ಚಿಕ್ಕೋಡಿ: ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಯೋಧನೋರ್ವ ಅಪಘಾತದಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ರವಿಕುಮಾರ್ ಬಾಳಪ್ಪ ಬಬಲ್ಲೆನ್ನವರ (27) ಸಾವನ್ನಪಿರುವ ಯೋಧ ಎನ್ನಲಾಗಿದೆ. ಇವರು ಪಂಜಾಬ್ನ ಚಂಡೀಘಡದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮೃತ ಯೋಧನ ಪಾರ್ಥಿವ ಶರೀರ ಇಂದು ಗೋಕಾಕ್ ನಗರ ತಲುಪಲಿದೆ. ನಗರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ. ಮೃತ ಯೋಧ ಪತ್ನಿ, ಇಬ್ಬರು ಮಕ್ಕಳು ಮತ್ತು ಪೋಷಕರನ್ನು ಅಗಲಿದ್ದಾರೆ.