ETV Bharat / state

ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಖಂಡಿಸಿ ಜೆಡಿಎಸ್​​ ಪ್ರತಿಭಟನೆ - ಬೆಳಗಾವಿ ಜಿಲ್ಲಾ ಸುದ್ದಿ

ಪೆಟ್ರೋಲ್​, ಡೀಸೆಲ್​​ ಏರಿಕೆ ವಿರೋಧಿಸಿ ಜೆಡಿಎಸ್​​ ಕಾರ್ಯಕರ್ತರು ಚಿಕ್ಕೋಡಿಯಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೂಲಕ‌ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

protest
ಜೆಡಿಎಸ್ ಕಾರ್ಯಕರ್ತರರಿಂದ ಪ್ರತಿಭಟನೆ
author img

By

Published : Jul 7, 2020, 6:36 PM IST

ಚಿಕ್ಕೋಡಿ: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜೆಡಿಎಸ್​​ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೊರೊನಾ ಹಾವಳಿಗೆ ರಾಜ್ಯದ ಜನರು ತತ್ತರಿಸಿದ್ದಾರೆ. ದುಡಿಯುವ ಕೈಗಳಲ್ಲಿ ಕಾಸಿಲ್ಲ. ಅಂತಹದರಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸಿದ ಜೆಡಿಎಸ್​​ ಕಾರ್ಯಕರ್ತರು

ಕಳೆದ ಬಾರಿ ಉಂಟಾದ ಪ್ರವಾಹಕ್ಕೆ ಬೆಳೆ ಹಾಗೂ ಮನೆಗಳು ಹಾನಿಗೊಂಡವು. ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಕೂಡಲೇ ಮನೆ-ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ‌ ಕಲ್ಲಪ್ಪ ಮಗೆನ್ನ ತಹಶೀಲ್ದಾರರ ಮೂಲಕ‌ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.