ETV Bharat / state

ಬ್ರಾಹ್ಮಣರು-ಮುಸ್ಲಿಮರೆಲ್ಲ ಸೇರಿಯೇ ಬೆಳಗಾವಿ ಶಾಹಿ ಮಸೀದಿ ನಿರ್ಮಾಣ : ಮುಸ್ಲಿಂ ಲೀಗ್ ನಾಯಕ ಅಗಾ - ಶಾಹಿ ಮಸೀದಿ ಬಗ್ಗೆ ದಸ್ತಗೀರ್ ಅಗಾ ಹೇಳಿಕೆ

ಧರ್ಮಗಳ ಮಧ್ಯೆ ಸಂಘರ್ಷ ತರುವುದು ಒಳ್ಳೆಯದಲ್ಲ. ನಾವು ಸಹ ಇಂದು ಅಥವಾ ನಾಳೆ ಜಿಲ್ಲಾಧಿಕಾರಿ ಭೇಟಿಯಾಗುತ್ತೇವೆ. ಮಸೀದಿ ಕುರಿತಂತೆ ಶಾಸಕ ಅಭಯ್ ಪಾಟೀಲ್ ಮನವಿ ತಿರಸ್ಕರಿಸುವಂತೆ ಕೋರುತ್ತೇವೆ ಎಂದು ದಸ್ತಗೀರ್ ಅಗಾ ತಿಳಿಸಿದರು..

Muslim League state President Dastagir Aga
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ
author img

By

Published : May 31, 2022, 1:34 PM IST

ಬೆಳಗಾವಿ : ಇಲ್ಲಿನ ಬಾಪಟ್​ ಗಲ್ಲಿಯಲ್ಲಿರುವ ಶಾಹಿ ಮಸೀದಿಯನ್ನು ಬ್ರಾಹ್ಮಣರು-ಮುಸ್ಲಿಮರು ಸೇರಿಯೇ ಕಟ್ಟಿದ್ದಾರೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಪಟ್ ಅನ್ನುವುದು ಬ್ರಾಹ್ಮಣ ಮನೆತನದ ಹೆಸರು. ಬಾಪಟ್‌ ಗಲ್ಲಿಯಲ್ಲಿ ಈ ಮೊದಲು ವಾತಾವರಣ ಬಹಳ ಕೆಟ್ಟಿತ್ತು. ಇಂತಹ ಕೆಟ್ಟ ವಾತಾವರಣ ಅಳಸಿ ಹಾಕಲು ಎಲ್ಲರೂ ಪ್ರಯತ್ನಿಸಿದ್ದರು. ಬ್ರಾಹ್ಮಣರು-ಮುಸ್ಲಿಮರು ಸೇರಿ ಶಾಹಿ ಮಸೀದಿ ಕಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಮಾತನಾಡಿರುವುದು..

ಭಾರತೀಯ ಶಿಲ್ಪಿಗಳು ಮಸೀದಿ ನಿರ್ಮಾಣಕ್ಕೆ ‌ಶ್ರಮಿಸಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ತರುವುದು ಒಳ್ಳೆಯದಲ್ಲ. ನಾವು ಸಹ ಇಂದು ಅಥವಾ ನಾಳೆ ಜಿಲ್ಲಾಧಿಕಾರಿಗಳನ್ನ ಭೇಟಿಯಾಗುತ್ತೇವೆ. ಮಸೀದಿ ಕುರಿತಂತೆ ಶಾಸಕ ಅಭಯ್ ಪಾಟೀಲ್ ಮನವಿ ತಿರಸ್ಕರಿಸುವಂತೆ ಕೋರುತ್ತೇವೆ ಎಂದರು.

ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ. ತೈಲ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿದೆ. ಇಂತಹ ವಿಷಯಗಳನ್ನು ಮುಚ್ಚಿಡಲು ಮಂದಿರ-ಮಸೀದಿ ವಿವಾದಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ.

ಶಾಸಕ ಅಭಯ್ ಪಾಟೀಲ್ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿದ್ದಾರೆ. 10 ತಿಂಗಳಲ್ಲಿ ಚುನಾವಣೆ ಬರುವುದಿದೆ. ಹೀಗಾಗಿ, ಇಂತಹ ವಿಚಾರ ಮುಂದೆ ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳಗಾವಿ ಶಾಹಿ ಮಸೀದಿ-ಮಂದಿರ ವಿವಾದ: ಪ್ರಾದೇಶಿಕ ‌ಆಯುಕ್ತರ ಭೇಟಿಯಾದ ಮುಸ್ಲಿಂ ‌ಮುಖಂಡರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.