ETV Bharat / state

ಅಥಣಿಯಲ್ಲಿ ಧಾರಾಕಾರ ಮಳೆಗೆ ಹೊಲ ಗದ್ದೆಗಳು ಜಲಾವೃತ - latest athani news

ಅಥಣಿಯಲ್ಲಿ ಗಾಳಿ ಸಹಿತ ಸುರಿದ ಭಾರಿ ಮಳೆಯ ಪರಿಣಾಮ ಕೆಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಲ ಗದ್ದೆಗಳು ಕೆರೆಯಂತಾಗಿವೆ. ರೈತರಿಗೆ ಈ ತಿಂಗಳು ಕಬ್ಬು ನಾಟಿ ಮಾಡುವ ಸಮಯ. ಜಮೀನುಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

heavy rain in athani
ಅಥಣಿಯಲ್ಲಿ ಧಾರಾಕಾರ ಮಳೆ
author img

By

Published : Jun 28, 2020, 3:05 PM IST

ಅಥಣಿ: ತಾಲೂಕಿನ ಕೆಲವು ಭಾಗಗಳಲ್ಲಿ ಎರಡು ದಿಗಳಿಂದ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಗಾಳಿ ಸಹಿತ ಸುರಿದ ಭಾರೀ ಮಳೆಯ ಪರಿಣಾಮ ಕೆಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲ ಗದ್ದೆಗಳು ಕೆರೆಯಂತಾಗಿವೆ. ರೈತರಿಗೆ ಈ ತಿಂಗಳು ಕಬ್ಬು ನಾಟಿ ಮಾಡುವ ಸಮಯ. ಜಮೀನುಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಅಥಣಿಯಲ್ಲಿ ಧಾರಾಕಾರ ಮಳೆ

ಮಳೆ ಹೊಡೆತಕ್ಕೆ ಕೆಲವು ಜಮೀನುಗಳ ಫಲವತ್ತಾದ ಮಣ್ಣು ಕೂಡ ಕೊಚ್ಚಿಕೊಂಡು ಹೋಗಿದೆ. ರಾತ್ರಿ ಸುರಿದ ಮಳೆಗೆ ಜಮಖಂಡಿ-ಅಥಣಿ ರಸ್ತೆ ಕೆಲ ಸಮಯ ಸಂಪರ್ಕ ಕಡಿತಗೊಂಡಿತ್ತು. ಮಳೆ ನೀರಿನ ರಭಸಕ್ಕೆ ತುಬಚಿ ಗ್ರಾಮದ ಬಳಿ ರಸ್ತೆ ಬಂದ್​​ ಆಗಿ, ಪ್ರಯಾಣಿಕರು ಮೂರು ಗಂಟೆಗಳ ಕಾಲ ಕಾದು ನಿಂತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.