ಬೆಳಗಾವಿ: ಇಲ್ಲಿನ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದ್ದು, ಗೋಕಾಕ್‌ನ ಹಳೆಯ ದನದ ಪೇಟೆಯ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ.
ಜಲಾವೃತಗೊಂಡ ಬಡಾವಣೆಯಲ್ಲಿ ಯುವಕನೋರ್ವ ಸ್ವಿಮ್ಮಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಮುಳುಗಡೆಯಾದ ಕಬ್ಬಿಣದ ಬೆಂಚ್ ಮೇಲೆ ನಿಂತು ಯುವಕ ಈಜಾಡುತ್ತಿದ್ದಾನೆ.
ತಹಶೀಲ್ದಾರ್ ವಿರುದ್ಧ ಅಸಮಾಧಾನ: ಘಟಪ್ರಭಾ ನದಿ ತೀರದ ಜನರನ್ನು ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ವೇಳೆ ಸಂತ್ರಸ್ತನೋರ್ವ ಕಾಳಜಿ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾನೆ.
ಇದು ಬೀಗರ ಮನೆ ಅಲ್ಲ ಎಂದು ಗೋಕಾಕ್ ತಹಶೀಲ್ದಾರ್ ಪ್ರಕಾಶ ಹೊಳೆಪ್ಪನವರ್ ಉತ್ತರಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಗೋಕಾಕ್ ನಗರದ ಎಪಿಎಂಸಿಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ನೀರಿಲ್ಲ ಎಂದು ಸಂತ್ರಸ್ತರು ತಹಶೀಲ್ದಾರ್ಗೆ ಕರೆ ಮಾಡಿದ್ದಾರೆ.
ಈಗ ನೆರೆ ಸಂತ್ರಸ್ತನ ದೂರವಾಣಿ ಮಾತುಕತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.