ETV Bharat / state

ವಿಕಲಚೇತನ ಪಕ್ಷ ಎಂಬ ಟೀಕಿಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು- ವಿಡಿಯೋ - HD Kumaraswamy is very angry

ಜೆಡಿಎಸ್​ ವಿಕಲಚೇತನ ಪಕ್ಷ ಎಂದು ಇತ್ತೀಚೆಗೆ ಸಿ.ಟಿ.ರವಿ ಟೀಕಿಸಿದ್ದರು.

HD Kumaraswamy is very angry
ಎಚ್.ಡಿ.ಕುಮಾರಸ್ವಾಮಿ
author img

By

Published : Feb 16, 2023, 9:43 PM IST

ವಿಧಾನಸಭೆಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ''ನಾವು ಅವಕಾಶವಾದಿ ರಾಜಕಾರಣಿಗಳು ಅಂತ ಹೇಳಿದ್ದಾರೆ. ರಾಜಕಾರಣದಲ್ಲಿ ವಿಕಲಾಂಗ ವ್ಯವಸ್ಥೆ ಇರಬಾರದು ಅಂದಿದ್ದೀರಿ. ನೀವು ಯಾವ ಸಿದ್ಧಾಂತದ ಮೇಲೆ ಬಂದವರು. ಈ ರಾಜ್ಯದಲ್ಲಿ ವಿಕಲಚೇತರಿಗೆ ಶಕ್ತಿ ತುಂಬಿದವರು ಈ ಕುಮಾರಸ್ವಾಮಿ. ನಮ್ಮ ಸರ್ಕಾರದ ಅವಧಿಯಲ್ಲಿ ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ನೌಕರಿ ಕೊಟ್ಟಿದ್ದೆ. ವಿಕಲಚೇತನರಿಗೆ ಶಕ್ತಿ ತುಂಬಿದರೆ ಅವರೂ ಸಹ ಬದುಕಬಹುದು'' ಎಂದು ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಟಾಂಗ್ ಕೊಟ್ಟರು.

ನಾವು ರಾಜಕಾರಣದಲ್ಲಿ ವಿಕಲಚೇತನರೇ. ಈ ವಿಕಲಚೇತನರ ಪಕ್ಷದ ಬಗ್ಗೆ ಮಾತಾಡ್ತೀರಾ?. ನನ್ನ ಬಳಿ ಆವಾಗ ಬಂದಿದ್ದೀರಲ್ಲ, ಸಾಲ ತೀರಿಸಲು ಅಗಲ್ಲ ಅಂತ ಬಂದಿದ್ರಲ್ಲ, ಸಹಾಯ ಮಾಡಿದ ನಂತರ ನೀವು ಬಂದಿದ್ರಲ್ಲ. ಅಣ್ಣ ನಿನ್ನದು ಕೈಯಲ್ಲ-ಗೋಲ್ಡನ್ ಹ್ಯಾಂಡ್ ಅಂತ ಹೇಳಿದ್ದೀರಲ್ಲ, ಈಗ ವಿಕಲಚೇತನರ ಬಗ್ಗೆ ಬಹಳ ಮಾತನಾಡುತ್ತೀರಾ ಎಂದು ಕಿಡಿಕಾರಿದರು.

ಡಬಲ್ ಎಂಜಿನ್ ಸರ್ಕಾರದ ವಿರುದ್ಧ ಗರಂ: ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿ ಕುರಿತು ಪ್ರಸ್ತಾಪ ಮಾಡಿದ ಎಚ್​ಡಿಕೆ, ''ಈ ಸರ್ಕಾರದ ಅವಧಿಯಲ್ಲಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ರಾಯಚೂರಿನಲ್ಲಿ 6 ಕಿ.ಮೀ. ಮಕ್ಕಳು ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಬಂದಾಗ ಎಲ್ಲಾ ಸರಿ ಮಾಡಿದ್ದೆವು ಎಂದು ಭಾಷಣ ಮಾಡಿದ್ದಾರೆ. ಆದರೆ, ಮಕ್ಕಳಿಗೆ ಒಂದು ವ್ಯವಸ್ಥೆ ಇಲ್ಲ. ಕೊರಟಗೆರೆಯಲ್ಲಿ ಗೊಲ್ಲ ಸಮುದಾಯದ ಮಕ್ಕಳಿಗೆ ಬಸ್ ಇಲ್ಲದ ಬಗ್ಗೆ ಗೊತ್ತಾಯಿತು. ಅದಕ್ಕೆ ನಾನೇ ಒಂದು ವಾಹನ ವ್ಯವಸ್ಥೆ ಮಾಡಿದೆ'' ಎಂದು ಹೇಳಿದರು.

