ETV Bharat / state

ಭಾರೀ ಮಳೆಗೆ ನದಿಯಂತಾಂದ ರಸ್ತೆಗಳು... ಬೆಳಗಾವಿ ಜನಜೀವನ ಅಸ್ತವ್ಯಸ್ತ - ಭಾರೀ ಮಳೆಯಿಂದ ಸಾರ್ವಜನಿಕರು, ಸವಾರರಿಗೆ ತೊಂದರೆ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು, ಸವಾರರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಭಾರೀ ಮಳೆಗೆ ನದಿಯಂತಾಂದ ರಸ್ತೆಗಳು
author img

By

Published : Aug 2, 2019, 3:53 PM IST

Updated : Aug 2, 2019, 4:39 PM IST

ಬೆಳಗಾವಿ: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಕೆಲ ಕಡೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಪೀರನವಾಡಿ, ಲಕ್ಷ್ಮಿಗಲ್ಲಿ ಉದ್ಯಮ್ ಬಾಗ್​ನಲ್ಲಿ ಐವತ್ತಕ್ಕೂ ಅಧಿಕ ಮನೆಗಳಲ್ಲಿ ನೀರು ನುಗ್ಗಿದ್ದು, ಜನರ ಬದುಕು ಬೀದಿಗೆ ಬಿದ್ದಿದೆ. ಅತಿಯಾದ ಮಳೆಯಿಂದ ನಗರದ ಅನೇಕ ಚರಂಡಿಗಳು ತುಂಬಿದ್ದು ರಸ್ತೆಗಳು ನದಿಯಂತೆ ಕಾಣುತ್ತಿವೆ.

ಭಾರೀ ಮಳೆಗೆ ನದಿಯಂತಾಂದ ರಸ್ತೆಗಳು

ನಗರದ ಹೊರ ವಲದಲ್ಲಿರುವ ಅನೇಕ ಬತ್ತದ ಗದ್ದೆಗಳು ನಾಶವಾಗಿವೆ. ಮುಂಗಾರು ಹಂಗಾಮಿನಲ್ಲಿ ನಾಟಿಯಾಗಿದ್ದ ಭತ್ತ ಸಂಪೂರ್ಣ ಮಳೆಗೆ ಕೊಚ್ಚಿ ಹೊಗಿದೆ. ಇನ್ನು ಜಿಲ್ಲೆಯ ಖಾನಾಪೂರ ತಾಲೂಕಿನ‌ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ತಾಲೂಕಿನ ಭಂಕಿ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ಜನರು ಪ್ರಾಣದ ಹಂಗು ತೊರೆದು ಸೇತುವೆ ಮೇಲೆ ಸಂಚಿರಿಸುತ್ತಿದ್ದಾರೆ. ಖಾನಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆ ಕುಸಿದಂತಹ ಪ್ರಕರಣಗಳು ದಾಖಲಾಗಿವೆ.

ಧರೆಗುರುಳಿದ ಭಾರೀ ಮರ:
ಭಾರೀ ಮಳೆಗೆ ಜಿಲ್ಲಾ ಆಸ್ಪತ್ರೆ ಸನಿಹ ಇದ್ದ ಬೃಹತ್ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಳಿ ಸಹಿತ ಮಳೆ ಆಗುತ್ತಿರುವುದರಿಂದ ನಗರದ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್​ ಕಂಬಗಳು ಉರುಳಿಬೀಳುತ್ತಿವೆ.

Intro:ಕುಂದಾನಗರಿಯಲ್ಲಿ ಮಳೆಯ ಅವಾಂತರ : ನೆಲಕ್ಕೆ ಉರುಳಿದ ಬೃಹತ್‌ ಮರ

ಬೆಳಗಾವಿ : ಕಳೆದ ಕೆಲವು ದಿನಗಳಿಂದ ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು‌ ನಗರದ ಜಿಲ್ಲಾ ಆಸ್ಪತ್ರೆ ಪಕ್ಕ ಬೃಹತ್ ಮರ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Body:ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನರಿಗೆ ತೊಂದರೆಗಳು ಉಂಟುಮಾಡಿದೆ. ಗಾಳಿ ಸಹಿತ ಮಳೆಯಾಗುತ್ತಿರುವ ಪರಿಣಾಮ ಮರಗಳು ನೆಲಕ್ಕೆ ಉರುಳುತ್ತಿವೆ. ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆ ಮುಂಬಾಗದಲ್ಲಿ ಬೃಹತ್ ಮರ ಬೇರು ಸಮೇತ ನೆಲಕ್ಕೆ ಉರುಳಿ ಬಿದ್ದಿದ್ದೆ. ಸಾವಿರಾರು ಜನರು ಚಲಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Conclusion:ವಿನಾಯಕ ಮಠಪತಿ
ಬೆಳಗಾವಿ

Last Updated : Aug 2, 2019, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.