ಚಿಕ್ಕೋಡಿ: ಕಳೆದ 7 ದಿನಗಳಿಂದ ಯಮ ಸಲ್ಲೇಖನ ವ್ರತ ಕೈಗೊಂಡಿದ್ದ ಜೈನಮುನಿ ಜಂಗಲ್ ವಾಲೆ ಬಾಬಾ ಅಂತಾನೆ ಖ್ಯಾತಿ ಪಡೆದಿದ್ದ ಶ್ರೀ ಚಿನ್ಮಯಸಾಗರ ಜೈನ ಮುನಿ ಇಹಲೋಕ ತ್ಯಜಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಕೊನೆಯುಸಿರೆಳೆದಿರುವ ಜೈನ ಮುನಿ ಚಿನ್ಮಯಸಾಗರ ಮಹಾರಾಜರು ಸೆಪ್ಟಂಬರ್ 19 ರಿಂದ ಅಕ್ಟೋಬರ್ 12 ರ ರವರೆಗೆ ಊಟ ತ್ಯಜಿಸಿ ನೀರು ಮಾತ್ರ ಸೇವನೆ ಮಾಡುತ್ತಿದ್ದರು. ಬಳಿಕ ಅಕ್ಟೋಬರ್ 12 ರಿಂದ 18 ರ ವರೆಗೆ ನೀರನ್ನು ಸಹ ತ್ಯಜಿಸಿ ಯಮ ಸಲ್ಲೇಖನ ವ್ರತಕ್ಕೆ ಕುಳಿತಿದ್ದ ಮುನಿ ಚಿನ್ಮಯಸಾಗರ ಇಂದು ವಿಧಿವಶರಾಗಿದ್ದಾರೆ.