ಅಥಣಿ: ಬಿಜೆಪಿಯವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಜನಸಾಮಾನ್ಯರ ಬದುಕು ಕಿತ್ತುಕೊಂಡು ದೇಶವನ್ನು ಆಳುತ್ತಿದ್ದಾರೆಂದು ಮಾಜಿ ಸಚಿವ ಎಂಬಿ ಪಾಟೀಲ್ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಎಸ್ವೈ ಗೊತ್ತು ಗುರಿಯಿಲ್ಲದೇ ಸರ್ಕಾರ ನಡೆಸುತ್ತಿದ್ದಾರೆ, ಯಾವುದೇ ಸಚಿವರಿಗೂ ತಮ್ಮ ಕಾರ್ಯದ ಬಗ್ಗೆ ಅರಿವಿಲ್ಲ ಎಂದು ಹರಿಹಾಯ್ದರು.
ಗೋಹತ್ಯೆ ಕಾಯ್ದೆಯನ್ನು, ನಾನು ಸ್ವಾಗತಿಸುತ್ತೇನೆ, ಆದರೆ ದೇಶಾದ್ಯಂತ ಗೋಹತ್ಯೆ ನಿಲ್ಲಿಸಿ, ವಿದೇಶಗಳಿಗೆ ಗೋ ಮಾಂಸ ರಪ್ತು ಮಾಡುವುದನ್ನು ನಿಲ್ಲಿಸಿ ಎಂದರು.
ದೇಶದಲ್ಲಿ ಜಾನುವಾರುಗಳಿಗೆ ವಯಸ್ಸಾದರೆ, ಸರ್ಕಾರ ರೈತರಿಂದ ನೇರವಾಗಿ ಖರೀದಿಸಿ ಸಾಕಣೆ ಮಾಡಲಿ. ರಾಜಕಾರಣದ ಉಪಯೋಗಕ್ಕೆ ಗೋಹತ್ಯೆ ಕಾಯ್ದೆಯನ್ನು ಜಾರಿಮಾಡುವುದಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.