ETV Bharat / state

ಸಾಹುಕಾರ್‌ ಕೊರಳಿಗೆ ಬೃಹತ್‌ ಸೇಬು ಹಣ್ಣಿನ ಮಾಲೆ.. ರಮೇಶ್‌ ಜಾರಕಿಹೊಳಿಗೆ ಭರ್ಜರಿ ಸ್ವಾಗತ.. - Ramesh Zarakiholi arrives in Belgaum

ಬಿಜೆಪಿ ಸೇರಿದ ಬಳಿಕ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಂದು ಬೆಳಗಾವಿಗೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರು ಬೃಹದಾಕಾರದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

ಬೆಳಗಾವಿಗೆ ಆಗಮಿಸಿದ ರಮೇಶ್​ ಜಾರಕಿಹೊಳಿಗೆ ಅದ್ದೂರಿ ಸ್ವಾಗತ
author img

By

Published : Nov 15, 2019, 4:39 PM IST

ಬೆಳಗಾವಿ/ಗೋಕಾಕ್​: ಬಿಜೆಪಿ ಸೇರಿದ ಬಳಿಕ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಇಂದು ಬೆಳಗಾವಿ​ಗೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರ ಸಂಭ್ರಮವಂತೂ ಜೋರಾಗಿತ್ತು. ರಮೇಶ್‌ ಜಾರಕಿಹೊಳಿ ಅವರಿಗೆ ಬೃಹದಾಕಾರದ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ರು.

ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿಗೆ ಅದ್ದೂರಿ ಸ್ವಾಗತ..

ಸಾಂಬ್ರಾ ವಿಮಾನ ನಿಲ್ದಾಣದಿಂದ ರಮೇಶ್​ ಜಾರಕಿಹೊಳಿ ಆಗಮಿಸುತ್ತಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರ ಪರ ಘೋಷಣೆ ಕೂಗಿದರು. ಬಳಿಕ ಅಲ್ಲಿಂದ ತೆರೆದ ವಾಹನದಲ್ಲಿ ಬೈಕ್ ಜಾಥಾದ ಮೂಲಕ ನಗರದ ಪ್ರಮುಖ ಬೀದಿಗಳಾದ ಭೂತಿ ಕೂಟ, ಹೊಸಪೇಠ ಗಲ್ಲಿ, ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ನಗರದಲ್ಲಿ ಬಿಜೆಪಿ ಸಮಾವೇಶ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದಾರೆ.

Intro:ರಮೇಶ ಜಾರಕಿಹೊಳಿಗೆ ಭರ್ಜರಿ ಸ್ವಾಗತBody:ಗೋಕಾಕ: ಬಿಜೆಪಿ ಸೇರ್ಪಡೆಯಾಗಿ ನಗರಕ್ಕೆ ಆಗಮಿಸಿದ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಅದ್ಧೂರಿಯಾಗಿ ಕಾರ್ಯಕರ್ತರು ಸ್ವಾಗತಿಸಿದರು.

ಅನರ್ಹ ಶಾಸಕ ರಮೇಶ ಜಾರಕಿಹೊಳಿ ನಗರದ ಹೊರವಲಯದ ನಾಕಾ ನಂ-1 ಕ್ಕೆ ಆಗಮಿಸುತ್ತಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ರಮೇಶ ಜಾರಕಿಹೊಳಿ ಪರ ಘೋಷಣೆ ಕೂಗಿದರು.

ಅಲ್ಲಿಂದ ತೆರೆದ ವಾಹನದಲ್ಲಿ ಪ್ರಾರಂಭಗೊಂಡ ಬೈಕ್ ಜಾಥಾ  ಮೂಲಕ ನಗರದ ಪ್ರಮುಖ ಬೀದಿಗಳಾದ ಭೂತಿ ಕೂಟ, ಹೊಸಪೇಠ ಗಲ್ಲಿ, ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಬೃಹದಾಕಾರದ ಸೇಬು ಹಣ್ಣಿನ ಮಾಲೆ ಹಾಕಿ ಸ್ವಾಗತಿಸಿದರು.

ಬಿಜೆಪಿ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಜನರು ಬೆಳಿಗ್ಗೆಯಿಂದ ವೇದಿಕೆ ಮುಂದೆ ಕಾದು ಕುಳಿತಿದ್ದಾರೆ. ಸುಮಾರು 5 ಸಾವಿರಾರುಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದಾರೆ.

KN_GKK_02_15_BJP_BIKERALLY_VISAL_KAC10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.