ETV Bharat / state

ಗಡಿ ಗ್ರಾಮಗಳ ಜನರ ಸಮಸ್ಯೆ ಆಲಿಸಲು ಮುಂದಾದ ಸಂಸದ

ಕೋಟ್ಟಲಗಿ ಗ್ರಾಮಸ್ಥರಿಗೆ ಚಿಕ್ಕೋಡಿ ಪಟ್ಟಣ ದೂರವಿರುವುದರಿಂದ ಗ್ರಾಮಕ್ಕೆ ಲೋಕಸಭಾ ಸದಸ್ಯರು ಆಗಮಿಸಿ ಗ್ರಾಮಸ್ಥರ ಕುಂದು ಕೊರತೆ ಆಲಿಸುವಂತೆ ಮನವಿ ಸಲ್ಲಿಸಿದ್ದರು. ಇದರ ಪರಿಣಾಮ ಇಂದು ಗ್ರಾಮಕ್ಕೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ಜನರು ಕುಂದು ಕೊರತೆ ಆಲಿಸಿ ಮನವಿ ಸ್ವೀಕರಿಸಿದರು.

author img

By

Published : Feb 26, 2021, 5:28 PM IST

Janaspandana program
ಜನ ಸ್ಪಂದನ ಕಾರ್ಯಕ್ರಮ

ಅಥಣಿ: ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ತಾಲೂಕಿ ಕೋಟ್ಟಲಗಿ ಗ್ರಾಮದ ಜನ ಸ್ಪಂದನ ಕಾರ್ಯಕ್ರಮದ ಮೂಲಕ ಜಿಲ್ಲೆಯ ಕಟ್ಟಕಡೆಯ ಹಳ್ಳಿಗಳ ಜನರ ಕುಂದು ಕೊರತೆ ಆಲಿಸಿದರು.

ಕೋಟ್ಟಲಗಿ ಗ್ರಾಮಸ್ಥರಿಗೆ ಚಿಕ್ಕೋಡಿ ಪಟ್ಟಣ ದೂರವಿರುವುದರಿಂದ ಗ್ರಾಮಕ್ಕೆ ಲೋಕಸಭಾ ಸದಸ್ಯರು ಆಗಮಿಸಿ ಗ್ರಾಮಸ್ಥರ ಕುಂದು ಕೊರತೆ ಆಲಿಸುವಂತೆ ಮನವಿ ಸಲ್ಲಿಸಿದ್ದರು. ಇದರ ಪರಿಣಾಮ ಇಂದು ಗ್ರಾಮಕ್ಕೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಿ ಜನರು ಕುಂದು ಕೊರತೆ ಆಲಿಸಿ ಮನವಿ ಸ್ವೀಕರಿಸಿದರು.

ಗಡಿ ಗ್ರಾಮದಲ್ಲಿ ಜನ ಸ್ಪಂದನ ಕಾರ್ಯಕ್ಕೆ ಮುಂದಾದ ಚಿಕ್ಕೋಡಿ ಲೋಕಸಭಾ ಸದಸ್ಯ

ಕೋಟ್ಟಲಗಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮದ ಜನರು ಸಂಸದರಿಗೆ ಗ್ರಾಮದಲ್ಲಿ ಕುಡಿಯುವ ನೀರು, ಸುಗಮ ಸಂಚಾರಕ್ಕೆ ರಸ್ತೆ ವ್ಯವಸ್ಥೆ, ತೋಟಗಾರಿಕೆ ಬೆಳೆಗಳಿಗೆ ಸೂಕ್ತ ವ್ಯವಸ್ಥೆ ಹಾಗೂ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಸಂಸದ ಜೊಲ್ಲೆಯವರ ಗಮನಕ್ಕೆ ತಂದರು.

ಇದೇ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಅಥಣಿ ತಾಲೂಕಿನ ರೈತರಿಗೆ ಚಿಕ್ಕೋಡಿ ದೂರ ಆಗುವುದರಿಂದ ನಾವು ಅಥಣಿ ತಾಲೂಕಿನ ಕೋಟ್ಟಲಗಿ ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸುವ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ. ಬೆಳಗಾವಿ ಜಿಲ್ಲೆ ವಿಸ್ತರಣೆ ಆಗಿರೋದ್ರಿಂದ ಮುಂದಿನ ದಿನಗಳಲ್ಲಿ ವಿಭಜನೆಗೆ ಮುಖ್ಯಮಂತ್ರಿಗಳ ಜೊತೆ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಚಿಕ್ಕೋಡಿ, ಗೋಕಾಕ್​, ಅಥಣಿ ಇದರಲ್ಲಿ ಯಾವುದು ಸೂಕ್ತವಾದ ಜಿಲ್ಲಾ ಕೇಂದ್ರ ರಚನೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.