ಚಿಕ್ಕೋಡಿ : ತಾಲೂಕಿನಲ್ಲಿ ಗಣೇಶೋತ್ಸವ ಸಂಭ್ರಮ ಜೋರಾಗಿದೆ. ಹೀಗಾಗಿ, ವಿನಾಯಕನ ಮೂರ್ತಿಗಳ ಬೆಲೆ ಗಗನಕ್ಕೇರಿದೆ. ಪ್ರತಿವರ್ಷ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳು ಬರುತ್ತಿದ್ದವು. ಆದರೆ, ಈ ವರ್ಷ ನಿರಂತರ ಮಳೆಗೆ ನಲುಗಿರುವ ಮಹಾರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆಯೂ ಉಲ್ಬಣವಾಗಿದೆ. ಹೀಗಾಗಿ, ರಾಜ್ಯಕ್ಕೆ ಸಂಪರ್ಕ ಕಡಿತ ಮಾಡಲಾಗಿದೆ.
ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ ತಾಲೂಕಿನ ವಿವಿಧ ಗ್ರಾಮಗಳ ಗಣೇಶ ಮಂಡಳಿ ಹಾಗೂ ಸಣ್ಣಪುಟ್ಟ ಗಣೇಶ ಮೂರ್ತಿಗಳನ್ನು ತೆಗೆದುಕೊಳ್ಳುವ ಜನರು ಮಹಾರಾಷ್ಟ್ರದ ಸಾಂಗಲಿ, ಕೊಲ್ಲಾಪುರ ಜಿಲ್ಲೆಯನ್ನು ಅವಲಂಬಿಸಿದ್ದರು.
ಮಹಾರಾಷ್ಟ್ರದ ಮಾದರಿಯಲ್ಲಿ ಚಿಕ್ಕೋಡಿ ಉಪವಿಭಾಗದಲ್ಲಿಯೂ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ, ಇದೀಗ ಸಂಪರ್ಕ ಕಡಿತ ಹಿನ್ನೆಲೆ ಗಣೇಶ ಮೂರ್ತಿಗಳ ಬೆಲೆ ದುಬಾರಿಯಾಗಿದೆ.
ಕಳೆದ ವರ್ಷ 500-700 ರೂ. ಮುಖಬೆಲೆಯ ಗಣೇಶ ಮೂರ್ತಿಗಳು ಈ ಬಾರಿ 1500-2000 ರೂಪಾಯಿಗೆ ಏರಿಕೆ ಕಂಡಿವೆ. ಇದರ ಜೊತೆಗೆ ಪಟಾಕಿ, ಹುಣ್ಣು, ಹೂ, ಅಲಂಕಾರಿಕ ವಸ್ತುಗಳು ಕೂಡ ದುಬಾರಿ ಆಗಿವೆ.
ಓದಿ: ಕೋವಿಡ್ ನಿಯಮಗಳನ್ನು ಪಾಲಿಸಿ ‘ದೊಡ್ಡ ಗಣಪತಿ’ ದರ್ಶನ ಪಡೆದ ಭಕ್ತಗಣ