ಅಥಣಿ: ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ ಇನ್ನು 15 ದಿನಗಳಲ್ಲಿ ಸಂಬಂಧ ಪಟ್ಟ ಸಚಿವರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಕಾಲೇಜು ಉದ್ಘಾಟನೆ ದಿನಾಂಕ ಪ್ರಕಟಿಸುತ್ತಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಸತತ 8 ವರ್ಷಗಳಿಂದ ಅಂದಾಜು70 ಕೋಟಿ ಹಣದಲ್ಲಿ ನಿರ್ಮಾಣವಾಗುತ್ತಿರುವ ಕೊಕಟನೂರ ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಪಶು ಸಂಗೋಪನಾ ಸಚಿವ ಹಾಗೂ ಪ್ರಧಾನ ಕಾರ್ಯದರ್ಶಿಗಳು ಇನ್ನು 15 ದಿನಗಳಲ್ಲಿ ಕಾಲೇಜು ಪರಿಶೀಲನೆ ನಡೆಸಿ, ಉದ್ಘಾಟನೆಗೆ ಮುಹೂರ್ತ ನಿಗದಿ ಪಡಸಲಿದ್ದಾರೆ. ಅಲ್ಲದೇ ಇದೇ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.
ಈಟಿವಿ ಭಾರತ ಕಳೆ ಕೆಲ ದಿನಗಳ ಹಿಂದೆ, ಉಪಮುಖ್ಯಮಂತ್ರಿ ಸವದಿ ಕ್ಷೇತ್ರದಲ್ಲೇ ಇನ್ನೂ ತೆರೆಯದ ಪಶು ಮಹಾವಿದ್ಯಾಲಯ ಬಾಗಿಲು ಎಂಬ ಶೀರ್ಷಿಕೆ ಅಡಿ ವಿಸ್ತೃತವಾಗಿ ವರದಿ ಪ್ರಸಾರ ಮಾಡಿತ್ತು. ಹಾಗೂ ತಾಲೂಕಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಇವತ್ತಿನವರೆಗೂ ವೈರಲ್ ಆಗುತ್ತಿರುವ ಬೆನ್ನಲ್ಲೇ, ಕೊನೆಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪಶು ವೈದಕೀಯ ಮಹಾವಿದ್ಯಾಲಯ ಬಾಗಿಲು ತರೆಯಲು ಮುಂದಾಗಿರುವುದು ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.