ETV Bharat / state

ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಪತ್ತೆ: ಬಾಲ್​ ಅಂತಾ ತಿಳಿದು ಆಟವಾಡುತ್ತಿದ್ದ ಮಕ್ಕಳು! - Etv bharat kannada

ಮರಾಠಿ ಶಾಲೆಯೊಂದರಲ್ಲಿ ಹ್ಯಾಂಡ್​ ಗ್ರೇನೆಡ್​ ಪತ್ತೆ- ಅದನ್ನು ಬಾಲ್​ ಎಂದುಕೊಂಡು ಆಟವಾಡುತ್ತಿದ್ದ ವಿದ್ಯಾರ್ಥಿಗಳು- ಗಡಿಯಲ್ಲಿರುವ ಜತ್ತ ತಾಲೂಕಿನ ಕುಡನೂರು ಗ್ರಾಮದಲ್ಲಿ ಘಟನೆ

Hand Grenade Bomb Found in Govt School
ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ಪತ್ತೆ
author img

By

Published : Jul 31, 2022, 7:33 PM IST

ಅಥಣಿ: ಬೆಳಗಾವಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ ಶನಿವಾರ ಹ್ಯಾಂಡ್ ಗ್ರೇನೆಡ್ ಬಾಂಬ್ ದೊರೆತಿದೆ. ಇದು ಗಡಿಭಾಗವಾದ ಅಥಣಿಯಲ್ಲೂ ಆತಂಕಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳು ಬಾಲ್ ಎಂದುಕೊಂಡು ಆಟವಾಡುತ್ತಿರುವುದನ್ನು, ಗಮನಿಸಿದ ಕೆಲವು ಗ್ರಾಮಸ್ಥರು ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೇನೆಡ್ ಬಾಂಬ್ ಪತ್ತೆ

ಬಳಿಕ ತಕ್ಷಣ ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ಹಾಗೂ ಬಾಂಬ್ ನಿಷ್ಕ್ರಿಯದಳ ಪರಿಶೀಲನೆ ನಡೆಸಿ, ಹ್ಯಾಂಡ್ ಗ್ರೇನೆಡ್ ಬಾಂಬ್ ವಶಕ್ಕೆ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಿದ್ದು, ಹ್ಯಾಂಡ್ ಗ್ರೇನೆಡ್​ ಬಿಟ್ಟರೆ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.

ಹ್ಯಾಂಡ್ ಗ್ರೇನೆಡ್ ಮೇಲೆ ಉರ್ದು ಭಾಷೆಯ ಲಿಪಿ ಇರುವುದರಿಂದ ಗಡಿಭಾಗ ಉಗ್ರ ಚಟುವಟಿಕೆಗಳ ತಾಣವಾಗಿದೆಯಾ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಸದ್ಯ ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.