ETV Bharat / state

ಇನ್ಶೂರೆನ್ಸ್ ಪಾಲಿಸಿದಾರರಿಗೆ ವಂಚನೆ: ಬೆಳಗಾವಿಯಲ್ಲಿ ಆರೋಪಿ ಬಂಧನ

ಮೆಟಲ್ ಲೈಫ್ ಇನ್ಶೂರೆನ್ಸ್ ಕಂಪನಿಯ ಪಾಲಿಸಿ(ವಿಮೆ)ದಾರರನ್ನು ವಂಚಿಸಿ ಈತ 26 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದ ಆರೋಪಿಯನ್ನು ಬೆಳಗಾವಿಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ‌. ಶಾಸ್ತ್ರಿನಗರದ ಮಧುಕರ್ ವಿಲಾಸ್ ಸುಪ್ಲೆ (31) ಬಂಧಿತ ಆರೋಪಿ.

author img

By

Published : Mar 11, 2021, 12:26 PM IST

belgavi
ಇನ್ಸೂರೆನ್ಸ್ ಪಾಲಿಸಿದಾರರಿಗೆ ವಂಚನೆ: ಬೆಳಗಾವಿಯಲ್ಲಿ ಆರೋಪಿಯ ಬಂಧನ

ಬೆಳಗಾವಿ: ಜಾರಿ ನಿರ್ದೇಶನಾಲಯ ಹೆಸರಲ್ಲಿ ನಕಲಿ ನೋಟಿಸ್ ತಯಾರಿಸಿ ಇಬ್ಬರು ನ್ಯಾಯಾಧೀಶರು ‌ಹಾಗೂ 7 ಬ್ಯಾಂಕ್​​ಗಳಿಗೆ ನೋಟಿಸ್ ನೀಡಿದ್ದ ವಂಚಕನನ್ನು ಬೆಳಗಾವಿಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ‌.

ಡಿಸಿಪಿ ವಿಕ್ರಮ್​ ಆಮ್ಟೆ

ಶಾಸ್ತ್ರಿನಗರದ ಮಧುಕರ್ ವಿಲಾಸ್ ಸುಪ್ಲೆ (31) ಬಂಧಿತ ಆರೋಪಿ. ಈತ ಮೆಟಲ್ ಲೈಫ್ ಇನ್ಶೂರೆನ್ಸ್ ಕಂಪನಿಯ ಪಾಲಿಸಿ(ವಿಮೆ)ದಾರರನ್ನು ವಂಚಿಸಿ ಈತ 26 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದ. ಪಿಎನ್​ಬಿ ಇನ್ಶೂರೆನ್ಸ್ ಕಂಪನಿಯಲ್ಲಿ (ಎಆರ್​ಎಂ) ಅಸಿಸ್ಟೆಂಟ್ ರಿಲೇಶನ್ಸ್ ಶಿಪ್ ಮ್ಯಾನೇಜರ್ ಆಗಿ‌ ಕೆಲಸ‌ ಮಾಡುತ್ತಿದ್ದ. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಪಿಎನ್​ಬಿ ಇನ್ಶೂರೆನ್ಸ್ ಕಂಪನಿಯಲ್ಲಿ 12 ಜನ ಪಾಲಿಸಿದಾರರನ್ನು ವಂಚಿಸಿ ಅಂದಾಜು 26 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಪಿಎನ್​ಬಿ‌ ಮೆಟಲ್ ಲೈಪ್ ಇನ್ಸೂರೆನ್ಸ್ ಕಂಪನಿಯ ಹಿರಿಯ ಅಧಿಕಾರಿ ಮಾ.8ರಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಇಎನ್‌ ಠಾಣೆಯ ಪಿಐ ಆರ್.ಬಿ.ಗಡ್ಡೇಕರ್ ನೇತೃತ್ವದ ತಂಡ ಪ್ರಕರಣದ ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ‌. ಅಲ್ಲದೇ ಕೃತ್ಯಕ್ಕೆ ಬಳಸಿದ ಡುಬ್ಲಿಕೇಟ್ ಸ್ಯ್ಟಾಂಪ್ ಸೀಲ್, ಬಾಂಡ್‌ ಪೇಪರ್, ಶಿಫ್ಟ್ ಕಾರು, ಇನೋವಾ ಕಾರು, ರಬ್ಬರ್ ಸ್ಟ್ಯಾಂಪ್ ಮಷೀನ್, ಪಿಎನ್​ಬಿ ಇನ್ಶೂರೆನ್ಸ್​​ ಕಂಪನಿಯ ಬಾಂಡ್ ಪೇಪರ್ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇಡಿ ಹೆಸರಲ್ಲಿ ಬ್ಯಾಂಕ್, ನ್ಯಾಯಾಧೀಶರಿಗೆ ನೋಟಿಸ್:

