ಬೆಳಗಾವಿ : ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.
ಸಿಎಂ ಬೊಮ್ಮಾಯಿ ಅವರಿಗೆ ನೀರಾವರಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮಾಜಿ ಶಾಸಕ ಸಂಜಯ ಪಾಟೀಲ‌್ ಈ ವೇಳೆ ಸಾಥ್ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ನಮಗೆ ಚರ್ಚೆ ಮಾಡಲು ಅವಕಾಶ ಸಿಕ್ಕಿರೋದಕ್ಕೆ ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾರಣ. ಇಡೀ ವಿಶ್ವಕ್ಕೆ ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನ ಮಾದರಿಯಾಗಿದೆ. ಸಂವಿಧಾನ ಅನ್ವಯ ನಾವು ಆಡಳಿತ ಮಾಡುತ್ತಿದ್ದೇವೆ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ್ ಒಬ್ಬರು ಹೋರಾಟಗಾರರು. ಇವರ ವಿಶ್ವಾಸದಿಂದ ಹಲಗಾ ಹಾಗೂ ಬಸ್ತವಾಡ ಗ್ರಾಮದ ಜನರು ಜಮೀನು ನೀಡಿದ್ದಾರೆ. ಸುವರ್ಣಸೌಧಕ್ಕೆ ಜಮೀನ ಪಡೆಯಲು 107 ಎಕರೆ ನಂತರ 22 ಎಕರೆ ಪಡೆದುಕೊಂಡಿದ್ದೇವೆ.
ಒಂದೇ ದಿನದಲ್ಲಿ 107ಎಕರೆ ಪಡೆದುಕೊಂಡಿದ್ದೇವೆ. ಆ ಶ್ರೇಯಸ್ಸು ಬಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ್ಗೆ ಸಲ್ಲುತ್ತದೆ. ಸಂಜಯ್ ಪಾಟೀಲ್ ನೇತೃತ್ವದಲ್ಲಿ ಈ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿದೆ. ಇದರ ಶ್ರೇಯಸ್ಸು ಸಂಜಯ ಪಾಟೀಲ್ಗೆ ಸಲ್ಲುತ್ತದೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯ ನಿವಾಸದಿಂದ ಬೆಳಗಾವಿಗೆ ಹೊರಟ ಸಿಎಂ : ಪ್ರತಿಕ್ರಿಯೆ ನೀಡಲು ನಿರಾಕರಣೆ