ETV Bharat / state

ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿದ್ದು ದೇವೇಗೌಡ್ರಾ?: ಸಿದ್ದರಾಮಯ್ಯ ವ್ಯಂಗ್ಯ - ಜೆಡಿಎಸ್ ಅನರ್ಹ ಶಾಸಕ

ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನೇ ಕಾರಣ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯ ನೆರೆ ಹಾವಳಿಗೆ ಕೇಂದ್ರದಿಂದ ಅನುದಾನ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Aug 28, 2019, 3:58 PM IST

ಬೆಳಗಾವಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ನಾನು ಕಾರಣ ಎಂದಾದರೆ, ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಹೊರ ಕಳುಹಿಸಿದ್ದು ದೇವೆಗೌಡ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್​ ಆಗಿ ಪ್ರತಿಕ್ರಿಯಿಸಿದ್ದಾರೆ.

ಗೋಕಾಕ್ ತಾಲೂಕಿನಲ್ಲಿ ಇಂದು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬೀಳಿಸಲು ನಾನು ಕಾರಣವಲ್ಲ. ಕೆಲವರು ರಾಜಕೀಯ ಪ್ರೇರಿತ ಆರೋಪ ಮಾಡುತ್ತಾರೆ. ಅದಕ್ಕೆ ನಾನು ಹೊಣೆಯಲ್ಲ. ಪ್ರವಾಹ ಪೀಡಿತ ಜನರಿಗೆ ಆದಷ್ಟು ಬೇಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ

ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಆರೋಪ ಮಾಡಿದ್ದಾರೆ. ಆರೋಪ ತನಿಖೆ ಆಗಲಿ ಅದು ಬಿಟ್ಟು ಇಂದಿರಾ ಕ್ಯಾಂಟಿನ್ ಮುಚ್ಚುವ ಮಾತು ಆಡಬಾರದು. ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ. ಆದರೆ, ಇವರ ಸರ್ಕಾರದಲ್ಲಿ ಹಣ ಇಡುವುದಕ್ಕೆ ಏನು ಸಮಸ್ಯೆ ಎಂದರು.

Intro:ಜೆಡಿಎಸ್ ರೆಬೆಲ್ ಶಾಸಕರನ್ನು ಕಳುಹಿಸಿದ್ದು ದೇವೆಗೌಡ್ರಾ : ಸಿದ್ದರಾಮಯ್ಯ ವ್ಯಂಗ್ಯ

ಬೆಳಗಾವಿ : ಸಮ್ಮಿಶ್ರ ಸರ್ಕಾರ ಬೀಳಿಸಲು ನಾನು ಕಾರಣ ಎಂದು ಜೆಡಿಎಸ್ ರಾಜಕೀಯದಿಂದ ಆರೋಪ ಮಾಡುತ್ತಿದೆ. ಆದರೆ ಜಿಡಿಎಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಕಳುಹಿಸಿದ್ದು ದೇವೆಗೌಡ್ರ ಎಂದು ಸಿದ್ದರಾಮಯ್ಯ ಪ್ರತುತ್ತರ ನೀಡಿದ್ದಾರೆ.

Body:ಗೋಕಾಕ್ ತಾಲೂಕಿನಲ್ಲಿ ಇಂದು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಮ್ಮಿಶ್ರ ಸರ್ಕಾರ ಬೀಳಿಸಲು ನಾನು ಕಾರಣವಲ್ಲ. ಕೆಲವರು ರಾಜಕೀಯ ಪ್ರೇರಿತ ಆರೋಪ ಮಾಡುತ್ತಾರೆ ಅದಕ್ಕೆ ನಾನು ಹೊಣೆಯಲ್ಲ. ಪ್ರವಾಹ ಪೀಡಿತ ಜನರಿಗೆ ಆದಷ್ಟೂ ಭೇಗ ಪರಿಹಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕು ಎಂದರು.

ನೋವಾದರೆ ಆಪರೇಷನ್‌ ಮಾಡಬೇಕು ಹೊರತಾಗಿ ಸಾಯಿಸಬಾರದು : ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಆರೋಪ ಮಾಡಿದ್ದಾರೆ. ಬೇಕಾದರು ಆರೋಪ ತನಿಖೆ ಆಗಲಿ ಅದು ಬಿಟ್ಟು ಇಂದಿರಾ ಕ್ಯಾಂಟಿನ್ ಮುಚ್ಚುವ ಮಾತು ಆಡಬಾರದು. ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆಗೆ ಹಣ ಇಟ್ಟಿಲ್ಲ ಆದರೆ ಇವರ ಸರ್ಕಾರದಲ್ಲಿ ಹಣ ಇಡುವುದಕ್ಕೆ ಏನು ರೋಗ ಎಂದರು.

Conclusion:ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಪರಿಹಾರ ನೀಡಲಿ : ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಸರ್ಕಾರ ಕೂಡಲೆ ಪ್ರತಿ ಮನೆಗೆ ಹತ್ತು ಸಾವಿರ ನೀಡಬೇಕು. ಅನೇಕ ಜನ ಮನೆ ಕಳೆದುಕೊಂಡಿದ್ದು ಅವರಿಗೆ ಐದು ಲಕ್ಷ ಪರಿಹಾರ ಸಾಕಾಗುದಿಲ್ಲ ಎನ್ನುತ್ತಿದ್ದಾರೆ ಕೂಡಲೆ ರಾಜ್ಯ ಸರ್ಕಾರ ಹತ್ತು ಲಕ್ಷ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.