ETV Bharat / state

ಬೆಳಗಾವಿ ಮಹಾಮಳೆ: ಮಾರ್ಗ ಮಧ್ಯೆ ನಿಂತ ಗೋವಾ-ಮಹಾರಾಷ್ಟ್ರ ರೈಲು

ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಹಾ ಮಳೆಗೆ ರೈಲ್ವೇ ಹಳಿಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ, ಪರಿಣಾಮ ಗೋವಾ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಮಧ್ಯೆ ನಿಂತಿದೆ.

author img

By

Published : Aug 7, 2019, 2:22 PM IST

heavy-rain-at-belgavi-train-block-

ಬೆಳಗಾವಿ: ಶತಮಾನದ ಮಹಾಮಳೆ ತನ್ನ ರೌದ್ರ ನರ್ತನ ಮುಂದುವರೆಸಿದ್ದು, ಜಿಲ್ಲೆಯ ಜನರ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು ಹಳಿಯಲ್ಲಿ ನೀರು ನಿಂತು ಸಂಚಾರ ಸ್ಥಗಿತಗೊಂಡಿದೆ.

ನಗರದ ಹೊರ ವಲಯದ ಟೀಳಕವಾಡಿ ಬಳಿ ರೈಲ್ವೇ ಹಳಿ ಮೇಲೆ ರಭಸದಿಂದ ನೀರು ಹರಿಯುತ್ತಿದೆ. ಪರಿಣಾಮ ಗೋವಾ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರೈಲು ಮುಂದೆ ಚಲಿಸಲಾಗದೆ ಐದು ಗಂಟೆಗೆಳಿಂದ ಅರ್ಧ ದಾರಿಯಲ್ಲಿ ನಿಂತುಕೊಂಡಿದೆ. ರೈಲಿನಲ್ಲಿ ನೂರಾರು ಪ್ರಯಾಣಿಕರಿದ್ದು, ಸುತ್ತ ನೀರು ತುಂಬಿರುವುದರಿಂದ ಕೆಳಗೆ ಇಳಿಯಲು ಆಗದೆ ಪರದಾಡುವಂತಾಗಿದೆ.

ಬೆಳಗಾವಿ ಮಹಾಮಳೆ: ಮಾರ್ಗ ಮಧ್ಯೆ ನಿಂತ ರೈಲು

ಮನೆ ಕುಸಿದು ಯುವತಿ ಸಾವು:

ಜಿಲ್ಲೆಯ ಲೋಳಸುರ ಗ್ರಾಮದಲ್ಲಿ ಮನೆ ಕುಸಿದು ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಪದ್ಮಾವತಿ ಪಾಟೀಲ್(21)ಮೃತ ದುರ್ದೈವಿ. ಘಟಪ್ರಭಾ ನದಿ ನೀರು ನುಗ್ಗಿ ಸಂಪೂರ್ಣ ಗ್ರಾಮ ಜಲಾವೃತಗೊಂಡಿದ್ದು, ಪರಿಣಾಮ ಮನೆ ಕುಸಿದು ಯುವತಿ ಸಾವನ್ನಪ್ಪಿದ್ದಾಳೆ. ಇದುವರೆಗೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ.

Intro:ಮಹಾರಾಷ್ಟ್ರದಲ್ಲಿ ಬಾರಿ ಮಳೆ ಹಿನ್ನೆಲೆ ನದಿಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ.Body:

ಚಿಕ್ಕೋಡಿ :

ಜಿಲ್ಲೆಯಾದ್ಯಂತ ಮುಂದುವರೆದ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರ ದಿಂದ ಕೃಷ್ಣೆಗೆ 3,20,000 ಸಾವಿರ ಕ್ಯೂಸೆಕ್ ನೀರು ಕೃಷ್ಣೆಗೆ ಹರಿದು ಬರುತ್ತಿದೆ,

ಮತ್ತೆ ಕೊಯ್ನಾ ಜಲಾಶಯದಿಂದ ಹೆಚ್ಚುವರಿಯಾಗಿ 1.22 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು. ದೂಧಗಂಗಾ, ವೇಧಗಂಗಾ ಹಾಗೂ ಕೃಷ್ಣಾ ನದಿ ದಡದ ಜನರಿಗೆ ಆತಂಕ ಸೃಷ್ಟಿಸಿದೆ. ಈಗ ಒಟ್ಟಾರೆಯಾಗಿ ಕೃಷ್ಣಾ ನದಿಗೆ 4.40 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಿದೆ.

ಚಿಕ್ಕೋಡಿ - ಕಾಗವಾಡ ಪ್ರಮುಖ‌ ಸೇತುವೆ ಜಲಾವೃತಗೊಂಡಿದ್ದು ಸಂಚಾರ ಸ್ಥಗಿತವಾಗಿದೆ. ಜಿಲ್ಲೆಯಾದ್ಯಂತ‌ ೧೫ ಕ್ಕೂ ಸೇತುವೆಗಳು ಜಲಾವೃತಗೊಂಡಿದ್ದು, ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಸಂಚಾರ ಸಂಪೂರ್ಣ ಬಂದ ಆಗಿವೆ.

ಜಿಲ್ಲೆಯಾದ್ಯಂತ 96 ಗ್ರಾಮಗಳಿಗೆ ಪ್ರವಾಹದ ಬೀತಿ ಎದುರಾಗಿದೆ, 10 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ, ರಾಷ್ಟ್ರಿಯ ಹೆದ್ದಾರಿ ಸಂಪೂರ್ಣ ಬಂದ ಆಗಿದ್ದು, ಜಿಲ್ಲೆಯಾದ್ಯಂತ ಹೈ ಅಲರ್ಟ ಘೋಷಣೆ ಮಾಡಿದ ಜಿಲ್ಲಾದಿಕಾರಿ ಎಸ್ ಬಿ ಬೊಮ್ಮನಹಳ್ಳಿ,

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.