ETV Bharat / state

ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ: ಶಾಸಕ ಮಹೇಶ್ ಕುಮಟಳ್ಳಿ - ಈಟಿವಿ ಭಾರತ ಕನ್ನಡ

ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ದನಿಗೂಡಿಸಿದ್ದಾರೆ.

belagavi
ಶಾಸಕ ಮಹೇಶ್ ಕುಮಟಳ್ಳಿ
author img

By

Published : Jan 31, 2023, 7:28 AM IST

Updated : Jan 31, 2023, 7:56 AM IST

ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮಹೇಶ್ ಕುಮಟಳ್ಳಿ ಹೇಳಿಕೆ

ಚಿಕ್ಕೋಡಿ (ಬೆಳಗಾವಿ) : "ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆಗೆ ವಹಿಸಬೇಕು. ಹಾಗಾದಲ್ಲಿ ಯಾವುದೇ ಗೊಂದಲ ಉಂಟಾಗದೇ ಪ್ರಕರಣ ಸ್ವಚ್ಛವಾಗುತ್ತದೆ" ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

"ರಮೇಶ್ ಜಾರಕಿಹೊಳಿ ಅವರು ಹೇಳಿದ ರೀತಿಯಲ್ಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಜಾರಕಿಹೊಳಿ ಅವರನ್ನು ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದಷ್ಟು ಬೇಗ ತನಿಖೆಯಾಗಲಿ" ಎಂದು ಕುಮಟಳ್ಳಿ ಆಗ್ರಹಿಸಿದರು.

'ಚಾಣಕ್ಯ'ನ ಸಭೆ: ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಅವರು ಮೊನ್ನೆಯಷ್ಟೇ ಬೆಳಗಾವಿ ಬಿಜೆಪಿ ನಾಯಕರೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದರು. ಜಿಲ್ಲೆಯ ಬಿಜೆಪಿ ಶಾಸಕರು, ಮುಖಂಡರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ "ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೀರಾ? ಎಂದು ಅಮಿತ್​ ಶಾ ನಮ್ಮಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಎಲ್ಲಾ ಮುಖಂಡರು ಎದ್ದು ನಿಂತು ಆಂತರಿಕ ಮನಸ್ತಾಪವನ್ನು ಪಕ್ಷದ ವಿಚಾರಕ್ಕೆ ತರದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದೇವೆ. 2023ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಮಾತು ನೀಡಿದ್ದೇವೆ. ಇದನ್ನು ಕೇಳಿದ ಅಮಿತ್​ ಶಾ ಸಂತೋಷ ವ್ಯಕ್ತಪಡಿಸಿದ್ದಾರೆ" ಎಂದರು.

ಇದನ್ನೂ ಓದಿ: ಡಿಕೆಶಿ ನನ್ನ ಜೀವನ ಹಾಳು ಮಾಡಿದ್ದಾನೆ: ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಮನವಿ ಮಾಡ್ತೇನಿ: ರಮೇಶ್​ ಜಾರಕಿಹೊಳಿ

ಇತ್ತೀಚೆಗೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, "ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಾನು ಗೃಹ ಸಚಿವ ಅಮಿತ್​ ಶಾ ಅವರೊಂದಿಗೆ ಮಾತನಾಡಿದ್ದೇನೆ. ಇದರಲ್ಲಿ ಓರ್ವ ಮಹಾನ್​ ನಾಯಕನ ಕೈವಾಡ ಇರುವ ಬಗ್ಗೆ ನನ್ನ ಬಳಿ ದಾಖಲೆ ಇದೆ. ಪ್ರಕರಣವನ್ನು ಬಯಲಿಗೆ ತರುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಿದ್ದೇನೆ" ಎಂದಿದ್ದರು.

'ಸಿಡಿ ಮಹಾನಾಯಕನೇ ಡಿಕೆಶಿ': "ಡಿ.ಕೆ.ಶಿವಕುಮಾರ್ ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡಿದ್ದಾನೆ. ಈಗಾಗಲೇ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾನೆ. ಡಿಕೆಶಿ ನನ್ನ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಆಡಿಯೋ ಕೂಡ ನನ್ನ ಬಳಿ ಇದೆ. ಡಿಕೆಶಿ ಹಾಗೂ ಸಿಡಿ ಗ್ಯಾಂಗ್​ಗೆ ಶಿಕ್ಷೆ ಆಗಬೇಕು. ಸಿಡಿ ಮಹಾನಾಯಕನೇ ಡಿ.ಕೆ.ಶಿವಕುಮಾರ್​. ಅಧಿಕಾರಿಗಳ, ರಾಜಕಾರಣಿಗಳ ಸಾಕಷ್ಟು ವಿಡಿಯೋ ಅವರ ಬಳಿ ಇದೆ. ಈ ಮೂಲಕ ಬ್ಲಾಕ್​ಮೇಲ್​ ರಾಜಕಾರಣ ಮಾಡುತ್ತಿದ್ದಾರೆ" ಎಂದು ಜಾರಕಿಹೊಳ್ಳಿ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 'ಮಹಾನಾಯಕನ ಮನೆಗೆ ಕಳುಹಿಸಿದ ಬಳಿಕ ರಾಜಕೀಯ ನಿವೃತ್ತಿ': ರಮೇಶ್ ಜಾರಕಿಹೊಳಿ ಶಪಥ

Last Updated : Jan 31, 2023, 7:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.