ETV Bharat / state

ಚಿಕ್ಕೋಡಿಯಲ್ಲಿ ಕಳ್ಳಭಟ್ಟಿ ಸಾಗಾಟ: ಆರೋಪಿಯ ಬಂಧನ - Chikkodi Latest Crime News

ಕಳ್ಳಭಟ್ಟಿ ಸಾಗಿಸುತ್ತಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಸವರಾಜ ಚೆನ್ನಪ್ಪ ಬಂಬಲವಾಡ ಬಂಧಿತ ಆರೋಪಿ.

Illegal liquor trafficking in Chikkodi
ಚಿಕ್ಕೋಡಿಯಲ್ಲಿ ಅಕ್ರಮ ಮದ್ಯ ಸಾಗಾಟ: ಆರೋಪಿಯ ಬಂಧನ
author img

By

Published : Apr 12, 2020, 11:47 PM IST

ಚಿಕ್ಕೋಡಿ: ಲಾಕ್​ಡೌನ್​ ನಡುವೆಯೂ ಕಳ್ಳಭಟ್ಟಿ ಸಾಗಿಸುತ್ತಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ರಾಯಬಾಗ ತಾಲೂಕಿನ ಮುಗಳಖೋಡ ನೀರಲಕೋಡಿ ತೋಟದ ಬಸವರಾಜ ಚೆನ್ನಪ್ಪ ಬಂಬಲವಾಡ (24) ಬಂಧಿತ ಆರೋಪಿ. ಅಬಕಾರಿ ಅಧಿಕಾರಿಗಳು ರಸ್ತೆಗಾವಲು ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯಿಂದ 15 ಲೀಟರ್​ ಕಳ್ಳಭಟ್ಟಿ ಸಾರಾಯಿ, 1 ನಾಲ್ಕು ಚಕ್ರದ ವಾಹನ ಹಾಗೂ 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಉಪ ನಿರೀಕ್ಷಕ ಹಣಮಂತ ಪಟಾಟ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ರಾಯಬಾಗ ವಲಯದ ಉಪನಿರೀಕ್ಷಕ ವಿಜಯ ಮೆಳವಂಕಿ, ಅಬಕಾರಿ ರಕ್ಷಕರಾದ ಬಿ.ಹೆಚ್.ಪೂಜಾರಿ, ಬಿ.ಎಸ್.ಪಾಟೀಲ, ಜಗದೀಶ ಐಗಳಿ, ಮಾಹಾದೇವ ಸಾಲೂಟಗಿ, ಡಿ.ಎಂ.ಮುಜಾವರ, ಸದಾಶಿವ ಚಿಂಚಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.