ಬೆಳಗಾವಿ: ಬಾಣಂತಿ, ಮಗು ಸೇರಿ 6 ಜನರು ವಾಸವಿದ್ದ ಮನೆಯ ಗೋಡೆ ಕುಸಿದಿರುವ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಳೇಶ ದುಂಡಪ್ಪಾ ಪಾಟೀಲ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದಿದೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಮನೆಯಲ್ಲಿದ್ದವರನ್ನು ರಕ್ಷಿಸಿದ್ದಾರೆ. ಪಕ್ಕದ ಮನೆಯವರು ಬಾಣಂತಿ, ಮಗುವಿಗೆ ಆಸರೆ ನೀಡಿದ್ದಾರೆ.
ಇನ್ನು ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಎರಡು ಮನೆಗಳು ನೆಲಕ್ಕೆ ಉಳಿರುವೆ ಮನೆಯಲ್ಲಿದ್ದವರು ಪ್ರಾಣಾಯದಿಂದ ಪಾರಾಗಿದ್ದಾರೆ. ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರುದ್ರಪ್ಪ ಕುಂಬಳಿ ಮತ್ತು ಬಸಲಿಂಗಪ್ಪ ಕುಂಬಳಿ ಎಂಬುವವರಿಗೆ ಸೇರಿದ ಮನೆಗಳು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿದ್ದಿವೆ. ಅದೃಷ್ಟವಶಾತ್ ಪಾವುದೇ ಪ್ರಾಣಹಾನಿಯಾಗಿಲ್ಲ.
ನಿನ್ನೆ ರಾತ್ರಿ ಕುಟುಂಬಸ್ಥರು ಟಿವಿ ನೋಡಿತಿರುವ ಸಂದರ್ಭದಲ್ಲಿ ಮನೆಗಳು ಬಿದ್ದಿದು, ಒಳಗಡೆ ಇದ್ದ ಸಣ್ಣ ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಆದ್ರೆ, ಸಂಬಂಧಿಸಿದ ಅಧಿಕಾರಿಗಳು ಈವರೆಗೆ ಸ್ಥಳಕ್ಕೆ ಭೇಟಿ ನೀಡಿಲ್ಲ ಎನ್ನಲಾಗಿದೆ. ಪರ್ಯಾಯ ಮನೆ ಇಲ್ಲದ ಪರಿಣಾಮ ಆ ಬಿದ್ದಿರುವ ಮನೆಯಲ್ಲಿಯೇ ಕುಟುಂಬಸ್ಥರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.