಾಂಧಿಯವರಿಗೆ ಮಹಾತ್ಮ ಎಂಬ ಶೀರ್ಷಿಕೆ ನೀಡಲಾಗುವುದಕ್ಕಿಂತ ಮುಂಚೆಯೇ ಮಹಾತ್ಮಾ ಎಂಬ ಶೀರ್ಷಿಕೆ ಪಡೆದವರು ಸಾಮಾಜಿಕ ಸುಧಾರಕ ಮಹಾತ್ಮಜ್ಯೋತಿರಾವ ಗೋಂವಿದರಾವ್​ ಫುಲೆ ಎಂದು ಶಿಕ್ಷಕ ಸಂತೋಷ ಬಡಕಂಬಿ ಅಭಿಪ್ರಾಯಪಟ್ಟರು.

ಗಜಾನನ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಜ್ಯೋತಿರಾವ ಗೋಂವಿದರಾವ್​ ಫುಲೆಯವರ 129 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಫುಲೆ ಅವರು ಓರ್ವ ಚಿಂತಕ ಮತ್ತು ಬರಹಗಾರ. ಅವರ ಕೆಲಸ ಮುಖ್ಯವಾಗಿ ಅಸ್ಪೃಶ್ಯತೆ ಮತ್ತು ಜಾತಿವ್ಯವಸ್ಥೆ, ಮಹಿಳೆಯರ ವಿಮೋಚನೆ ಮತ್ತು ಸಬಲೀಕರಣದ ನಿರ್ಮೂಲನೆ, ಹಿಂದೂ ಕುಟುಂಬ ಜೀವನದ ಸುಧಾರಣೆ, ಭಾರತದ ಕೆಳಮಟ್ಟದ ಜಾತಿ ಜನರಿಗೆ ಅವರು "ದಲಿತ" ಪದವನ್ನು ಸೃಷ್ಟಿಸಿದವರು ಎಂದರು.

ವಿಧವಾ ಪುನರ್ವಿವಾಹಕ್ಕಾಗಿ ಫುಲೆ ಕೆಲಸ ಮಾಡಿದರು. 1863ರಲ್ಲಿ, ಗರ್ಭಿಣಿ ಬ್ರಾಹ್ಮಣ ವಿಧವೆಯರಿಗೆ ಸುರಕ್ಷಿತ ಸ್ಥಳದಲ್ಲಿ ಜನ್ಮ ನೀಡುವಂತೆ ಮನೆಯನ್ನು ತೆರೆದರು. ಶಿಶುಹತ್ಯೆ ತಪ್ಪಿಸಲು ಅವರು ಅನಾಥಾಶ್ರಮವನ್ನು ತೆರೆಯುತ್ತಾರೆ. ಅವರು ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಕೆಳ ಜಾತಿಯ ಜನರಿಗೆ ತಮ್ಮ ಮನೆಯ ಬಾವಿಯನ್ನು ಬಳಸಲು ಅವಕಾಶ ನೀಡಿದ್ದರು ಎಂದರು.

Intro:ಅಥಣಿಯಲ್ಲಿ ಇಂದು ಶ್ರೀ ಮಹಾತ್ಮಾ ಜ್ಯೋತಿಬಾ ಫುಲೆಯವರ ೧೨೯ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಳಿ ಸಮಾಜದವರು ಅದ್ದೂರಿಯಾಗಿ ಆಚರಿಸಿದರು
Body:ಅಥಣಿ ವರದಿ

ಮಹಾತ್ಮಾ ಗಾಂಧಿಯವರಿಗೆ ಮಹಾತ್ಮ ಎಂಬ ಶೀರ್ಷಿಕೆಯು ನೀಡಲಾಗುವುದಕ್ಕಿಂತ ಮುಂಚೆಯೇ ಮಹಾತ್ಮಾ ಎಂಬ ಪ್ರಶಸ್ತಿಯನ್ನು ಪಡೆದ ಸಾಮಾಜಿಕ ಸುಧಾರಕ ಮಹಾತ್ಮ ಫುಲೆ ಅವರು ಕೂಡಾ ಒಬ್ಬ ಭಾರತೀಯ ಸಾಮಾಜಿಕ ಸುಧಾರಕರಾಗಿ ಸಮಾನತೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ ಸಮಾಜ ಸುಧಾರಕರಾಗಿದ್ದರು ಎಂದು ಶಿಕ್ಷಕ ಸಂತೋಷ ಬಡಕಂಬಿ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ಗಜಾನನ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾತ್ಮಾ ಜ್ಯೋತಿಬಾ ಫುಲೆಯವರ ೧೨೯ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜ್ಯೋತಿರಾವ ಗೋಂವಿದರಾವ ಪುಲೆ ಅವರು ಓರ್ವ ಚಿಂತಕ ಮತ್ತು ಬರಹಗಾರ. ಅವರ ಕೆಲಸ ಮುಖ್ಯವಾಗಿ ಅಸ್ಪೃಶ್ಯತೆ ಮತ್ತು ಜಾತಿವ್ಯವಸ್ಥೆ, ಮಹಿಳೆಯರ ವಿಮೋಚನೆ ಮತ್ತು ಸಬಲೀಕರಣದ ನಿರ್ಮೂಲನೆ, ಹಿಂದೂ ಕುಟುಂಬ ಜೀವನದ ಸುಧಾರಣೆ. ಭಾರತದ ಕೆಳಮಟ್ಟದ ಜಾತಿ ಜನರಿಗೆ ಅವರು "ದಲಿತ" ಪದವನ್ನು ಸೃಷ್ಟಿಸಿದರು. ಅವರು ಕೆಳ ಜಾತಿಗಳ ಜನರಿಗೆ ಸಮಾನ ಹಕ್ಕುಗಳನ್ನು ಕೋರಿ ೧೮೭೩ರಲ್ಲಿ ಸತ್ಯಶೋಧಕ ಸಮಾಜ ರಚಿಸಿದರು. ಮಹಾರಾಷ್ಟçದಲ್ಲಿ ಸಾಮಾಜಿಕ ಸುಧಾರಣೆಗಳನ್ನು ತಂದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಪುಲೆ ಎಂದರು.

