ETV Bharat / state

ಕೊಣ್ಣೂರು ಪಟ್ಟಣದ ಮಹಿಳೆ ಸಾವಿನ ಪ್ರಕರಣಕ್ಕೆ  ಟ್ವಿಸ್ಟ್ : ಜಿಲ್ಲಾಸ್ಪತ್ರೆ ಮೇಲೆಯೇ ಅನುಮಾನ?

author img

By

Published : Jul 8, 2020, 12:16 PM IST

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ‌ಮಹಿಳೆ ಕೊಣ್ಣೂರು ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಮಹಿಳೆಗೆ ಹೆಚ್ಚಿನ ಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಸಕ್ಕರೆ ಕಾಯಿಲೆ ಚಿಕಿತ್ಸೆ ನೀಡುವ ಬದಲು ‌ಕೋವಿಡ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ ಎನ್ನಲಾಗಿದೆ.

doctor
doctor

ಬೆಳಗಾವಿ: ಕೋವಿಡ್ ವಾರ್ಡ್​ನಲ್ಲಿ ನಿನ್ನೆಯಷ್ಟೇ ಮೃತಪಟ್ಟ ಗೋಕಾಕ್​​ ತಾಲೂಕಿನ ‌ಕೊಣ್ಣೂರು ಪಟ್ಟಣದ ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಬಾಲುಕುಮಾರ್ ಬಿಡುಗಡೆ ಮಾಡಿರುವ ವಿಡಿಯೋ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ವೈದ್ಯನ ಹೇಳಿಕೆ ಪ್ರಕಾರ ಬೆಳಗಾವಿ ಕೋವಿಡ್ ವಾರ್ಡ್​​​ನಲ್ಲಿ ಯಡವಟ್ಟು ಮಾಡಲಾಗ್ತಿದೆಯಾ? ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವೇ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಜಿಲ್ಲಾಸ್ಪತ್ರೆ ವಿರುದ್ಧ ಸರ್ಕಾರಿ ವೈದ್ಯ ಆರೋಪ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ‌ಮಹಿಳೆ ಕೊಣ್ಣೂರು ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಮಹಿಳೆಗೆ ಹೆಚ್ಚಿನ ಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಸಕ್ಕರೆ ಕಾಯಿಲೆಗೆ ಚಿಕಿತ್ಸೆ ನೀಡುವ ಬದಲು ‌ಕೋವಿಡ್ ವಾರ್ಡ್​ಗೆ ಶಿಫ್ಟ್ ಮಾಡಿದ್ದಾರೆ.

ಈ ವೇಳೆ, ಜಿಲ್ಲಾಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದಿದಕ್ಕೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವೈದ್ಯ ಡಾ. ಬಾಲುಕುಮಾರ್ ಹೇಳಿದ್ದಾರೆ. ಮೃತ ಮಹಿಳೆಗೆ ಕೋವಿಡ್​ ಇರಲಿಲ್ಲ, ಅವರ ಸ್ವ್ಯಾಬ್​ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೊಂದೆರೆಡು ದಿನದಲ್ಲಿ ವರದಿ ಬರಲಿದೆ. ಅಲ್ಲಿಯವರೆಗೂ ಯಾರೂ ಭಯಕ್ಕೆ ಒಳಗಾಗಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.​​ ಬಾಲುಕುಮಾರ್​ ಅವರ ಈ ಹೇಳಿಕೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.