ಬಂಧಿತ ಆರೋಪಿ ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ನಕಲಿ ನೋಟಿಸ್‍ಗಳನ್ನು ತಯಾರಿಸಿ ಬ್ಯಾಂಕ್ ಗ್ರಾಹಕರ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬೆಳಗಾವಿ ಜಿಲ್ಲೆಯ ಒಟ್ಟು 7 ಬ್ಯಾಂಕ್​ಗಳಿಗೆ ನೋಟಿಸ್ ಕೊಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಯೂನಿಯನ್ ಬ್ಯಾಂಕ್‍ಗೆ 3, ಐಡಿಬಿಐ ಮತ್ತು ಎಸ್‍ಬಿಐ ಬ್ಯಾಂಕ್‌,‌ ಖಾನಾಪುರದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಬ್ಯಾಂಕಿಗೆ ತಲಾ ಒಂದು ನೋಟಿಸ್ ನೀಡಿದ್ದನು. ಈ ಬಗ್ಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಮೆದಾರರ ಬ್ಯಾಂಕ್ ಖಾತೆಯ ಮಾಹಿತಿ ಪಡೆದಿರುವ ಈತ, ಹಣ ಕೇಳಬಾರದೆಂದು ಖಾತೆದಾರರ ಬ್ಯಾಂಕಿಗೆ ಇಡಿ ನೋಟಿಸ್ ನೀಡಿದ್ದಾನೆ. ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ಈ ರೀತಿ ನಕಲಿ ನೋಟಿಸ್​ಗಳನ್ನು ತಯಾರಿಸಿ ನೀಡುತ್ತಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಇತ್ತ ಇಡಿ ನೋಟಿಸ್ ಆಧಾರದ ಮೇಲೆ ಗ್ರಾಹಕರ ಖಾತೆಗಳನ್ನು ಬ್ಯಾಂಕ್ ಅಧಿಕಾರಿಗಳು ಸ್ಥಗಿತಗೊಳಿಸಿದ್ದರು. ಈ ಬಗ್ಗೆ ಗ್ರಾಹಕರು ವಿಚಾರಿಸಿದಾಗ ಬ್ಯಾಂಕ್ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.‌ ನೋಟಿಸ್ ಫೇಕ್ ಎಂಬುವುದು ಗೊತ್ತಾಗುತ್ತಿದ್ದಂತೆ ದೂರು ನೀಡಲಾಗಿತ್ತು. ಇದಲ್ಲದೇ ಜಾರಿ ನಿರ್ದೇಶನಾಲಯದ ಹೆಸರಿನಲ್ಲಿ ನಕಲಿ ನೋಟಿಸ್​ಗಳನ್ನು ತಯಾರಿಸಿ ನಾಲ್ವರು ವಕೀಲರ ಹೆಸರು ನಮೂದಿಸಿ ಇಬ್ಬರು ನ್ಯಾಯಾಧೀಶರಿಗೆ ನೋಟಿಸ್ ನೀಡಿದ್ದ ಎಂಬುದು ‌ತನಿಖೆಯಿಂದ ದೃಢಪಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.