ಮುಂದುವರೆದು ಮಾತನಾಡುತ್ತಾ ಅಥಣಿ ತಾಲೂಕಿನಲ್ಲಿ ಫುಲೆಯವರ ಮಾಳಿ ಸಮುದಾಯ ಕಾರಣಾಂತರ ಗಳಿಂದಾಗಿ ಹಿಂದುಳಿಯುತ್ತಿದೆ ಫುಲೆ ಸಮುದಾಯದ ಪ್ರತಿಯೊಬ್ಬರು ಫುಲೆಯವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಎಚ್ಚೆತ್ತುಕೊಳ್ಳಬೇಕಾಗಿದೆ ಹಾಗೂ ಸಮಾಜಕ್ಕೆ ಬೇಕಾಗಿರುವ ಸರಕಾರದ ಸವಲತ್ತುಗಳನ್ನು ಪಡೆಯಲು ಒಗ್ಗಟ್ಟಿನ ಮಂತ್ರವನ್ನು ಜಪಿಸಬೇಕಿದೆ ಅದಕ್ಕಾಗಿ ನಾವೆಲ್ಲ ಫುಲೆಯವರ ತತ್ವಾದರ್ಶಗಳನ್ನು ಸಾರಿ ಒಂದಾಗೋಣ ಎಂದರು.

ಬಾಲ್ಯ ಮತ್ತು ಆರಂಭಿಕ ಜೀವನ
ಅನಂತರ ಮಾತನಾಡಿದ ಬಸವರಾಜ ಕೊಕಟನೂರ ಅವರು ಫುಲೆಯವರು ಪುಣೆಯ ಮೊದಲ ಸ್ಥಳೀಯ ಹುಡುಗಿಯರ ಶಾಲೆ ಪ್ರಾರಂಬಿಸಿ ಮಹಿಳಾ ಶಿಕ್ಷಣಕ್ಕೆ ಪ್ರಾರಂಭನೀಡಿದರು ಇದರಿಂದ ಕೆಳ ಜಾತಿಗಳು ಮತ್ತು ಮಹಿಳೆಯರು ಸಮಾಜದ ಅತ್ಯಂತ ಅನಾನುಕೂಲಕರವಾದ ವರ್ಗಗಳು ಮತ್ತು ಶಿಕ್ಷಣ ಮಾತ್ರ ಅವುಗಳನ್ನು ವಿಮೋಚನೆಗೊಳಿಸಬಹುದು ಎಂದು ಅವರು ಅರಿತುಕೊಂಡರು. ಅವರು ಪ್ರೋತ್ಸಾಹಿಸಿ ಅವರ ಹೆಂಡತಿ ಸಾವಿತ್ರಿಬಾಯಿಗೆ ಓದಲು ಮತ್ತು ಬರೆಯಲು ಸಹಾಯ ಮಾಡಿದರು. ನಂತರ ದಂಪತಿಗಳು ಪುಣೆನಲ್ಲಿ ಬಾಲಕಿಯರ ಮೊದಲ ಸ್ವದೇಶಿ ಶಾಲೆಗಳನ್ನು ಪ್ರಾರಂಭಿಸಿದರು. ಹಾಗೂ ನಮ್ಮ ಮಾಳಿ ಸಮುದಾಯ ಇಂತಹ ಮಹಾನ ಪುರುಷರನ್ನು ಮುಂದೆ ಇಟ್ಟುಕೊಂಡು ಮುನ್ನುಗ್ಗಿದರೆ ಅಭಿವೃದ್ದಿ ಖಂಡೀತ ಎಂದರು.

ನಂತರ ಮಾತನಾಡಿದ ಮಲ್ಲಿಕಾರ್ಜುನ ಬಾಳಿಕಾಯಿ ಅವರು ವಿಧವಾ ಪುನರ್ವಿವಾಹಕ್ಕಾಗಿ ಪುಲೆ ಕೆಲಸ ಮಾಡಿದರು ಮತ್ತು ೧೮೬೩ ರಲ್ಲಿ, ಗರ್ಭಿಣ ಬ್ರಾಹ್ಮಣ ವಿಧವೆಯರಿಗೆ ಸುರಕ್ಷಿತ ಸ್ಥಳದಲ್ಲಿ ಜನ್ಮ ನೀಡುವಂತೆ ಮನೆಯನ್ನು ತೆರೆಯಲಾಯಿತು. ಶಿಶುಹತ್ಯೆ ತಪ್ಪಿಸಲು ಅವರು ಅನಾಥಾಶ್ರಮವನ್ನು ತೆರೆಯುತ್ತಾರೆ. ಅವರು ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದರು ಮತ್ತು ಕೆಳ ಜಾತಿಯ ಜನರಿಗೆ ತಮ್ಮ ಮನೆ ಮತ್ತು ಅವರ ಬಾವಿಯನ್ನು ಬಳಸಲು ನೀಡಿದರು ಎಂದರು.

ಪೊಟೊ ಶೀರ್ಷಿಕೆ- ಶ್ರೀ ಮಹಾತ್ಮಾ ಜ್ಯೋತಿಬಾ ಫುಲೆಯವರ ೧೨೯ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಳಿ ಸಮಾಜದವರು.
Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.