ಅಥಣಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ಅಥಣಿ ನೂತನ ಬಸ್ ನಿಲ್ದಾಣವನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಲೋಕಾರ್ಪಣೆ ಮಾಡಿದರು.
ಹುಬ್ಬಳ್ಳಿ ಕೆಎಸ್ಆರ್ಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕ 2 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು. ಅಲ್ಲದೆ ಎಲೆಕ್ಟ್ರಿಕಲ್ ಬಸ್ ಸದ್ಯದಲ್ಲೇ ಕರ್ನಾಟಕಕ್ಕೆ ಕಾಲಿಡಲಿದೆ ಎಂದರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕೋಕಟನೂರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದರು. ಇನ್ನು ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ಕುರಿತು ನೀಡಿದ್ದ ಹೇಳಿಕೆಗೆ, ನೀರಿನ ಹಂಚಿಕೆ ಕುರಿತು ಈಗಷ್ಟೇ ಮಾತನಾಡಿಲ್ಲ. ಇದು ಹಳೆಯ ಪ್ರಸ್ತಾವನೆ ಎಂದು ಸ್ಪಷ್ಟನೆಪಡಿಸಿದರು. ಬಳಿಕ ಐದು ವರ್ಷಗಳ ಕಾಲ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಸಾರಿಗೆ ಸಚಿವರು ಪ್ರಮಾಣಪತ್ರದ ಜೊತೆಗೆ ಬೆಳ್ಳಿ ಪದಕ ನೀಡಿದರು.