ETV Bharat / state

ಕೃಷ್ಣೆಯ ಮಕ್ಕಳ ದಾಹ ತಣಿಸಲಿದ್ದಾಳೆ ಘಟಪ್ರಭೆ! - etv bharat

ಕೃಷ್ಣಾ ನದಿ ತೀರದ ಜನರ ಸಮಸ್ಯೆಗೆ ಕೊನೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ನಾಳೆ ಘಟಪ್ರಭಾ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಿಡಲು ನಿರ್ಧರಿಸಿದೆ.

ಕೃಷ್ಣೆಯ ಮಕ್ಕಳ ದಾಹ ತಣಿಸಲಿದ್ದಾಳೆ ಘಟಪ್ರಭೆ!
author img

By

Published : May 19, 2019, 8:51 PM IST

ಬೆಳಗಾವಿ: ಕೃಷ್ಣಾ ನದಿ ತೀರದ ಮೂರು ಜಿಲ್ಲೆಗಳ ಜನ-ಜಾನುವಾರು ಹನಿ ನೀರಿಗೂ ತತ್ವಾರ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ನೀರಿನ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ಜಲಾಶಯದಿಂದ ಕೃಷ್ಣ ನದಿ ತೀರದ ಜನರಿಗೆ ನೀರೊದಗಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕ-ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಕಳೆದ 15 ದಿನಗಳಿಂದ ಪತ್ರ ವ್ಯವಹಾರ, ಸರ್ಕಾರ-ಪ್ರತಿಪಕ್ಷಗಳಿಂದ ಮಹಾರಾಷ್ಟ್ರಕ್ಕೆ ನಿಯೋಗ ಹೋದರೂ ಕೊಯ್ನಾ ಮೂಲಕ ಕೃಷ್ಣೆಗೆ ನೀರು ಬಿಡಲು ಮಹಾರಾಷ್ಟ್ರ ಸಮ್ಮತಿಸುತ್ತಿಲ್ಲ. ಹಾಗಾಗಿ ಕೃಷ್ಣಾ ನದಿ ತೀರದ ಜನರ ಸಮಸ್ಯೆಗೆ ಕೊನೆಗೂ ಸ್ಪಂದಿಸಿರುವ ರಾಜ್ಯ ಸರ್ಕಾರ ಘಟಪ್ರಭಾ ಜಲಾಶಯದಿಂದ ನಾಳೆಯಿಂದಲೇ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೃಷ್ಣೆಗೆ ನೀರು ಬಿಡುತ್ತಿದೆ.

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ 94 ಕಿ.ಮೀ ದೂರದ ಕೃಷ್ಣಾ ನದಿಗೆ ನೀರು ಹರಿಯಲು 12 ದಿನಗಳ ಅವಶ್ಯಕತೆ ಇದೆ. ನೀರು ಹರಿಸುವ ಕಾರ್ಯಾಚರಣೆ ನಡೆಯಲಿದೆ. ಈ ಸಂಗತಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಘೋಷಿಸಿದ್ದು, ಶನಿವಾರ ಸಂಜೆ ಬೆಳಗಾವಿಯಲ್ಲಿ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ ಪೊಲೀಸ್, ಹೆಸ್ಕಾಂ ಹಾಗೂ ನೀರಾವರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವಿಶೇಷ ಅಂದ್ರೆ ಘಟಪ್ರಭಾದಿಂದ 94 ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಗೆ ನೀರು ಹರಿಸುತ್ತಿರುವುದು ಇದೇ ಮೊದಲು.

ಫಲ ಕೊಡುವುದೇ ಹೊಸ ಪ್ರಯತ್ನ!

ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಮೂಲಕ ನೀರು ಪಡೆಯುವ ಯತ್ನ ವಿಫಲವಾಗಿದೆ. ಹೀಗಾಗಿ ಜಿಲ್ಲೆಯ ಘಟಪ್ರಭೆಯ ನೀರನ್ನು ಕೃಷ್ಣೆಗೆ ಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ಹೊಸ ಹರಸಾಹಸ ಅನುಷ್ಠಾನ ಸುಲಭದ ಮಾತಲ್ಲ ಎನ್ನಲಾಗುತ್ತಿದೆ. ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಈ ನೀರು ಸಾಗುವಾಗ ಮಧ್ಯೆ ರೈತರು ಕಾಲುವೆಯಲ್ಲಿ ಹಾಕಿರುವ ಪಂಪ್‍ಸೆಟ್​ ಸ್ತಬ್ಧವಾಗಿರಬೇಕು. ರೈತರು ಯಾರೂ ಕಾಲುವೆ ಬಳಿಗೆ ಹಾಯದಂತೆ ಕ್ರಮವಹಿಸುವಂತೆಯೂ ಪ್ರಾದೇಶಿಕ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಪಂಪ್‍ಸೆಟ್ ಬಳಸದಂತೆ ಪೊಲೀಸರು ತಡೆದರೆ, ಹೆಸ್ಕಾಂ ವಿದ್ಯುತ್ ಪೂರೈಕೆ ತಡೆದರೆ ಮಾತ್ರ ಘಟಪ್ರಭೆ ಕೃಷ್ಣೆಯನ್ನು ತಲುಪಲು ಸಾಧ್ಯವಾಗುತ್ತದೆ.

ಘಟಪ್ರಭಾ ನದಿ

ಕೃಷ್ಣೆಗೆ ನೀರು ಹರಿಯುವುದು ಹೇಗೆ:

ಹಿಡಕಲ್ ನಿಂದ ಬಿಡುಗಡೆಯಾಗುವ ನೀರು ಮೊದಲು 22 ಕಿ.ಮೀ ದೂರದ ಮುಖ್ಯ ಕಾಲುವೆ ಮೂಲಕ ಧೂಪದಾಳ ವೇರ್ ಸೇರಬೇಕು. ಅಲ್ಲಿಂದ 50 ಕಿಮೀ ಕಾಲುವೆ ಮೂಲಕ ಮುಗಳಖೋಡ ವಿತರಣಾ ಕೇಂದ್ರ ತಲುಪಬೇಕು. ಬಳಿಕ ನಿಡಗುಂದಿ ವಿತರಣಾ ಕೇಂದ್ರದಿಂದ ಅಥಣಿ ತಾಲೂಕಿನ ಶೇಗುಣಸಿವರೆಗೆ ಮತ್ತೆ 22 ಕಿ.ಮೀ ಸಾಗಬೇಕು. ಹೀಗೆ 94 ಕಿ.ಮೀವರೆಗೆ ನೀರು ಸಾಗಿದ್ರೆ ಮಾತ್ರ ಘಟ್ರಪ್ರಭೆ ಕೃಷ್ಣೆಗೆ ಸೇರಲಿದೆ. ಸದ್ಯ ಹಿಡಕಲ್ ಜಲಾಶಯದಲ್ಲಿ 4 ಟಿಎಂಸಿ ನೀರಿದ್ದು, 2 ಟಿಎಂಸಿ ನೀರನ್ನು ಬಾಗಲಕೋಟೆಗೆ ನೀಡಲು ನಿರ್ಧರಿಸಲಾಗಿದೆ. ಇನ್ನು 1 ಟಿಎಂಸಿ ಹುಕ್ಕೇರಿ, ಸಂಕೇಶ್ವರಗೆ ಮೀಸಲಿಡಬೇಕು. ಒಂದು ಟಿಎಂಸಿ ನೀರು ಮಾತ್ರ ಘಟಪ್ರಭಾ ಮೂಲಕ ಕೃಷ್ಣಾ ನದಿಗೆ ಕಾಲುವೆ ಮೂಲಕ ಹೋಗಲಿದೆ.

