ಅಥಣಿ: ತಾಲೂಕಿನ ಆಸ್ಪತ್ರೆಯಲ್ಲಿ ಎಂಥಾ ಸೀಲ್ ನೀಡಿದ್ದೀರಾ ಕ್ವಾರಂಟೈನ್ ಮಾಡುವ ಸೀಲ್ ಹಾಕಿದ ತಕ್ಷಣವೇ ಕೈಯಿಂದ ಅಳಿಸಬಹುದು ಎಂದು ಸಾರ್ವಜನಿಕರು ಅಥಣಿ ತಾಲೂಕು ವೈದ್ಯಾಧಿಕಾರಿ ಅವರನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಆದರೆ, ಆ ಸೀಲ್ ಬಣ್ಣವನ್ನು ತಕ್ಷಣವೇ ಅಳಿಸಬಹುದಾಗಿದೆ. ಹೀಗಾಗಿ ಅವರು ಎಲ್ಲಿ ಬೇಕಾದರೂ ಓಡಾಟ ಮಾಡಬಹುದು, ಗೊತ್ತೇ ಆಗುವುದಿಲ್ಲ ಎಂದು ಸಾರ್ವಜನಿಕರು ಅಥಣಿ ವೈದ್ಯಾಧಿಕಾರಿ ಮುಂದೆ ವಸ್ತು ಸ್ಥಿತಿ ಮನವರಿಕೆ ಮಾಡಿದರು.