''ತೊಗರಿಬೆಳೆಗಾರರಿಗೆ ನೆಟ್ಟಿ ರೋಗದಿಂದ ಸಂಕಷ್ಟವಾಗಿದೆ. ಅವರಿಗೆ ಪರಿಹಾರ ಕೊಡಲು ಯಾವುದೇ ಸಚಿವರು ಇನ್ನೂ ಭರವಸೆ ಕೊಟ್ಟಿಲ್ಲ. ತೊಗರಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆ ವಿಮೆ ಇನ್ನೂ ರೈತರಿಗೆ ಬಂದಿಲ್ಲ. ಹತ್ತಿ, ತೊಗರಿ, ಕಬ್ಬು ಸೇರಿದಂತೆ ಎಲ್ಲಾ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದರಿಂದ ಡಿಸಿಸಿ ಬ್ಯಾಂಕ್‌ಗಳು ಉಳಿದವು. ಇಲ್ಲದಿದ್ದರೆ ಡಿಸಿಸಿ ಬ್ಯಾಂಕ್ ಗಳು ದಿವಾಳಿ ಆಗುತ್ತಿದ್ದವು'' ಎಂದರು.

19 ಗಂಟೆ ಕೆಲಸ ಮಾಡಿದ್ದೇನೆ: ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇದ್ದ ಬಗ್ಗೆ ಬಂದಿರುವ ಟೀಕೆ ಕುರಿತು ಮಾತನಾಡಿದ ಕುಮಾರಸ್ವಾಮಿ, ''ವೆಸ್ಟ್ ಎಂಡ್ ಗೆ ನಾನು ಆಟ ಆಡಲು ಹೋಗಿದ್ದೆನಾ?. 19 ಗಂಟೆ ಕೆಲಸ ಮಾಡಿದ್ದೇನೆ. ಬಡವರಿಗೆ ನೆರವಾಗಿದ್ದೇನೆ. ನನಗೆ ಬಂಗ್ಲೆ ಕೊಟ್ಟಿದ್ದೀರಾ?'' ಎಂದು ತಿರುಗೇಟು ನೀಡಿದರು.

ಸರ್ಕಾರದ ಸಾಲಮನ್ನಾ ಯೋಜನೆ: ನಮ್ಮ ರಾಜ್ಯದಲ್ಲಿ ಪ್ರಗತಿಯ ಜೊತೆಗೆ ಬಡತನವೂ ಜಾಸ್ತಿಯಾಗಿದೆ. ನಗರದ ಸ್ಲಂ ಮತ್ತು ಹಳ್ಳಿಗಳಿಗೆ ಹೋಗಿ ನೋಡಿ. ಸಾಲ ಮನ್ನಾದ ಲಾಭ ರೈತರಿಗೆ ಆಗ್ತಿಲ್ಲ. ಹುಬ್ಬಳ್ಳಿಯಲ್ಲಿ ಎರಡು ಬ್ಯಾಂಕ್ ಗಳು ರೈತರಿಗೆ ಸಾಲಮನ್ನಾ ಲಾಭ ಕೊಡುತ್ತಿಲ್ಲ. ಅಂತಹ ಬ್ಯಾಂಕ್ ಗಳ ಮೇಲೆ ಕ್ರಮ ಆಗಬೇಕಿತ್ತು. ಇನ್ನೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಹಿಂದಿನ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಈ ಸರ್ಕಾರದ ಮುಂದುವರಿಸುತ್ತಿಲ್ಲ. ಸಾಲ ಮನ್ನಾ ಯೋಜನೆಯನ್ನು ಈ ಸರ್ಕಾರ ಲಘುವಾಗಿ ಪರಿಗಣಿಸಿದೆ. ರೈತರಿಗೆ ಸಾಲಮನ್ನಾ ಲಾಭ ಸಿಗಬೇಕಲ್ಲವೇ? 1890 ಕೋಟಿ ರೂ. ಸಾಲಮನ್ನಾದ ಲಾಭ ರೈತನಿಗೆ ಇನ್ನೂ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಾರ್ಯಾರು ಏನೇನ್ ಬಿಸ್ನೆಸ್ ಮಾಡಿದ್ದಾರೆ ಅನ್ನೋದನ್ನು ಸದನದಲ್ಲಿ ಬಿಚ್ಚಿಡುತ್ತೇನೆ: ಹೆಚ್‌ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.