Intro:ವಿಶೇಷ ವರದಿ
-----
ಕೃಷ್ಣೆಯ ಮಕ್ಕಳ ದಾಹ ತಣಿಸಲಿದ್ದಾಳೆ ಘಟಪ್ರಭೆ!
-94 ಕಿ.ಮೀ ಹರಿದು ಕೃಷ್ಣಾ ಸೇರಲಿದ್ದಾಳೆ ಘಟಪ್ರಭೆ; ಫಲಕೊಡುವುದೇ ಸರ್ಕಾರದ ಹೊಸ ಪ್ರಯತ್ನ 

ಬೆಳಗಾವಿ:
ಕೃಷ್ಣಾ ನದಿ ತೀರದ ಮೂರು ಜಿಲ್ಲೆಗಳ ಜನ-ಜಾನುವಾರು ಹನಿ ನೀರಿಗೂ ತಾತ್ಸರ ಎದುರಿಸುತ್ತಿದ್ದರೂ ಮಹಾರಾಷ್ಟ್ರ ಸರ್ಕಾರ ನೀರಿಗೆ ನೀರು ಎಂದು ಮೊಂಡುತನ ಪ್ರದರ್ಶಿಸುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಕಳೆದ 15 ದಿನಗಳಿಂದ ಪತ್ರ ವ್ಯವಹಾರ, ಸರ್ಕಾರ-ಪ್ರತಿಪಕ್ಷಗಳಿಂದ ಮಹಾರಾಷ್ಟ್ರಕ್ಕೆ ನಿಯೋಗ ಹೋದರೂ ಕೊಯ್ನಾ ಮೂಲಕ ಕೃಷ್ಣೆಗೆ ನೀರು ಬಿಡಲು ಮಹಾರಾಷ್ಟ್ರ ಸಮ್ಮತಿಸುತ್ತಿಲ್ಲ. ಕೃಷ್ಣಾ ನದಿ ತೀರದ ಜನರ ಸಮಸ್ಯೆಗೆ ಕೊನೆಗೂ ಸ್ಪಂದಿಸಿರುವ ರಾಜ್ಯ ಸರ್ಕಾರ ನಾಳೆ ಘತಪ್ರಭಾ ಜಲಾಶಯದಿಂದ 94 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರಕ್ಕೆ ನೀರು ಒಯ್ಯಲು ನಿರ್ಧರಿಸಿದೆ. ನಾಳೆಯಿಂದಲೇ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಘಟಪ್ರಭೆಯಿಂದ ಕೃಷ್ಣೆಗೆ ನೀರು ಬಿಡಲಾಗುತ್ತಿದೆ. 

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ 94 ಕಿ.ಮೀ ದೂರದ ಕೃಷ್ಣಾ ನದಿಗೆ 12 ದಿನಗಳ ಅವಶ್ಯಕತೆ ಇದ್ದು, ನೀರು ಹರಿಸುವ ಕಾರ್ಯಾಚರಣೆ ನಡೆಯಲಿದೆ. ಈ ಸಂಗತಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಘೋಷಣೆ ಮಾಡಿದ್ದು, ಶನಿವಾರ ಸಂಜೆ ಬೆಳಗಾವಿಯಲ್ಲಿ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ ಪೊಲೀಸ್, ಹೆಸ್ಕಾಂ ಹಾಗೂ  ನೀರಾವರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವಿಶೇಷ ಅಂದ್ರೆ ಘಟಪ್ರಭಾದಿಂದ 94 ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಗೆ ನೀರು ಹರಿಸುತ್ತಿರುವುದು ಇದೆ ಮೊದಲು. 

ಫಲ ಕೊಡುವುದೇ ಹೊಸ ಪ್ರಯತ್ನ!

ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಮೂಲಕ ನೀರು ಪಡೆಯುವ ಯತ್ನ ವಿಫಲಗೊಂಡಿದೆ. ಹೀಗಾಗಿ ಜಿಲ್ಲೆಯ ಘಟಪ್ರಭೆಯ ನೀರನ್ನು ಕೃಷ್ಣೆಗೆ ಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಘಟಪ್ರಭಾ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಸುವ ನಿರ್ಧಾರ ಇದೆ ಮೊದಲು. ಸರ್ಕಾರದ ಈ ಹೊಸ ಹರಸಾಹಸ ಅನುಷ್ಠಾನ ಸುಲಭದ ಮಾತಲ್ಲ ಎನ್ನಲಾಗುತ್ತಿದೆ. ಘಟಪ್ರಭಾ ಎಡದಂದೆ ಕಾಲುವೆ ಮೂಲಕ ಈ ನೀರು ಸಾಗುವಾಗ ಮಧ್ಯೆ ರೈತರು ಕಾಲುವೆಯಲ್ಲಿ ಹಾಕಿರುವ ಪಂಪ್‍ಸೆಟ್ ಸ್ತಬ್ಧವಾಗಿರಬೇಕು. ರೈತರು ಯಾರೂ ಕಾಳುವೆ ಬಳಿಗೆ ಹಾಯದಂತೆ ಕ್ರಮವಹಿಸುವಂತೆಯೂ ಪ್ರಾದೇಶಿಕ ಆಯುಕ್ತರು ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಪಂಪ್‍ಸೆಟ್ ಬಳಸದಂತೆ ಪೊಲೀಸರು ತಡೆದರೆ, ಹೆಸ್ಕಾಂ ವಿದ್ಯುತ್ ಪೂರೈಕೆ ತಡೆದ್ರೆ ಮಾತ್ರ ಘಟಪ್ರಭೆ ಕೃಷ್ಣೆಗೆ ಮುಟ್ಟಲು ಸಾಧ್ಯ.   

ಕೃಷ್ಣೆಗೆ ನೀರು ಹೋಗುದು ಹೇಗೆ ಗೊತ್ತಾ?

ಹಿಡಕಲ್ ನಿಂದ ಬಿಡುಗಡೆಯಾಗುವ ನೀರು ಮೊದಲು 22 ಕಿ.ಮೀ ದೂರದ ಮುಖ್ಯ ಕಾಲುವೆ ಮೂಲಕ ಧೂಪದಾಳ ವೇರ್ ಸೇರಸಬೇಕು. ಅಲ್ಲಿಂದ 50 ಕಿಮೀ ಕಾಲುವೆ ಮೂಲಕ ಮುಗಳಖೋಡ ವಿತರಣಾ ಕೇಂದ್ರ ತಲುಪಬೇಕು. ಬಳಿಕ ನಿಡಗುಂದಿ ವಿತರಣಾ ಕೇಂದ್ರದಿಂದ ಅಥಣಿ ತಾಲೂಕಿನ ಶೇಗುಣಸಿವರೆಗೆ ಮತ್ತೇ 22 ಕಿ.ಮೀ ಸಾಗಬೇಕು. ಹೀಗೆ 94 ಕಿ.ಮೀವರೆಗೆ ನೀರು ಸಾಗಿದ್ರೆ ಮಾತ್ರ ಘಟ್ರಪ್ರಭೆ ಕೃಷ್ಣೆಗೆ ಸೇರಲಿದೆ. ಸಧ್ಯ ಹಿಡಕಲ್ ಜಲಾಶಯದಲ್ಲಿ 4 ಟಿಎಂಸಿ ನೀರಿದ್ದು, 24ಕ್ಕೆ 2 ಟಿಎಂಸಿ ನೀರನ್ನು ಬಾಗಲಕೋಟೆಗೆ ನೀಡಲು ನಿರ್ಧರಿಸಲಾಗಿದೆ. ಇನ್ನು 1 ಟಿಎಂಸಿ ಹುಕ್ಕೇರಿ, ಸಂಕೇಶ್ವರಗೆ ಮೀಸಲಿಡಬೇಕು. ಒಂದು ಟಿಎಂಸಿ ನೀರು ಮಾತ್ರ ಘಟಪ್ರಭಾ ಮೂಲಕ ಕೃಷ್ಣಾ ನದಿಗೆ ಕಾಲುವೆ ಮೂಲಕ ಹೋಗಲಿದೆ. 
---
KN_BGM_Krishnege_Gathaprabha_Niru_Story_Anil_7201786

KN_BGM_Krishnege_Gathaprabha_Niru_Story_visual1_Anil

KN_BGM_Krishnege_Gathaprabha_Niru_Story_visual2_Anil
Body:ವಿಶೇಷ ವರದಿ

Conclusion:ವಿಶೇಷ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.