ಗೋಕಾಕ: ಕಳೆದ 20 ವರ್ಷದಿಂದ ರಮೇಶ್ ಮಾತು ಕೇಳ್ತಿದ್ವಿ. ಆಗ ನಾವು ರಮೇಶ್ಗೆ ಒಳ್ಳೆಯವರಾಗಿದ್ವಿ. ಆದರೆ, ಈಗ ಅವರ ಅಳಿಯಂದಿರ ಭ್ರಷ್ಟಾಚಾರ ಹೊರ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆಯಾ ಎಂದು ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ಗೋಕಾಕ್ನ ಮಿನಿ ವಿಧಾನಸೌಧಕ್ಕೆ ನಾಮಪತ್ರ ಪರಿಶೀಲನೆ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮತಕ್ಷೇತ್ರದ ಜನರೇ ನಮಗೆ ದೇವರು ಇದ್ದ ಹಾಗೆ. ನಾವು ಎಲ್ಲರೂ ಕುಟುಂಬದ ತರಹ ಇದ್ದು, ಜನರಿಗೆ ಅನ್ಯಾಯ ಆದರೆ ನಾವು ಸುಮ್ಮನೆ ಕೂರಲ್ಲ. ಕಾಂಗ್ರೆಸ್ಗೆ ಅಷ್ಟೇ ಅಲ್ಲ ನಮ್ಮ ಮತಕ್ಷೇತ್ರದ ಜನರಿಗೂ ರಮೇಶ್ ಜಾರಕಿಗೊಳಿ ಚೂರಿ ಹಾಕಿದ್ದಾರೆ ಎಂದರು.
ನೀವು ಎಷ್ಟೆ ಟ್ವಿಸ್ಟ್ ಮಾಡಿ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಕಳೆದ 20 ವರ್ಷದಿಂದ ನಾನು ರ‍್ಯಾಂಕ್ ಸ್ಟೂಡೆಂಟ್. ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಸತೀಶ್ ಜಾರಕಿಹೊಳಿ ಮತ್ತು ನಮ್ಮ ಕಾಂಗ್ರೆಸ್ ನಾಯಕರ ಜೊತೆ ಪ್ರಚಾರ ನಡೆಸುತ್ತೇನೆ ಎಂದರು.