ಚಿಕ್ಕೋಡಿ: ಮುಂಬರುವ ಮೋಹರಂ ಹಬ್ಬವನ್ನು ಸರ್ಕಾರದ ನಿಯಮಾನುಸಾರವಾಗಿ ಶಾಂತ ರೀತಿಯಿಂದ ಆಚರಿಸಿ ಎಂದು ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರು ಮುಸ್ಲಿಂ ಮತ್ತು ಹಿಂದೂಗಳ ಶಾಂತಿ ಸಭೆಯಲ್ಲಿ ಮನವಿ ಮಾಡಿಕೊಂಡರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಮುಸ್ಲಿಂ ಮತ್ತು ಹಿಂದೂಗಳ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಹಬ್ಬದಲ್ಲಿ ದೇವರ ಬಳಿ ಕೇವಲ ಐದು ಜನರು ಮಾತ್ರ ಇರತಕ್ಕದ್ದು, ಅವರಿಗಿಂತ ಹೆಚ್ಚಿನ ಜನರು ಇರಲು ಅವಕಾಶ ಇರುವುದಿಲ್ಲ. ಸರ್ಕಾರದ ನಿಯಮಾನುಸಾರವಾಗಿ ಹಬ್ಬವನ್ನು ಆಚರಿಸಿ ಎಂದಿದ್ದಾರೆ.
ಮುಂಬರುವ ಮೋಹರಂ ಹಾಗೂ ಗಣೇಶ ಚತುರ್ಥಿ ಒಟ್ಟಿಗೆ ಇರುವುದರಿಂದ ಎಲ್ಲ ಸಮುದಾಯ ಬಾಂಧವರು ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಬೇಕು. ಯಾವುದೇ ರೀತಿಯ ಸ್ಪೀಕರ್, ಧ್ವನಿ ವರ್ಧಕಗಳನ್ನ ಬಳಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.