ಬೆಳಗಾವಿ : ಜಿಲ್ಲೆಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಪೂಜೆಗೆ ಎಂದು ಹೊಲಕ್ಕೆ ಹೋಗಿದ್ದ ಮಹಿಳೆಯೊಬ್ಬಳು ಮಳೆಯ ಆರ್ಭಟದಿಂದ ಹಳ್ಳದ ನೀರು ಜಾಸ್ತಿಯಾಗಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ.
ಹಿರೇಬಾಗೇವಾಡಿ ಗ್ರಾಮದ ಕುಸಮವ್ವ ಎಂಬ ಮಹಿಳೆ ತೋಟದ ಪೂಜೆಗೆಂದು ಹೋದ ಸಂದರ್ಭದಲ್ಲಿ ಮಳೆಯಿಂದ ಊರಿನ ಹಳ್ಳಕ್ಕೆ ನೀರು ನುಗ್ಗಿದೆ. ಲಘು ಬಗೆಯಿಂದ ಹಳ್ಳ ದಾಟುತ್ತಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.
ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಕುಸಮವ್ವ ಗುರಪ್ಪ ಕುಕಡೊಳ್ಳಿಯ ಮೃತದೇಹ ಇಂದು ಮುಂಜಾನೆ ದೊರಕಿದೆ. ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸುವ ಕಾರ್ಯ ನಡೆದಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.